ಕನ್ನಡ ಚಿತ್ರರಂಗದ ಜಪ್ರಿಯ ನಟ ದರ್ಶನ್ ಜೊತೆಗಿನ ಫೋಟೋವನ್ನು ನಟಿ ಪವಿತ್ರಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಪವಿತ್ರಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೇ, 'ನಮ್ಮಿಬ್ಬರ ಸಂಬಂಧ 10 ವರ್ಷ ಪೂರೈಸಿದೆ. ಥ್ಯಾಂಕ್ ಯು' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಪೋಸ್ಟ್ ಕುರಿತು ದರ್ಶನ್ ಪತ್ನಿ ವಿಜಯಲಕ್ಷ್ಮೀ ಇನ್ಸ್ಟಾಗ್ರಾಮ್ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ವಿಜಯಲಕ್ಷ್ಮೀ ಪೋಸ್ಟ್: 'ಬೇರೋಬ್ಬರ ಪತಿಯ ಫೋಟೋವನ್ನು ಪೋಸ್ಟ್ ಮಾಡುವ ಮುನ್ನ ಈ ಮಹಿಳೆ ತನ್ನ ಪ್ರಜ್ಞೆಗೆ ಬರಬೇಕು ಎಂದು ನಾನು ಭಾವಿಸುತ್ತೇನೆ. ಈ ರೀತಿ ಪೋಸ್ಟ್ ಮಾಡುವುದು ಆಕೆಯ ವ್ಯಕ್ತಿತ್ವ, ನಡತೆ ಮತ್ತು ನೈತಿಕ ನಿಲುವಿನ ಬಗ್ಗೆ ಹೇಳುತ್ತದೆ. ಆ ಪುರುಷ ವಿವಾಹಿತನಾಗಿದ್ದರೂ ಕೂಡ ಆ ಮಹಿಳೆ ಇನ್ನೂ ತನ್ನ ವೈಯಕ್ತಿಕ ಅಗತ್ಯತೆಗಳ ಈಡೇರಿಕೆಗಾಗಿ ಅದನ್ನು ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಖುಷಿ ಗೌಡ ಅವರು ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಮಗಳು ಎಂಬುದನ್ನು ಈ ಫೋಟೋಗಳು ಸ್ಪಷ್ಟವಾಗಿ ನಿರೂಪಿಸುತ್ತವೆ. ಸಾಮಾನ್ಯವಾಗಿ ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವುದಿಲ್ಲ. ಆದರೆ, ನನ್ನ ಕುಟುಂಬ ಹಿತಾಸಕ್ತಿಗಾಗಿ ಧ್ವನಿ ಎತ್ತಲು ಇದು ಸೂಕ್ತ ಸಮಯ ಎಂದು ನನಗೆ ಅನಿಸುತ್ತಿದೆ. ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಮಾಜಕ್ಕೆ ಬೇರೆ ಕಲ್ಪನೆ ಬಿತ್ತುತ್ತಿರುವ ಜನರ ವಿರುದ್ಧ ನಾನು ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇನೆ' ಎಂದು ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಫೋಟೋಗಳ ಸಮೇತ ಖಡಕ್ ಎಚ್ಚರಿಕೆಯನ್ನು ವಿಜಯಲಕ್ಷ್ಮೀ ನೀಡಿದ್ದಾರೆ.
ಇದನ್ನೂ ಓದಿ: ಖುಷಿ ರವಿ ನೆನಪಿಸಿಕೊಂಡ ತಕ್ಷಣ ಯಾವ ಖಾದ್ಯ ನೆನಪಾಗುತ್ತದೆ? 'ಫುಲ್ ಮೀಲ್ಸ್' ಸ್ಪೆಷಲ್ ವಿಡಿಯೋ
ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ್ಗೆ ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ಪವಿತ್ರಾಗೌಡ, ಮಾಡೆಲ್ ಮತ್ತು ಕಿರುತೆರೆಯಲ್ಲೂ ಮಿಂಚಿದ್ದಾರೆ.
ಇದನ್ನೂ ಓದಿ: ಖುಷಿ ರವಿ ನೆನಪಿಸಿಕೊಂಡ ತಕ್ಷಣ ಯಾವ ಖಾದ್ಯ ನೆನಪಾಗುತ್ತದೆ? 'ಫುಲ್ ಮೀಲ್ಸ್' ಸ್ಪೆಷಲ್ ವಿಡಿಯೋ