ETV Bharat / entertainment

'ನಾನು ಅನ್​​​ಫಿಟ್​​ ಅನಿಸ್ತಿದೆ': ಬಿಗ್​ ಬಾಸ್​ ಮನೆಯಲ್ಲಿ ಧನರಾಜ್​ ಕಣ್ಣೀರು; ಬ್ಯಾಗ್​ ಪ್ಯಾಕ್ ಮಾಡಲು ಸಲಹೆ - BIGG BOSS KANNADA 11 PROMO

ಬಿಗ್​ ಬಾಸ್​ ಮನೆಯಲ್ಲಿ ಧನರಾಜ್ ಬಹಳ​ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

Bigg Boss Kannada 11
ಬಿಗ್​ ಬಾಸ್​ ಕನ್ನಡ ಸೀಸನ್​​ 11 (Photo: Bigg Boss Poster)
author img

By ETV Bharat Entertainment Team

Published : Oct 15, 2024, 10:27 AM IST

ಬಿಗ್​ ಬಾಸ್​ ಕನ್ನಡ ಸೀಸನ್​​ 11 ಮೂರನೇ ವಾರದಲ್ಲಿದೆ. ಈ ಸೀಸನ್​ನಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ವಾರದ ಎಲಿಮಿನೇಷನ್​ನ ನಾಮಿನೇಷನ್​​​ ಪ್ರಕ್ರಿಯೆಯೂ ವಿಭಿನ್ನವಾಗಿದೆ. ಎಲಿಮಿನೇಷನ್​ಗಾಗಿ ಈಗಾಗಲೇ ನಾಮಿನೇಷನ್​​ ಆರಂಭಗೊಂಡಿದೆ. ಆದರೆ ಈ ನಾಮಿನೇಷನ್​​ ಪ್ರಕ್ರಿಯೆಯೇ ದೊಡ್ಡ ಸೀನ್​ಗಳನ್ನು ಕ್ರಿಯೇಟ್​​ ಮಾಡುತ್ತಿದೆ.

ಹೌದು, ನಿನ್ನೆಯ ಸಂಚಿಕೆಯಲ್ಲಿ ಅನುಷಾ ಅವರು ನಾಮಿನೇಟ್​ ಆಗಿದ್ದಾರೆ. ಕಹಿಸತ್ಯ ಎಂಬ ಶೀರ್ಷಿಕೆಯಡಿ ಈ ನಾಮಿನೇಷನ್​ ಪ್ರೊಸೆಸ್ ಶುರುವಾಗಿದೆ. ಅದರಂತೆ, ಕ್ಯಾಪ್ಟನ್​​ ಶಿಶಿರ್​ ಅವರು ಅನುಷಾ ಅವರನ್ನು ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಇದು ಅನುಷಾ ಮತ್ತು ಐಶ್ವರ್ಯಾ ಅವರ ಜಗಳಕ್ಕೆ ಕಾರಣವಾಗಿದೆ. ಇಂದಿನ ಸಂಚಿಕೆಯಲ್ಲೂ ಕ್ಯಾಪ್ಟನ್​ ಅವರಿಗೆ ನೇರ ನಾಮಿನೇಟ್​ ಮಾಡುವ ಅವಕಾಶ ಸಿಕ್ಕಿದ್ದು, ಧನರಾಜ್​ ಆಚಾರ್​ ಅವರನ್ನು ನಾಮಿನೇಟ್​​ ಮಾಡಿದ್ದಾರೆ. ಇದು ಧನರಾಜ್​ ಕುಗ್ಗುವಿಕೆಗೆ ಕಾರಣವಾಗಿದೆ.

''ಅತಿಥಿಯೋ, ಆಟಗಾರನೋ? ಫುಲ್ ಕನ್‌ಫ್ಯೂಶನ್!'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್​​ನೊಂದಿಗೆ ಬಿಗ್​ ಬಾಸ್​ ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​ಫಾರ್ಮ್​​ಗಳಲ್ಲಿ ಪ್ರೋಮೋ ಅನಾವರಣಗೊಳಿಸಿದೆ.

ನಾಮಿನೇಟ್​ ಮಾಡಿ, ಸೂಕ್ತ ಕಾರಣ ನೀಡಿ: ಸದಸ್ಯರ ಪೈಕಿ ಒಬ್ಬರನ್ನು ನೀವು ನಾಮಿನೇಟ್​ ಮಾಡಬೇಕು ಮತ್ತು ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕೆಂದು ಬಿಗ್​ ಬಾಸ್​ ಕಡೆಯಿಂದ ಕ್ಯಾಪ್ಟನ್​​​ ಶಿಶಿರ್​ಗೆ ಆದೇಶ ಬಂದಿದೆ. ಅದರಂತೆ ಶಿಶಿರ್​​ ಅವರು ಧನರಾಜ್​ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಅವರಿನ್ನೂ ಕನ್​ಫ್ಯೂಶನ್​​​ನಲ್ಲಿದ್ದಾರೆ. ಈ ಮನೆಯಲ್ಲಿ ಆಟಗಾರನ ಅಥವಾ ಗೆಸ್ಟ್ ಆ ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ ಎಂದು ಶಿಶಿರ್​ ತಮ್ಮ ಕಾರಣಗಳನ್ನು ಕೊಟ್ಟಿದ್ದಾರೆ. ಅದನ್ನು ವಿವರಿಸಬಹುದಾ? ಎಂದು ಧನರಾಜ್ ಕೇಳಿಕೊಂಡಿದ್ದಾರೆ.

ನೀವೆಲ್ಲೋ ಕಳೆದು ಹೋಗಿದ್ದೀರಾ ಅನ್ನೋದು ನನ್ನ ಅಭಿಪ್ರಾಯ ಎಂದು ವಿವರಿಸಿದ್ದಾರೆ. ಅದಕ್ಕೆ ಮಚ್ಚಾ ಮಚ್ಚಾ ಬಚ್ಚಲ್​ ಮನೆ ಸ್ವಚ್ಛ ಎಂದು ಹೇಳುತ್ತಲೇ ಧನರಾಜ್​ ಕಹಿ ಜ್ಯೂಸ್​ ಅನ್ನು ಕುಡಿದಿದ್ದಾರೆ. ನಂತರ ಈ ಬಗ್ಗೆ ಚಿಂತಿಸತೊಡಗಿದ ಧನರಾಜ್ ಅವರು, ಆಕಡೆ ಮಾತನಾಡುತ್ತೀನಿ, ಈಕಡೆ ಮಾತನಾಡೋದೂ ಇಲ್ಲ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ನಾನೇ ಅನ್​ಫಿಟ್​ ಅನ್ಸೋಕೆ ಶುರುವಾಗೋಗಿದೆ ನನ್ ಮನ್ಸಲ್ಲೇ ಎಂದು ಕೊರಗಿದ್ದಾರೆ.

ಕೆಲ ಕಿವಿ ಮಾತು ಹೇಳಿದ ತುಕಾಲಿ ಸಂತೋಷ್: ಇನ್ನೂ ಕಳೆದ ಸಂಚಿಕೆಯಲ್ಲಿ ಮಾನಸಾ ಅವರ ಪತಿ ತುಕಾಲಿ ಸಂತೋಷ್​ (ಕಳೆದ ಸೀಸನ್​​ನ ಫೈನಲಿಸ್ಟ್) ಕರೆ ಮಾಡಿ ಮನೆ ಮಂದಿಗೆ ಕೆಲ ಕಿವಿ ಮಾತು ಹೇಳಿದ್ದಾರೆ. ಮಾನಸಾ ಮೂಲಕ ಒಂದಿಷ್ಟು ಸಲಹೆಗಳನ್ನು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ಧನರಾಜ್​ ಅವರಿಗೆ ಯಾವುದೇ ಕಿವಿಮಾತು ಬಂದಿರಲಿಲ್ಲ. ಅದಾಗ್ಯೂ ಮಾನಸಾ ಅವರ ತಮಾಷೆ ಮಾಡಲು ಮುಂದಾಗಿದ್ದಾರೆ. ಧನರಾಜ್​ ಅವರೇ ಲಗೇಜ್​ ಪ್ಯಾಕ್​ ಮಾಡಬೇಕಂತೆ. ಮಿಡಲ್​ ವೀಕ್​ ಎಲಿಮಿನೇಷನ್ ಇದ್ದು, ಕೊನೆವರೆಗೂ ನೀವು ಇರೋದು ಡೌಟ್​​ ಎಂದು ತಿಳಿಸಿದ್ದಾರೆ. ಮನೆಯವರು ಆತಂಕಕ್ಕೆ ಒಳಗಾಗಿದ್ದು, ನಂತರ ಇದು ತಮಾಷೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಛೇಡಿಸಿದ ಜಗದೀಶ್: 'ಕೇಳೋರಿಗೆ ಹೇಳ್ಬೋದು, ಕೇಳದೇ ಇರೋರಿಗೆ ಏನ್ಮಾಡೋದು' ಎಂದ ಸ್ಪರ್ಧಿಗಳು! ಪ್ರೋಮೋ ನೋಡಿ

ಸೋಷಿಯಲ್​ ಮೀಡಿಯಾದಲ್ಲಿ ಈ ಪ್ರೋಮೋ ಸಖತ್​ ವೈರಲ್​ ಆಗುತ್ತಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಧನರಾಜ್​ ಅಭಿಮಾನಿಗಳು ಅವರಿಗೆ ಧೈರ್ಯ ತುಂಬುತ್ತಾ ಬೆಂಬಲ ಕೊಡುತ್ತಿದ್ದಾರೆ. ಅವರು ಆಟ ಹೇಗೆ ಮುಂದುವರಿಸಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿದೆ.

ಇದನ್ನೂ ಓದಿ: ಸುದೀಪ್​ ಗುಡ್​ ಬೈ ಬೆನ್ನಲ್ಲೇ ಮನೆಯಿಂದ ಹೊರನಡೆದ ಬಿಗ್​ ಬಾಸ್​​! ಸ್ಪರ್ಧಿಗಳ ಉಡಾಫೆತನದ ವಿರುದ್ಧ ರೊಚ್ಚಿಗೆದ್ದ Bigg Boss

ಇನ್ನೂ ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​​ ನಿರೂಪಣೆಗೆ ವಿದಾಯ ಘೋಷಿಸಿದ್ದಾರೆ. ಬಿಗ್​ ಬಾಸ್​, ಅದರಲ್ಲೂ ವೀಕೆಂಡ್​ ಶೋ ಕಿಚ್ಚ ಸುದೀಪ್ ಅವರ​ ನಿರೂಪಣೆ ಶೈಲಿಯಿಂದಲೇ ಸಾಕಷ್ಟು ಜನಪ್ರಿಯವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಆದ್ರೆ ಭಾನುವಾರ ರಾತ್ರಿ ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಬಿಗ್​ ಬಾಸ್​ ಕನ್ನಡ ಸೀಸನ್​ 11 ನನ್ನ ಕೊನೆಯ ಸೀಸನ್ ಆಗಿರುತ್ತದೆ ಎಂದು ತಿಳಿಸಿದ್ದಾರೆ. ಇದು ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ವೀಕ್ಷಕರಿಗೆ ನುಂಗಲಾರದ ತುತ್ತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.