ಹೈದರಾಬಾದ್: 69ನೇ SOBHA ಫಿಲ್ಮ್ ಫೇರ್ ಅವಾರ್ಡ್ಸ್ ಹೈದರಾಬಾದ್‌ನ ಜೆಆರ್‌ಸಿ ಕನ್ವೆನ್ಷನ್ ಸೆಂಟರ್ನಲ್ಲಿ ಶನಿವಾರ ಅದ್ಧೂರಿಯಾಗಿ ನಡೆಯಿತು. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟ, ನಟಿಯರು ಮತ್ತು ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು ಈ ವರ್ಷ ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಕ್ಷಿತ್ ಶೆಟ್ಟಿ ಮುಡಿಗೇರಿಸಿಕೊಂಡಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ನಟನೆಗೆ ಈ ಪ್ರಶಸ್ತಿ ಸಂದಿದೆ.
ಕನ್ನಡ ಚಿತ್ರರಂಗದ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ:
- ಅತ್ಯುತ್ತಮ ಚಿತ್ರ: ಡೇರ್‌ಡೆವಿಲ್ ಮುಸ್ತಫಾ
- ಅತ್ಯುತ್ತಮ ನಿರ್ದೇಶಕ: ಹೇಮಂತ್ ಎಂ ರಾವ್ (ಸಪ್ತ ಸಾಗರದಾಚೆ ಎಲ್ಲೋ)
- ಅತ್ಯುತ್ತಮ ಚಿತ್ರ ವಿಮರ್ಶಕರು: ಪೃಥ್ವಿ ಕೊಣನೂರು (ಪಿಂಕಿ ಎಲ್ಲಿ ಸಿನಿಮಾ)
- ಅತ್ಯುತ್ತಮ ನಟ : ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ)
- ಅತ್ಯುತ್ತಮ ನಟಿ: ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆ ಹನಿಯೇ..)
- ಅತ್ಯುತ್ತಮ ನಟ (ಕ್ರಿಟಿಕ್ಸ್): ಪೂರ್ಣಚಂದ್ರ ಮೈಸೂರು (ಆರ್ಕೆಸ್ಟ್ರಾ ಮೈಸೂರು)
- ಅತ್ಯುತ್ತಮ ನಟಿ (ಕ್ರಿಟಿಕ್ಸ್): ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ)
- ಅತ್ಯುತ್ತಮ ಸರ್ಪೋಟಿಂಗ್ ನಟ: ರಂಗಾಯಣ ರಘು (ಟಗರು ಪಲ್ಯ)
- ಅತ್ಯುತ್ತಮ ಸರ್ಪೋಟಿಂಗ್ ನಟಿ: ಸುಧಾ ಬೆಳವಾಡಿ (ಕೌಸಲ್ಯಾ ಸುಪ್ರಜಾ ರಾಮ)
- ಅತ್ಯುತ್ತಮ ಸಂಗೀತ ಆಲ್ಬಂ: ಚರಣ್ ರಾಜ್ (ಸಪ್ತ ಸಾಗರದಾಚೆ ಎಲ್ಲೋ)
- ಅತ್ಯುತ್ತಮ ಸಾಹಿತ್ಯ: ಬಿ.ಆರ್. ಲಕ್ಷ್ಮಣ್ ರಾವ್ (ಯಾವ ಚುಂಬಕ, ಚೌಕ ಬಾರಾ)
- ಅತ್ಯುತ್ತಮ ಹಿನ್ನೆಲೆ ಗಾಯಕ : ಕಪಿಲ್ ಕಪಿಲನ್ (ನದಿಯೇ ಓ ನದಿಯೇ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ)
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರೀಲಕ್ಷ್ಮಿ ಬೆಳ್ಮಣ್ಣು (ಕಡಲನು ಕಾಣ ಹೊರಟಿರೋ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ)
- ಅತ್ಯುತ್ತಮ ಡಿಬಟ್: ಅಮೃತಾ ಪ್ರೇಮ್ (ಟಗರು ಪಲ್ಯ)
- ಅತ್ಯುತ್ತಮ ಡಿಬಟ್: ಶಿಶಿರ್ ಬೈಕಾಡಿ (ಡೇರ್‌ಡೆವಿಲ್ ಮುಸ್ತಫಾ)
- ಜೀವಮಾನ ಸಾಧನೆ ಪ್ರಶಸ್ತಿ: ಶ್ರೀನಾಥ್
ತೆಲುಗು ಚಿತ್ರರಂಗದ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:
- ಅತ್ಯುತ್ತಮ ಚಿತ್ರ: ಬಳಗಂ
- ಅತ್ಯುತ್ತಮ ಚಿತ್ರ (ಕ್ರಿಟಿಕ್ಸ್): ಸಾಯಿ ರಾಜೇಶ್ (ಬೇಬಿ)
- ಅತ್ಯುತ್ತಮ ನಿರ್ದೇಶಕ: ವೇಣು ಯೆಲ್ದಂಡಿ (ಬಳಗಂ)
- ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಶ್ರೀಕಾಂತ್ ಒಡೆಲಾ (ದಸರಾ), ಶೌರ್ಯುವ್ (ಹಾಯ್ ನಾನಾ)
- ಅತ್ಯುತ್ತಮ ನಟ: ನಾನಿ (ದಸರಾ)
- ಅತ್ಯುತ್ತಮ ನಟ (ಕ್ರಿಟಿಕ್ಸ್): ಪ್ರಕಾಶ್ ರಾಜ್ (ರಂಗ ಮಾರ್ತಾಂಡ), ನವೀನ್ ಪೋಲಿಶೆಟ್ಟಿ (ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ)
- ಅತ್ಯುತ್ತಮ ನಟ : ಕೀರ್ತಿ ಸುರೇಶ್ (ದಸರಾ)
- ಅತ್ಯುತ್ತಮ ನಟಿ (ಕ್ರಿಟಿಕ್ಸ್): ವೈಷ್ಣವಿ ಚೈತನ್ಯ (ಬೇಬಿ)
- ಅತ್ಯುತ್ತಮ ಸರ್ಪೋಟಿಂಗ್ ನಟ: ಬ್ರಹ್ಮಾನಂದಂ (ರಂಗ ಮಾರ್ತಾಂಡ), ರವಿತೇಜ (ವಾಲ್ಟೇರ್ ವೀರಯ್ಯ)
- ಅತ್ಯುತ್ತಮ ಪೋಷಕ ನಟಿ: ರೂಪಾ ಲಕ್ಷ್ಮಿ (ಬಳಗಂ)
- ಅತ್ಯುತ್ತಮ ಡಿಬಟ್: ಸಂಗೀತ್ ಶೋಭನ್ (ಮ್ಯಾಡ್)
- ಅತ್ಯುತ್ತಮ ಸಂಗೀತ ಆಲ್ಬಂ: ವಿಜಯ್ ಬಲ್ಗಾನಿನ್ (ಬೇಬಿ)
- ಅತ್ಯುತ್ತಮ ಸಾಹಿತ್ಯ: ಅನಂತ ಶ್ರೀರಾಮ್ (ಓ ಎರಡು ಪ್ರೇಮ ಮೇಘಲೀಲಾ - ಬೇಬಿ)
- ಅತ್ಯುತ್ತಮ ಹಿನ್ನೆಲೆ ಗಾಯಕ: ಶ್ರೀರಾಮ ಚಂದ್ರ (ಓ ಎರಡು ಪ್ರೇಮ ಮೇಘಲೀಲಾ - ಬೇಬಿ)
- ಅತ್ಯುತ್ತಮ ಹಿನ್ನೆಲೆ ಗಾಯಕಿ : ಶ್ವೇತಾ ಮೋಹನ್ (ಮಾಸ್ತಾರು ಮಾಸ್ತಾರು - ಸಾರ್)
- ಅತ್ಯುತ್ತಮ ಛಾಯಾಗ್ರಹಣ: ಸತ್ಯನ್ ಸೂರ್ಯನ್ (ದಸರಾ)
- ಅತ್ಯುತ್ತಮ ನೃತ್ಯ ಸಂಯೋಜನೆ: ಪ್ರೇಮ್ ರಕ್ಷಿತ್ (ಧೂಮ್ ಧಾಮ್ ಧೋಸ್ತಾನ್ - ದಸರಾ)
- ಅತ್ಯುತ್ತಮ ನಿರ್ಮಾಣ ವಿನ್ಯಾಸ: ಕೊಲ್ಲಾ ಅವಿನಾಶ್ (ದಸರಾ)
ತಮಿಳು ಚಿತ್ರರಂಗದ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:
- ಅತ್ಯುತ್ತಮ ಚಿತ್ರ: ಚಿತ್ತಾ
- ಅತ್ಯುತ್ತಮ ನಿರ್ದೇಶಕ: ಎಸ್ ಯು ಅರುಣ್ ಕುಮಾರ್ (ಚಿತ್ತಾ)
- ಅತ್ಯುತ್ತಮ ಚಲನಚಿತ್ರ (ಕ್ರಿಟಿಕ್ಸ್): ವೆಟ್ರಿ ಮಾರನ್ (ವಿಧುತಲೈ: ಭಾಗ 1)
- ಅತ್ಯುತ್ತಮ ನಟ : ವಿಕ್ರಮ್ (ಪೊನ್ನಿಯಿನ್ ಸೆಲ್ವನ್- ಭಾಗ 2)
- ಅತ್ಯುತ್ತಮ ನಟ (ಕ್ರಿಟಿಕ್ಸ್): ಸಿದ್ಧಾರ್ಥ್ (ಚಿತ್ತಾ)
- ಅತ್ಯುತ್ತಮ ನಟಿ: ನಿಮಿಷಾ ಸಜಯನ್ (ಚಿತ್ತಾ)
- ಅತ್ಯುತ್ತಮ ನಟಿ (ಕ್ರಿಟಿಕ್ಸ್): ಐಶ್ವರ್ಯಾ ರಾಜೇಶ್ (ಫರ್ಹಾನಾ), ಅಪರ್ಣಾ ದಾಸ್ (ದಾದಾ)
- ಅತ್ಯುತ್ತಮ ಸರ್ಪೋಟಿಂಗ್ ನಟ: ಫಹಾದ್ ಫಾಸಿಲ್ (ಮಾಮನ್ನನ್)
- ಅತ್ಯುತ್ತಮ ಸರ್ಪೋಟಿಂಗ್ ನಟಿ : ಅಂಜಲಿ ನಾಯರ್ (ಚಿತ್ತಾ)
- ಅತ್ಯುತ್ತಮ ಸಂಗೀತ ಆಲ್ಬಂ: ಧಿಬು ನಿನನ್ ಥಾಮಸ್ ಮತ್ತು ಸಂತೋಷ್ ನಾರಾಯಣನ್ (ಚಿತ್ತಾ)
- ಅತ್ಯುತ್ತಮ ಸಾಹಿತ್ಯ: ಇಳಂಗೋ ಕೃಷ್ಣನ್ (ಅಗಾ ನಾಗ- ಪೊನ್ನಿಯಿನ್ ಸೆಲ್ವನ್ ಭಾಗ 2)
- ಅತ್ಯುತ್ತಮ ಹಿನ್ನೆಲೆ ಗಾಯಕ : ಹರಿಚರಣ್ (ಚಿನ್ನಂಜಿರು ನಿಲವೆ- ಪೊನ್ನಿಯಿನ್ ಸೆಲ್ವನ್ ಭಾಗ 2)
- ಅತ್ಯುತ್ತಮ ಹಿನ್ನೆಲೆ ಗಾಯಕಿ : ಕಾರ್ತಿಕಾ ವೈದ್ಯನಾಥನ್ (ಕಂಗಲ್ ಎಧೋ- ಚಿತ್ತಾ)
- ಅತ್ಯುತ್ತಮ ಛಾಯಾಗ್ರಹಣ: ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್ ಭಾಗ 2)
- ಅತ್ಯುತ್ತಮ ನಿರ್ಮಾಣ ವಿನ್ಯಾಸ: ತೋಟ ತರಣಿ (ಪೊನ್ನಿಯಿನ್ ಸೆಲ್ವನ್ ಭಾಗ 2)
ಮಲಯಾಳಂ ಚಿತ್ರರಂಗದ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:
- ಅತ್ಯುತ್ತಮ ಚಿತ್ರ: 2018
- ಅತ್ಯುತ್ತಮ ನಿರ್ದೇಶಕ: ಜೂಡ್ ಆಂಥನಿ ಜೋಸೆಫ್ (2018)
- ಅತ್ಯುತ್ತಮ ಚಲನಚಿತ್ರ (ಕ್ರಿಟಿಕ್ಸ್): ಕಾತಲ್ ದಿ ಕೋರ್
- ಅತ್ಯುತ್ತಮ ನಟ : ಮಮ್ಮುಟ್ಟಿ (ನನ್ಪಾಕಲ್ ನೆರತು ಮಾಯಕ್ಕಂ)
- ಅತ್ಯುತ್ತಮ ನಟ (ಕ್ರಿಟಿಕ್ಸ್): ಜೋಜು ಜಾರ್ಜ್ (ಇರಟ್ಟಾ)
- ಅತ್ಯುತ್ತಮ ನಟಿ : ವಿನ್ಸಿ ಅಲೋಶಿಯಸ್ (ರೇಖಾ)
- ಅತ್ಯುತ್ತಮ ನಟಿ (ಕ್ರಿಟಿಕ್ಸ್): ಜ್ಯೋತಿಕಾ (ಕಾತಲ್ ದಿ ಕೋರ್)
- ಅತ್ಯುತ್ತಮ ಸರ್ಪೋಟಿಂಗ್ ನಟ : ಜಗದೀಶ್ (ಪುರುಷ ಪ್ರೇತಂ)
- ಅತ್ಯುತ್ತಮ ಸರ್ಪೋಟಿಂಗ್ ನಟಿ : ಪೂರ್ಣಿಮಾ ಇಂದ್ರಜಿತ್ (ತುರಮುಖಂ), ಅನಸ್ವರ ರಾಜನ್ (ನೆರು)
- ಅತ್ಯುತ್ತಮ ಸಂಗೀತ ಆಲ್ಬಮ್: ಸ್ಯಾಮ್ ಸಿಎಸ್ (RDX)
- ಅತ್ಯುತ್ತಮ ಸಾಹಿತ್ಯ: ಅನ್ವರ್ ಅಲಿ (ಎನ್ನುಮ್ ಎನ್ ಕಾವಲ್ - ಕಾತಲ್ ದಿ ಕೋರ್)
- ಅತ್ಯುತ್ತಮ ಹಿನ್ನೆಲೆ ಗಾಯಕ : ಕಪಿಲ್ ಕಪಿಲನ್ (ನೀಲಾ ನಿಲವೆ - RDX)
- ಅತ್ಯುತ್ತಮ ಹಿನ್ನೆಲೆ ಗಾಯಕಿ : ಕೆ ಎಸ್ ಚಿತ್ರಾ (ಮುತ್ತತೆ ಮುಲ್ಲಾ - ಜವಾನುಂ ಮುಲ್ಲಪೂವುಂ)
ಇದನ್ನೂ ಓದಿ: ಪಂಚಿಂಗ್ ಡೈಲಾಗ್ಗಳ ಅಬ್ಬರ: ದುನಿಯಾ ವಿಜಯ್ 'ಭೀಮ' ಟ್ರೇಲರ್ ರಿಲೀಸ್ - Bheema Trailer