ETV Bharat / entertainment

ದರ್ಶನ್ ಜೈಲುವಾಸದ ಮಧ್ಯೆ 2005ರ ಮಾಸ್‌ ಹಿಟ್‌ 'ಶಾಸ್ತ್ರೀ' ಶುಕ್ರವಾರ ಮರು ಬಿಡುಗಡೆ - Shastri Re Release - SHASTRI RE RELEASE

ದರ್ಶನ್ ಸಿನಿಮಾ ಕೆರಿಯರ್​ನ ಹಿಟ್ ಚಿತ್ರಗಳಲ್ಲಿ ಒಂದಾಗಿರುವ 'ಶಾಸ್ತ್ರೀ' ಇದೇ ಶುಕ್ರವಾರ ಮರು ಬಿಡುಗಡೆ ಆಗುತ್ತಿದೆ.

Actor Darshan
ನಟ ದರ್ಶನ್ (ETV Bharat)
author img

By ETV Bharat Karnataka Team

Published : Jul 9, 2024, 12:30 PM IST

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಪ್ರಕರಣದ ತನಿಖೆ ಮುಂದುವರಿದಿದೆ. ಈ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ, 2005ರಲ್ಲಿ ಮಾಸ್ ಹಿಟ್ ಆಗಿದ್ದ 'ಶಾಸ್ತ್ರೀ' ಸಿನಿಮಾ ರೀ ರಿಲೀಸ್ ಆಗುತ್ತಿದೆ. ಹೌದು, ದರ್ಶನ್ ಸಿನಿಮಾ ಕೆರಿಯರ್‌ನ ಹಿಟ್ ಚಿತ್ರಗಳ ಪೈಕಿ ಒಂದಾಗಿರುವ 'ಶಾಸ್ತ್ರೀ' ಇದೇ ಶುಕ್ರವಾರ ಮರು ಬಿಡುಗಡೆ ಆಗುತ್ತಿದೆ.

ದರ್ಶನ್ ಜೈಲಿನಲ್ಲಿದ್ದು, ಇದೇ ಸಂದರ್ಭದಲ್ಲಿ ವಿತರಕ ವಿ.ಎಂ.ಶಂಕರ್ ಅವರು ಸಿನಿಮಾ ಮರು ಬಿಡುಗಡೆ ಮಾಡುತ್ತಿದ್ದಾರೆ.

ಈ ಬಗ್ಗೆ 'ಈಟಿವಿ ಭಾರತ'ದ ಜೊತೆ ಮಾತನಾಡಿರುವ ಅವರು, "ಈ ವಾರ ಒಂದೂ ಕನ್ನಡ ಸಿನಿಮಾ ರಿಲೀಸ್ ಆಗುತ್ತಿಲ್ಲ. ಹೀಗಾಗಿ ನಾನು 'ಶಾಸ್ತ್ರೀ' ಸಿನಿಮಾವನ್ನು ಸುಮಾರು 50 ಥಿಯೇಟರ್​​ಗಳಲ್ಲಿ ರೀ ರಿಲೀಸ್ ಮಾಡುತ್ತಿದ್ದೇನೆ. ಕೆ.ಜಿ ರಸ್ತೆಯ ತ್ರಿವೇಣಿ ಅಥವಾ ಸಂತೋಷ್ ಥಿಯೇಟರ್​ನಲ್ಲಿ ಮರು ಬಿಡುಗಡೆ ಮಾಡುತ್ತಿದ್ದೇನೆ. 'ಕಾಟೇರ' ರಿಲೀಸ್ ಆದಾಗ ಅದೆಷ್ಟೋ ಚಿತ್ರಮಂದಿರಗಳು ತೆರೆದವು. ದರ್ಶನ್ ಪ್ರಕರಣಕ್ಕೂ ಸಿನಿಮಾ ರಿಲೀಸ್​​ಗೂ ಯಾವುದೇ ಸಂಬಂಧವಿಲ್ಲ. ಸುಮಾರು ಆರು ತಿಂಗಳ ಹಿಂದೆ ರೀ ರಿಲೀಸ್​​ಗೆ ರೆಡಿ ಮಾಡಿಟ್ಟುಕೊಂಡಿದ್ದೆವು. 'ಶಾಸ್ತ್ರೀ' ನಿರ್ಮಾಪಕ ಅಣಜಿ ನಾಗರಾಜ್ ಅವರಿಂದ ಈ ಸಿನಿಮಾ ರೈಟ್ಸ್ ಪಡೆದು ಮರು ಬಿಡುಗಡೆ ಮಾಡುತ್ತಿದ್ದೇನೆ. ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ಪ್ರೇಕ್ಷಕರು ಬಂದೇ ಬರುತ್ತಾರೆಂಬ ನಂಬಿಕೆ ಇದೆ. ಈ ಹಿಂದೆ 'ಎ' ಸಿನಿಮಾವನ್ನೂ ನಾವೇ ರೀ-ರಿಲೀಸ್ ಮಾಡಿದ್ದೆವು. ಆಗಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು" ಎಂದು ತಿಳಿಸಿದರು.

ಇದನ್ನೂ ಓದಿ: 'ಮುದುಡಿದ ಎಲೆಗಳು' ಚಿತ್ರದಲ್ಲಿ 'ಡೇಂಜರಸ್​' ನಟಿ ಅಪ್ಸರ ರಾಣಿ - Apsara Rani

"ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ನನಗೆ ತಿಳಿಯದು. ಪ್ರಕರಣ ಕಾನೂನು ಚೌಕಟ್ಟಿನಲ್ಲಿದೆ. ದರ್ಶನ್ ಕನ್ನಡ ಸಿನಿಮಾ ಮಾಡಿ ಕನ್ನಡಕ್ಕೆ ದುಡಿದವರು. ಪ್ಯಾನ್ ಇಂಡಿಯಾ ಪ್ಯಾನ್ ಇಂಡಿಯಾ ಅನ್ನೋ ಸಮಯದಲ್ಲಿ ಕನ್ನಡದಲ್ಲಿ ಮಾತ್ರ ಸಿನಿಮಾ ರಿಲೀಸ್ ಮಾಡುತ್ತೇನೆ ಎಂದವರು ದರ್ಶನ್. ಅವರು ಬೆಳೆದ ಜಾಗ ಮರೆತಿಲ್ಲ" ಎಂದು ಶಂಕರ್ ಹೇಳಿದರು.

ಇದನ್ನೂ ಓದಿ: ಇನ್ನು 4 ದಿನದಲ್ಲಿ ದೊಡ್ಡ ಪರದೆ ಮೇಲೆ ಇಂಡಿಯನ್ 2; ಇನ್ನೂ ಆರಂಭವಾಗದ ಮುಂಗಡ ಬುಕಿಂಗ್​​ - Indian 2

ETV Bharat Logo

Copyright © 2024 Ushodaya Enterprises Pvt. Ltd., All Rights Reserved.