ETV Bharat / entertainment

ಸೀರೆಯುಟ್ಟು ಸಿದ್ದಿವಿನಾಯಕ ದೇವಸ್ಥಾನಕ್ಕೆ ಬಂದ ತುಂಬು ಗರ್ಭಿಣಿ ದೀಪಿಕಾ: ನಟಿಯ ವಿಡಿಯೋ ನೋಡಿ - Deepika Padukone - DEEPIKA PADUKONE

ಗಣೇಶ ಚತುರ್ಥಿಗೂ ಮೊದಲು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ರಣ್​​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಭೇಟಿ ಕೊಟ್ಟಿದ್ದಾರೆ. 2018ರಲ್ಲಿ ದಾಂಪತ್ಯ ಜೀವನ ಆರಂಭಿಸಿರುವ ಸ್ಟಾರ್ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Deepika Padukone and  Ranveer Singh
ದೀಪಿಕಾ ಪಡುಕೋಣೆ - ರಣ್​ವೀರ್​ ಸಿಂಗ್​​ (ANI)
author img

By ETV Bharat Entertainment Team

Published : Sep 6, 2024, 8:29 PM IST

ಬಾಲಿವುಡ್ ಪವರ್ ಕಪಲ್ ರಣ್​​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಸೆಪ್ಟೆಂಬರ್ 28ಕ್ಕೆ ಡೆಲಿವರಿ ಡೇಟ್​ ಇದ್ದು ಗರ್ಭಾವಸ್ಥೆಯ ಅಂತಿಮ ದಿನಗಳನ್ನು ಆನಂದಿಸುತ್ತಿದ್ದಾರೆ.

ಹೆರಿಗೆ ದಿನಾಂಕ ಸಮೀಪಿಸುತ್ತಿದ್ದು, ಇಂದು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ದಂಪತಿ ಭೇಟಿ ಕೊಟ್ಟಿದ್ದಾರೆ. ಕುಟುಂಬಸ್ಥರು ಕೂಡಾ ಜೊತೆಗಿದ್ದರು. ಮೊದಲ ಮಗುವಿನ ಆಗಮನಕ್ಕೂ ಮುನ್ನ ದೇವರ ಆಶೀರ್ವಾದ ಪಡೆದಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ, ಮೊದಲ ದಿನವೇ 126 ಕೋಟಿ ರೂ. ಕಲೆಕ್ಷನ್​​​ ಮಾಡಿದ ದಳಪತಿ ವಿಜಯ್ ಅಭಿನಯದ 'ಗೋಟ್' - Greatest of All Time Collection

ಶನಿವಾರದಂದು ಭಾರತ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಿದೆ. ಅದಕ್ಕೂ ಮುನ್ನ ಶೀಘ್ರದಲ್ಲೇ ಪೋಷಕರಾಗಲಿರುವ ಇವರು ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ದಂಪತಿ ಸಾಂಪ್ರದಾಯಿಕ ನೋಟದಲ್ಲಿ ಕಂಗೊಳಿಸಿದ್ದು, ಫೋಟೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿವೆ.

ಇದನ್ನೂ ಓದಿ: ಕೇರಳದ ಹೇಮಾ ಸಮಿತಿಯಂತೆ ಕನ್ನಡದಲ್ಲೂ ಕಮಿಟಿ ರಚನೆಗೆ ಮನವಿ: ನಟ ರಕ್ಷಿತ್​​ ಶೆಟ್ಟಿಗೆ ವಿಷಯ ಗೊತ್ತಿಲ್ವೇ? - Rakshit Shetty

ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಗೋಲ್ಡನ್ ಥ್ರೆಡ್ ವರ್ಕ್‌ನಿಂದ ಅಲಂಕರಿಸಲ್ಪಟ್ಟ ಹಸಿರು ರೇಷ್ಮೆ ಸೀರೆ ಧರಿಸಿದ್ದರು. ಸರಳ ಕಿವಿಯೋಲೆಗಳನ್ನು ತೊಟ್ಟಿದ್ದರು. ತಮ್ಮ ಸೀರೆಯ ಪಲ್ಲುವಿನಿಂದ ಬೇಬಿ ಬಂಪ್ ಮರೆ ಮಾಡಿದ್ದರು. ಸಂಪೂರ್ಣ ನೋಟ ಬಹಳ ಸೊಗಸಾಗಿತ್ತು. ಮತ್ತೊಂದೆಡೆ, ಪತಿ - ನಟ ರಣ್​ವೀರ್ ಸಿಂಗ್​​ ಆಫ್-ವೈಟ್ ಕುರ್ತಾದಲ್ಲಿ ಟ್ರೆಡಿಶನಲ್​ ಲುಕ್​ ಕೊಟ್ರು. ದೇವಸ್ಥಾನ ಭೇಟಿಯ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.