ETV Bharat / entertainment

ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಡಾಲಿ ಧನಂಜಯ್​​​ - Daali Dhananjay Apology - DAALI DHANANJAY APOLOGY

ಸ್ಯಾಂಡಲ್​ವುಡ್​ನ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ ಪತ್ರ ಬರೆದಿದ್ದಾರೆ.

Daali Dhananjay
ನಟ ಡಾಲಿ ಧನಂಜಯ್​​ (ETV Bharat)
author img

By ETV Bharat Karnataka Team

Published : Aug 21, 2024, 8:05 PM IST

ನಟ ಡಾಲಿ ಧನಂಜಯ್​​​​ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ. ನಿರ್ಮಾಪಕ ಕೂಡಾ ಹೌದು. ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಆದ ಸ್ಟಾರ್​ಡಮ್​ ಹೊಂದಿರುವ ಈ ನಟ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಹಾಗಾಗಿ ನಟನ ವೃತ್ತಿಪರ ಮತ್ತು ವೈಯಕ್ತಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್​​​ ಸದಾ ಉತ್ಸುಕರಾಗಿರುತ್ತಾರೆ. ನಟನ ಖುಷಿ ಕ್ಷಣದಲ್ಲಿ ತಾವೂ ಭಾಗಿಯಾಗಲು ಇಚ್ಛಿಸುತ್ತಾರೆ. ಧನಂಜಯ್​ ಕೂಡಾ ತಮ್ಮ ಅಭಿಮಾನಿಗಳೊಂದಿಗೆ ಗುಣಮಟ್ಟದ ಸಮಯ ಕಳೆಯಲು ಇಚ್ಛಿಸುತ್ತಾರೆ. ಆದ್ರೆ ಈ ಬಾರಿ ಇದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸೋಷಿಯಲ್​​ ಮೀಡಿಯಾ ಪೋಸ್ಟ್​ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.

ಡಾಲಿ ಧನಂಜಯ್​​ ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​​ನ ಸ್ಟೋರಿ ಸೆಕ್ಷನ್​ನಲ್ಲಿ ಕ್ಷಮೆಯಾಚನಾ ಪತ್ರ ಹಂಚಿಕೊಂಡಿದ್ದಾರೆ. ಸ್ಟೋರಿಯಲ್ಲಿ, ''ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ಆಗಸ್ಟ್ 23, ಪ್ರತೀ ವರ್ಷದಂತೆ ನಿಮ್ಮೊಡನೆ ಹುಟ್ಟುಹಬ್ಬವನ್ನು ಸಂಭ್ರಮಿಸುವ ಉತ್ಸಾಹವಿದ್ದರೂ, ಕಾರಣಾಂತರಗಳಿಂದ ಆಚರಿಸಲಾಗುತ್ತಿಲ್ಲ. ಕ್ಷಮೆಯಿರಲಿ. ಎಲ್ಲಿರುತ್ತೀರೋ ಅಲ್ಲಿಂದಲೇ ಹರಸಿ, ಹಾರೈಸಿ. ಆದಷ್ಟು ಬೇಗ ಸಿಗೋಣ, ಸಾಕಷ್ಟು ಒಳ್ಳೆ ವಿಷಯಗಳೊಂದಿಗೆ, ಸಂಭ್ರಮಗಳೊಂದಿಗೆ, ಪ್ರೀತಿಯಿರಲಿ. ಇಂತಿ ನಿಮ್ಮ ಪ್ರೀತಿಯ ಡಾಲಿ ಧನಂಜಯ'' ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಈ ಸಂದೇಶ ನೀಡಿರುವ ಡಾಲಿ ಧನಂಜಯ್, ಈ ಗೈರಿಗೆ ನಿಖರ ಕಾರಣ ತಿಳಿಸಿಲ್ಲ. ಆದ್ರೆ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಬ್ಯುಸಿ ಶೆಡ್ಯೂಲ್​ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳೊಟ್ಟಿಗೆ ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ. ಕಳೆದ ಬಾರಿ ತಮ್ಮ ಹುಟ್ಟುಹಬ್ಬವನ್ನು ದೊಡ್ಡ ಮಟ್ಟಿಗೇನೆ ಆಚರಿಸಿಕೊಂಡು, ಅಭಿಮಾನಿಗಳಿಗೆ ಸಿನಿಮಾ ಅಪ್ಡೇಟ್ಸ್ ಟ್ರೀಟ್​ ಕೊಟ್ಟಿದ್ದರು.​

Daali Dhananjay IG Story
ಡಾಲಿ ಧನಂಜಯ್​​​ ಇನ್​ಸ್ಟಾಗ್ರಾಮ್​​ ಸ್ಟೋರಿ (Daali Dhananjay Instagram)

ಈ ಬಾರಿ ಡಾಲಿ ಧನಂಜಯ್​​ ಅಭಿನಯಿಸುತ್ತಿರುವ ಮುಂದಿನ ಚಿತ್ರಗಳ ಪೋಸ್ಟರ್​ ಅಥವಾ ಟೀಸರ್​​ ಅನಾವರಣಗೊಳ್ಳುವ ಸಾಧ್ಯತೆ ಇದೆ. ವಿಶೇಷವಾಗಿ ಉತ್ತರಕಾಂಡ ಚಿತ್ರದ ಅಪ್​ಡೇಟ್ಸ್​ ಬಗ್ಗೆ ಸಾಕ​​ಷ್ಟು ನಿರೀಕ್ಷೆಗಳಿವೆ. ಅಲ್ಲದೇ ಸೌತ್​ ಸಿನಿಮಾ ಇಂಡಸ್ಟ್ರಿಯ ಪುಷ್ಪ 2 ಚಿತ್ರದಿಂದಲೂ ಪೋಸ್ಟರ್ ರಿಲೀಸ್​​ ಆಗೋ ಸಾಧ್ಯತೆಗಳಿವೆ.

ಇದನ್ನೂ ಓದಿ: ರಾಜಕಾರಣವೆಂಬ ಸಿನಿಮಾದಲ್ಲಿ ಯಾರು ಹೀರೋ, ಯಾರು ವಿಲನ್, ಯಾರು ನಿರ್ದೇಶಕ ಎಂಬುದು ಗೊತ್ತಾಗೋಲ್ಲ: ಯು.ಟಿ.ಖಾದರ್ - U T Khader

ಆಗಸ್ಟ್​ 23ರಂದು 38ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಕಳೆದ ಹುಟ್ಟುಹಬ್ಬಕ್ಕೆ ಮಧ್ಯರಾತ್ರಿ 12 ಗಂಟೆಗೆ 'ಅಣ್ಣ From Mexico' ಟೈಟಲ್ ಹಾಗೂ ಫಸ್ಟ್ ಲುಕ್ ಮೋಷನ್​ ಪೋಸ್ಟರ್ ಅನಾವರನಗೊಳಿಸಲಾಗಿತ್ತು.

ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆಯ ರೇಪ್​​ ಕೇಸ್​ ವಿರುದ್ಧ ಧ್ವನಿ ಎತ್ತಿದ ಮಾಜಿ ಸಂಸದೆಗೆ ಅತ್ಯಾಚಾರ ಬೆದರಿಕೆ! - Mimi Chakraborty Faces Rape Threats

1986ರ ಆಗಸ್ಟ್ 23ರಂದು ಹಾಸನ ಜಿಲ್ಲೆಯ ಕಾಳೇನಹಳ್ಳಿಯಲ್ಲಿ ಜನಿಸಿದ ಧನಂಜಯ್ ಶುಕ್ರವಾರದಂದು 38ನೇ ವಸಂತಕ್ಕೆ ಕಾಲಿಡಲಿದ್ದಾರೆ. ರತ್ನನ್ ಪ್ರಪಂಚ, ಬಡವ ರಾಸ್ಕಲ್, ಗುರುದೇವ ಹೊಯ್ಸಳ, ಮಾನ್ಸೂನ್ ರಾಗ, ಹೆಡ್ ಬುಷ್ ಹೀಗೆ ಹಲವು ಚಿತ್ರಗಳ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹೆಸರು ಮಾಡಿದ್ದಾರೆ. ಸದ್ಯ ನಟನ ಕೈಯಲ್ಲಿ ಹಲವು ಬಹುನಿರೀಕ್ಷಿತ ಪ್ರಾಜೆಕ್ಟ್​ಗಳಿದ್ದು, ನಾಡಿದ್ದು ಯಾವ ಅಪ್ಡೇಟ್ಸ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.