ETV Bharat / entertainment

ನಾಡಪ್ರಭು ಕೆಂಪೇಗೌಡರ ಅವತಾರದಲ್ಲಿ ನಟರಾಕ್ಷಸ ಡಾಲಿ ಧನಂಜಯ್ - Nadaprabhu Kempegowda Movie - NADAPRABHU KEMPEGOWDA MOVIE

ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅಭಿನಯದ ಮುಂದಿನ 'ನಾಡಪ್ರಭು ಕೆಂಪೇಗೌಡ' ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ.

Nadaprabhu Kempegowda movie
ನಾಡಪ್ರಭು ಕೆಂಪೇಗೌಡ ಪೋಸ್ಟರ್ (ETV Bharat)
author img

By ETV Bharat Karnataka Team

Published : Jun 21, 2024, 2:18 PM IST

ಮೇರು ಯೋಧ ಮತ್ತು ಬೆಂಗಳೂರಿನ ಕಾರಣಿ‌ಕರ್ತ ನಾಡಪ್ರಭು ಕೆಂಪೇಗೌಡರ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ಬರುತ್ತಿವೆ. ಕೆಲ ದಿನಗಳ ಹಿಂದೆ ಸಂಗೀತ ನಿರ್ದೇಶಕ ಧರ್ಮಭೀರು ನಾಡಪ್ರಭು ಕೆಂಪೇಗೌಡ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಇದರ ಬೆನ್ನಲೇ ನಿರ್ದೇಶಕ ಟಿ.ಎಸ್ ನಾಗಾಭರಣ 'ನಾಡಪ್ರಭು ಕೆಂಪೇಗೌಡ'ರ ಜೀವನ ಚರಿತ್ರೆಯನ್ನು ಹೇಳಲು ಹೊರಟ್ಟಿದ್ದಾರೆ‌.

ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಕೆಂಪೇಗೌಡರ ಪಾತ್ರ ನಿರ್ವಹಿಸುತ್ತಿದ್ದು, ಈಗಾಗಲೇ ಪೋಸ್ಟರ್ ರಿವೀಲ್ ಆಗಿದೆ. ಐತಿಹಾಸಿಕ ಲುಕ್ ಎಲ್ಲರ‌ ಗಮನ ಸೆಳೆದಿದೆ. ಈ ಹಿಂದೆ ನಿರ್ದೇಶಕ ನಾಗಾಭರಣ ಜೊತೆ ಧನಂಜಯ್ 'ಅಲ್ಲಮ್ಮ' ಸಿನಿಮಾ‌‌ ಮಾಡಿದ್ದರು. ಇದೀಗ ಮತ್ತೊಮ್ಮೆ 'ನಾಡಪ್ರಭು ಕೆಂಪೇಗೌಡ' ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​​​​​ನಲ್ಲಿ ಪೋಸ್ಟರ್ ಹಂಚಿಕೊಂಡ ನಟ, ''ನಾಡಪ್ರಭು ಕೆಂಪೇಗೌಡರ‌ ಐತಿಹಾಸಿಕ ಅನಾವರಣ..'' ಎಂದು ಬರೆದುಕೊಂಡಿದ್ದಾರೆ.

ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ಚಿತ್ರವನ್ನು ಡಾ.ಎಂ.ಎನ್.ಶಿವರುದ್ರಪ್ಪ ಮತ್ತು ಶುಭಂ ಗುಂಡಲ‌ ಈಶ್ವರ ಎಂಟರ್​ಟೈನ್ಮೆಂಟ್ ಬ್ಯಾನರ್ ಅಡಿ ನಿರ್ಮಿಸಲಿದ್ದಾರೆ. ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.

ಇದನ್ನೂ ಓದಿ: ನಟ ಸಾರ್ವಭೌಮ ಡಾ. ರಾಜ್​ಕುಮಾರ್ ಯೋಗ ಕಲಿಯಲು ಕಾರಣ ಏನೆಂಬುದು ನಿಮಗೆ ಗೊತ್ತೇ? - Rajkumar Yoga

ಬಂಗಾರದ ಜಿಂಕೆ,‌ ಜನುಮದ ಜೋಡಿ, ಕಲ್ಲರಳಿ ಹೂವಾಗಿ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ ಮೇರು ನಿರ್ದೇಶಕ ಡಾ.ಟಿ.ಎಸ್ ನಾಗಾಭರಣ ಅವರ ಎರಡು ದಶಕಗಳ ಕನಸಿನ ಕೂಸಾದ ನಾಡಪ್ರಭು ಕೆಂಪೇಗೌಡ, ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ಜೀವನ ಚರಿತ್ರೆಯ ಕಥನವಾಗಿದೆ. ಹಲವಾರು ವರ್ಷಗಳ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳಲು ಹೊರಟಿರುವ‌ ನಾಗಾಭರಣ ಅವರಿಗೆ ಈ ಚಿತ್ರ ಯಶಸ್ಸು ತಂದುಕೊಡಲಿದೆ ಎಂಬುದು ಸಿನಿಪ್ರೇಕ್ಷಕರ ಅಭಿಪ್ರಾಯ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಯೋಗ ದಿನಾಚರಣೆ: ಸಿಎಂ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡ ನಟಿ ಶ್ರೀಲೀಲಾ - Sreeleela Yoga with CM Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.