ಹೈದರಾಬಾದ್: ಬಾಲಿವುಡ್ ನಟಿಯರಾದ ಕರೀನಾ ಕಪೂರ್, ಟಬು ಮತ್ತು ಕೃತಿ ಸನೊನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಕ್ರ್ಯೂ' ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ರಾಜೇಶ್ ಎ. ಕೃಷ್ಣನ್ ನಿರ್ದೇಶನದ ಈ ಚಿತ್ರ ಇದೇ ಮಾ. 29 ರಂದು ಚಿತ್ರಮಂದಿರಲ್ಲಿ ತೆರೆಕಂಡಿದ್ದು, ಬಿಡುಗಡೆಯಾದ ಮೂರನೇ ದಿನಕ್ಕೆ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕೊರೊನಾ ಸಾಂಕ್ರಾಮಿಕದ ನಂತರ ಬಂದ ಕೆಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಇದು ಕೂಡ ಒಂದಾಗಿದೆ.
ಕರೀನಾ ಕಪೂರ್, ತಬು, ಕೃತಿ ಸನೊನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಕಾಮಿಡಿ ಸಿನಿಮಾವು ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ತೆರೆಕಂಡ ಮೊದಲ ದಿನವೇ ಭಾರತದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 9.25 ಕೋಟಿ ರೂಪಾಯಿ ಗಳಿಕೆ ಮಾಡಿದ್ದ 'ದಿ ಕ್ರ್ಯೂ' ಚಿತ್ರ ಶನಿವಾರದಂದು 9.75 ಕೋಟಿ ಗಳಿಕೆ ಮಾಡಿತ್ತು. ಭಾನುವಾರವೂ ಸಹ ಉತ್ತಮ ಪ್ರದರ್ಶನ ಕಂಡಿದೆ. 10.25 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡುವ ಮೂಲಕ ಮೂರು ದಿನಗಳಲ್ಲಿ ಸುಮಾರು 30 ಕೋಟಿ ರೂಪಾಯಿ ಗಳಿಸಿದೆ. ವಿಮಾನಯಾನ ಉದ್ಯಮವು ಕಷ್ಟದಲ್ಲಿರುವ ಸಂದರ್ಭದಲ್ಲಿ ಮೂವರು ಗಗನಸಖಿಯರ ಬದುಕಿನ ಕಥೆಯನ್ನು ಈ ಸಿನಿಮಾ ತೆರೆದಿಡಲಿದೆ.
ವಿಮಾನಯಾನ ಉದ್ಯಮವು ಕಷ್ಟದಲ್ಲಿರುವ ಸಂದರ್ಭದಲ್ಲಿ ಮೂವರು ಗಗನಸಖಿಯರು ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ, ಹೇಗೆಲ್ಲ ಪರಿಹಾರ ಕಂಡುಕೊಳ್ಳುತ್ತಾರೆ ಎಂಬ ಕಥೆಯನ್ನು ಈ ಸಿನಿಮಾ ಹೊಂದಿದೆ. ಅನಿರೀಕ್ಷಿತ ಸಂದರ್ಭಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಗಗನಸಖಿಯರು, ಅದರಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ಸಹ ಚಿತ್ರ ವಿವರಿಸಲಿದೆ. ಪ್ರಯಾಣಿಕನೊಬ್ಬ ಚಿನ್ನದ ಬಿಸ್ಕತ್ತುಗಳನ್ನು ಬಚ್ಚಿಡುವ ಸರಳ ಪ್ರಸಂಗದೊಂದಿಗೆ ಆರಂಭವಾಗುವ ಚಿತ್ರದ ಕಥೆ, ಮುಂದೆ ಯಾವ ಯಾವ ಸ್ವರೂಪ ಮತ್ತು ಯಾವ ಹಂತಕ್ಕೆ ಕೊಂಡೊಯ್ಯುತ್ತದೆ ಅನ್ನೋದನ್ನು ರಾಜೇಶ್ ಕೃಷ್ಣನ್ 'ದಿ ಕ್ರ್ಯೂ' ಚಿತ್ರದ ಮೂಲಕ ತೋರಿಸಿದ್ದಾರೆ.
ಚಿತ್ರದಲ್ಲಿ ಫೇಮಸ್ ಕಾಮಿಡಿಯನ್ ಕಪಿಲ್ ಶರ್ಮಾ ಕೂಡ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಅವರ ಹೊರತುಪಡಿಸಿ ಚಿತ್ರದಲ್ಲಿ ದಿಲ್ಜಿತ್ ದೋಸಾಂಜ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಣ ಮತ್ತು ಜಾಹೀರಾತು ವೆಚ್ಚ ಎರಡನ್ನೂ ಒಳಗೊಂಡಿರುವ ಈ ಚಿತ್ರದ ಬಜೆಟ್ ಅಂದಾಜು 60 ಕೋಟಿ ರೂ. ಎಂದು ಹೇಳಲಾಗಿದೆ. ವಿದೇಶ ಸೇರಿ 2000 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಇದನ್ನು ಅನಿಲ್ ಕಪೂರ್ ಫಿಲ್ಮ್ & ಕಮ್ಯುನಿಕೇಷನ್ಸ್ ನೆಟ್‌ವರ್ಕ್ ಮತ್ತು ಬಾಲಾಜಿ ಟೆಲಿಫಿಲ್ಮ್ಸ್ ನಿರ್ಮಿಸಿದ್ದಾರೆ. ಫೈಟರ್ ಹಾಗೂ ಶೈತಾನ್ ನಂತರ ಹಿಂದಿ ಚಿತ್ರರಂಗದಲ್ಲಿ ವರ್ಷದ ಮೂರನೇ ಅತಿದೊಡ್ಡ ಓಪನರ್ ಆಗಿ ಕ್ರ್ಯೂ ಚಿತ್ರ ಹೆಸರು ಮಾಡಿದೆ.
ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್-ಅಥಿಯಾ ಶೆಟ್ಟಿ? ಸುಳಿವು ಕೊಟ್ಟ ಸುನೀಲ್ ಶೆಟ್ಟಿ - Athiya KL Rahul