ETV Bharat / entertainment

ಅಭಿಮಾನಿಗಳೊಂದಿಗೆ ದರ್ಶನ್​​ ಜನ್ಮದಿನಾಚರಣೆ; 'ಡೆವಿಲ್'​ ಗ್ಲಿಂಪ್ಸ್ ಔಟ್, ಮುಂದಿನ ಸಿನಿಮಾಗಳಿವು - ದರ್ಶನ್ ಹುಟ್ಟುಹಬ್ಬ

ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ನಟ ದರ್ಶನ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Darshan Birthday celebration
ದರ್ಶನ್​​ ಜನ್ಮದಿನಾಚರಣೆ
author img

By ETV Bharat Karnataka Team

Published : Feb 16, 2024, 6:27 PM IST

ದರ್ಶನ್​​ ಜನ್ಮದಿನಾಚರಣೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 47ನೇ ಜನ್ಮದಿನವನ್ನು ಅಭಿಮಾನಿಗಳು ಮತ್ತು ಸಿನಿಮೋದ್ಯಮದ ಸ್ನೇಹಿತರ ಜೊತೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದಲೇ ಆಚರಣೆಗಳು ಆರಂಭವಾಗಿದ್ದು, ಇಂದೂ ಕೂಡ ಮುಂದುವರಿದಿದೆ.

ಕನ್ನಡ ಚಿತ್ರರಂಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವವರ ಪೈಕಿ ಚಾಲೆಂಜಿಂಗ್​​ ಸ್ಟಾರ್ ದರ್ಶನ್ ಪ್ರಮುಖರು. ಕೋಟ್ಯಂತರ ಅಭಿಮಾನಿಗಳ ಪೈಕಿ, ಹೆಚ್ಚಿನವರು ದರ್ಶನ್​​ ಅಂದ್ರೆ ದೇವರೇಂದೇ ಆರಾಧಿಸುವುದೂ ಉಂಟು. ಅವರ ಸಿನಿಮಾ‌ ಬಂತಂದ್ರೆ ಹಬ್ಬ, ಜಾತ್ರೆಯಂತೆ ಸಂಭ್ರಮಿಸುತ್ತಾರೆ. ಇನ್ನೂ ದರ್ಶನ್ ಹುಟ್ಟುಹಬ್ಬ ಅಂದ್ರೆ ಕೇಳಬೇಕೇ?.

ನಿನ್ನೆ ರಾತ್ರಿಯಿಂದಲೇ ದರ್ಶನ್ ಅವರ ಸಿನಿಸ್ನೇಹಿತರು ಅವರ ಜನ್ಮದಿನವನ್ನು ಹಬ್ಬದ ರೀತಿಯೇ ಆಚರಿಸಿದ್ದಾರೆ. ಗುರುವಾರ ಮಧ್ಯರಾತ್ರಿ ಎರಡು ಗಂಟೆವರೆಗೂ ದರ್ಶನ್ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಇಂದು ಕೂಡ ದರ್ಶನ್ ತಮಗಾಗಿ ದೂರದ ಊರಿನಿಂದ ಬಂದ ಅಭಿಮಾನಿ ದೇವರುಗಳಿಗೆ ದರ್ಶನ ಕೊಟ್ಟಿದ್ದಾರೆ. ಜೊತೆಗೆ ನಟನ ಮುಂಬರುವ ಬಹುನಿರೀಕ್ಷಿತ ಚಿತ್ರ ''ಡೆವಿಲ್​​''ನ ಗ್ಲಿಂಪ್ಸ್ ಕೂಡ ಅನಾವರಣಗೊಂಡಿದೆ.

  • " class="align-text-top noRightClick twitterSection" data="">

ಅಭಿಮಾನಿಗಳಿಗೆ ಭರ್ಜರಿ ಬರ್ತ್‌ಡೇ ಊಟ: ದರ್ಶನ್ ಅವರ ಹುಟ್ಟುಹಬ್ಬದಂದು ಅವರನ್ನು ನೋಡಬೇಕು, ಅವರಿಗೆ ವಿಶ್ ಮಾಡಿ ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆಯಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳು ರಾಜ್ಯದ ಮೂಲೆಮೂಲೆಗಳಿಂದ ಬರುತ್ತಾರೆ. ತಮಗಾಗಿ ಬರುವವರು ಹಸಿದ ಹೊಟ್ಟೆಯಲ್ಲಿ ಹೋಗಬಾರದು ಎಂದು ನಾಲ್ಕೈದು ಬಗೆಯ ಖಾದ್ಯಗಳೊಂದಿಗೆ ಊಟದ ವ್ಯವಸ್ಥೆ ಮಾಡಿಸಿದ್ರು. ಟೊಮೆಟೊ ಬಾತ್, ವೆಜಿಟೇಬಲ್ ಪಲಾವ್, ಅನ್ನ ಸಾಂಬಾರ್, ಮೊಸರನ್ನ, ಮೆಣಸಿನಕಾಯಿ ಬಜ್ಜಿ, ಮೈಸೂರು ಪಾಕ್ ಹೀಗೆ ಊಟದ ವ್ಯವಸ್ಥೆಯೂ ನಡೆದಿತ್ತು. ದರ್ಶನ್ ತಮ್ಮ ಅಭಿಮಾನಿಗಳಿಗೆ, ಎಲ್ಲರೂ ಹುಷಾರಾಗಿ ಇರುವಂತೆ ಮನವಿ ಮಾಡಿಕೊಂಡರು.

ದರ್ಶನ್ ಹುಟ್ಟುಹಬ್ಬಕ್ಕೆ ''ಡೆವಿಲ್​​'' ಗ್ಲಿಂಪ್ಸ್ ಮಾತ್ರವಲ್ಲದೇ, ಮುಂದಿನ ಸಿನಿಮಾಗಳ ಮಾಹಿತಿ ಹೊರಬಿದ್ದಿದೆ. ಜೋಗಿ ಪ್ರೇಮ್‌ ನಿರ್ದೇಶನದ ಮತ್ತು ಕೆವಿನ್‌ ಸಂಸ್ಥೆ ನಿರ್ಮಾಣದ ಚಿತ್ರವೊಂದರಲ್ಲಿ ದರ್ಶನ್ ಅಭಿನಯಿಸುತ್ತಿದ್ದಾರೆ‌. ಈ ಚಿತ್ರದ ಟೀಸರ್​ಗಾಗಿ ದರ್ಶನ್ ವಾಯ್ಸ್ ಕೊಡುವ ಒಂದು ಮೇಕಿಂಗ್ ವಿಡಿಯೋವನ್ನು ಜೋಗಿ ಪ್ರೇಮ್ ರಿವೀಲ್ ಮಾಡುವ ಮೂಲಕ ಬರ್ತ್ ಡೇಗೆ ಗಿಫ್ಟ್ ನೀಡಿದ್ದಾರೆ. ಇನ್ನೂ, ಕಾಟೇರ ಬಳಿಕ ಮತ್ತೆ ನಿರ್ದೇಶಕ ತರುಣ್ ಸುಧೀರ್ ನಿರ್ದೇಶನದಲ್ಲಿ ಸಿನಿಮಾವೊಂದು ಬರಲಿದ್ದು, ದರ್ಶನ್​ ಮುಖ್ಯಭೂಮಿಕೆಯಲ್ಲಿದ್ದಾರೆ. ಬಿ ಸುರೇಶ್ ನಿರ್ಮಾಣದ ಈ ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ. ಪೋಸ್ಟರ್​​ನಲ್ಲಿ ''ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆ'' (D59) ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ದರ್ಶನ್ ಬರ್ತ್​ಡೇ ಸಂಭ್ರಮ​ದ ಫೋಟೋಗಳು: ಮುಂದಿನ ಸಿನಿಮಾ 'ಡೆವಿಲ್‌' ಗ್ಲಿಂಪ್ಸ್‌ ರಿಲೀಸ್

ಒಟ್ಟಾರೆ ದರ್ಶನ್ ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಸೆಲೆಬ್ರೇಟ್ ಮಾಡಲಾಗುತ್ತಿದೆ. ಮಹಿಳಾ ಅಭಿಮಾನಿಗಳು, ವಿಶೇಷಚೇತನ ಅಭಿಮಾನಿಗಳು ಕೂಡ ಆಗಮಿಸಿದ್ದರು. ಅಕ್ಕಿ ಹೊತ್ತು ತಂದು ಉಡುಗೊರೆಯಾಗಿ ನೀಡಿ ಮೆಚ್ಚಿನ ನಟನಿಗೆ ನೂರ್ಕಾಲ ನಗು ನಗುತಿರಿ ಎಂದು ಮನತುಂಬಿ ಹಾರೈಸಿದರು. ಇದರ ಜೊತೆಗೆ ಚಿತ್ರರಂಗದ ಸಾಕಷ್ಟು ಗೆಳೆಯರೂ ಸಹ ದರ್ಶನ್ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: 'ಟಾಕ್ಸಿಕ್'​​ ಸಿನಿಮಾದಲ್ಲಿ ಶಾರುಖ್​​ ಖಾನ್​​? 'ಅಧಿಕೃತ ಮಾಹಿತಿ ನಂಬಿ' ಎಂದು ಯಶ್ ಸಲಹೆ​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.