ETV Bharat / state

ಕೆ-ಸೆಟ್, ರಾಯಚೂರು ವಿವಿ ಪರೀಕ್ಷೆಗಳ ಕೀ ಉತ್ತರಗಳ ಬಿಡುಗಡೆ

ಕಳೆದ ಭಾನುವಾರ ನಡೆದಿದ್ದ ಕೆ-ಸೆಟ್ ಮತ್ತು ರಾಯಚೂರು ವಿವಿ ಪರೀಕ್ಷೆಗಳ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ.

KEA
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ನವೆಂಬರ್ 24ರಂದು ನಡೆದಿದ್ದ ಕೆ-ಸೆಟ್ ಮತ್ತು ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.

ಒಟ್ಟು 46 ವಿಷಯಗಳಿಗೆ ಪರೀಕ್ಷೆ ನಡೆಸಿದ್ದು, ಸದ್ಯ 29 ವಿಷಯಗಳ ಕೀ ಉತ್ತರಗಳನ್ನು ನೀಡಲಾಗಿದೆ. ಉಳಿದ 17 ವಿಷಯಗಳ ಕೀ ಉತ್ತರಗಳನ್ನು ನವೆಂಬರ್ 27ರಂದು ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: KPSC ನೇಮಕಾತಿ; ವಯೋಮಿತಿ ಸಡಿಲಿಕೆಯೊಂದಿಗೆ ಭೂಮಾಪಕರ ಹುದ್ದೆಗೆ ಮತ್ತೊಮ್ಮೆ ಅರ್ಜಿ ಆಹ್ವಾನ

ಕೀ ಉತ್ತರಗಳಿಗೆ ಆಕ್ಷೇಪಣೆಗಳು ಇದ್ದರೆ, ಪೂರಕ ದಾಖಲೆಗಳ ಸಮೇತ ನವೆಂಬರ್​ 29ರೊಳಗೆ ಕೆಇಎ ವೆಬ್​ಸೈಟ್​​​ನಲ್ಲಿನ (http:kea.kar.nic.in) ಲಿಂಕ್ ಮೂಲಕ ಸಲ್ಲಿಸಬೇಕು. ಪ್ರತಿ ಆಕ್ಷೇಪಣೆಗೂ 100 ರೂಪಾಯಿ ಶುಲ್ಕ ಪಾವತಿಸಬೇಕು. ಆಕ್ಷೇಪಣೆ ಸಲ್ಲಿಸುವಾಗ ಪತ್ರಿಕೆಯ ವಿಷಯ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಇತ್ಯಾದಿಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಇಲ್ಲದಿದ್ದರೆ ಅಂತಹ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಿಷಯ ತಜ್ಞರ ತೀರ್ಮಾನವೇ ಅಂತಿಮ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಸಿ - ಡಾಕ್​ನಲ್ಲಿದೆ ಭರ್ಜರಿ ಉದ್ಯೋಗಾವಕಾಶಗಳು: ಬೆಂಗಳೂರಿನಲ್ಲಿ ನೇಮಕಾತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.