ETV Bharat / entertainment

ಹೊಸ ಪ್ರತಿಭೆಗಳ 'ಕೆಂಡ' ಚಿತ್ರದ ಆಡಿಯೋ ರೈಟ್ಸ್ 'ಡಿ ಬೀಟ್ಸ್' ತೆಕ್ಕೆಗೆ - Kenda movie audio rights

ಗಂಟುಮೂಟೆ ಚಿತ್ರದಲ್ಲಿ ನಟಿಸಿದ್ದ ರೂಪಾ ರಾವ್​ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ

d beets gets audio rights of kenda movie

author img

By ETV Bharat Karnataka Team

Published : Mar 9, 2024, 4:50 PM IST

ಬೆಂಗಳೂರು: ಹೊಸ ಪ್ರತಿಭೆಗಳಿಂದ ಸಿದ್ಧಗೊಂಡಿರುವ ವಿಭಿನ್ನ ಕಥಾನಕದ ಚಿತ್ರ 'ಕೆಂಡ'. ಆಕರ್ಷಕ ಟೈಟಲ್ ನಿಂದಲೇ ಸದ್ಯ ಚಿತ್ರ ಎಲ್ಲರ ಗಮನ ಸೆಳೆಯುತ್ತಿದ್ದು, ಸದ್ಯ ತೆರೆ ಕಾಣಲು ಸಜ್ಜಾಗಿದೆ. ಮೋಷನ್​​ ಪೋಸ್ಟರ್ ಹಾಗೂ ಟೀಸರ್ ನಿಂದ ಹೆಚ್ಚು ಗಮನ ಸೆಳೆಯುತ್ತಿರುವ ಕೆಂಡ ಚಿತ್ರದ ಆಡಿಯೋ ಇದೀಗ ಒಳ್ಳೆ ಮೊತ್ತಕ್ಕೆ ಮಾರಾಟಗೊಂಡಿದೆ.

ಕೆಂಡ ಸಿನಿ ತಂಡ
ಕೆಂಡ ಸಿನಿ ತಂಡ

ಈ ಚಿತ್ರದ ಮೂಲಕ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಸಂಗೀತ ನೀಡಿರುವ ಹಾಡುಗಳ ಆಡಿಯೋ ರೈಟ್ಸ್ ಅನ್ನು 'ಡಿ ಬೀಟ್ಸ್' ಪಡೆದುಕೊಂಡಿದೆ. ಸಿನಿಮಾ ಮ್ಯೂಸಿಕ್ ವಲಯದಲ್ಲಿ ಈಗಾಗಲೇ ಡಿ ಬೀಟ್ಸ್ ಹೆಸರುಗಳಿಸಿದ್ದು. ಖುದ್ದು ಸಂಗೀತ ನಿರ್ದೇಶಕ ಕಂ ಈ ಸಂಸ್ಥೆಯ ಮುಖ್ಯಸ್ಥರಾದ ವಿ. ಹರಿಕೃಷ್ಣ ಅವರೇ ಕೆಂಡದ ಹಾಡುಗಳನ್ನು ಕೇಳಿ, ಬಹುವಾಗಿ ಮೆಚ್ಚಿಕೊಂಡು ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾರೆ. ಹರಿಕೃಷ್ಣ ಆಪ್ತರ ಪ್ರಕಾರ 15ರಿಂದ 25 ಲಕ್ಷ ರೂಪಾಯಿಗೆ ಕೆಂಡ ಚಿತ್ರದ ಆಡಿಯೋ ರೈಟ್ಸ್ ಮಾರಾಟ ಆಗಿದೆಯಂತೆ.

ಸಹದೇವ್ ಕೆಲವಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಕೆಂಡ. ಚಿತ್ರದ ಕಡೆಯಿಂದ ಹಂತ ಹಂತವಾಗಿ ಒಂದಷ್ಟು ಅಚ್ಚರಿಯ ಸುದ್ದಿಗಳು ಜಾಹೀರಾಗುತ್ತಲೇ ಬರುತ್ತಿವೆ. 'ಗಂಟುಮೂಟೆ' ಖ್ಯಾತಿಯ ರೂಪಾ ರಾವ್ ಚಿತ್ರ ನಿರ್ಮಾಣ ಮಾಡಿದ್ದಾರೆ.

ಕೆಂಡ ಸಿನಿ ತಂಡ
ಕೆಂಡ ಸಿನಿ ತಂಡ

ಚಿತ್ರದ ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ ಎಂದು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ತಿಳಿಸಿದ್ದಾರೆ. ರಿತ್ವಿಕ್ ಕಾಯ್ಕಿಣಿ ಮೊದಲ ಚಿತ್ರದಲ್ಲಿ ಗಮನ ಸೆಳೆದಿದ್ದಾರೆ. ಕೆಂಡ ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಅದರಲ್ಲೊಂದು ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಹಾಡಿರುವುದು ವಿಶೇಷ. ಅದಿತಿ ಸಾಗರ್ ಕೂಡಾ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ.

ಕೆಂಡ ಚಿತ್ರ ತಂಡ ಮಾಸ್ ಅಂಶಗಳನ್ನು ಹೊಂದಿದ್ದು, ಈಗಾಗಲೇ ಟೀಸರ್​ನಲ್ಲಿ ಈ ಸುಳಿವು ನೀಡಲಾಗಿದೆ. ಸಾಮಾನ್ಯ ಹುಡುಗನೊಬ್ಬ ವ್ಯವಸ್ಥೆಯ ಅಡಕತ್ತರಿಗೆ ಸಿಲುಕಿ ಅಸಾಮಾನ್ಯವಾಗಿ ಠೇಂಕರಿಸುವ ಕಥೆ 'ಕೆಂಡ' ಚಿತ್ರದ ಜೀವಾಳ.

ರಂಗಭೂಮಿ ಪ್ರತಿಭೆಗಳೇ ಈ ಚಿತ್ರದಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ ದೇಶಪಾಂಡೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಗಂಟುಮೂಟೆ ಚಿತ್ರದ ನಿರ್ಮಾಪಕರ ಹೊಣೆ ಜೊತೆಗೆ ಛಾಯಾಗ್ರಾಹಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಹದೇವ್​ ಚಿತ್ರ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದಿಂದ ಚಂದನ್ ಶೆಟ್ಟಿ ಪೋಸ್ಟರ್ ರಿಲೀಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.