ETV Bharat / entertainment

Crakk ಟ್ರೇಲರ್​ ಅನಾವರಣ: ವಿದ್ಯುತ್ ಜಮ್ವಾಲ್ ನಟನೆಗೆ ಪ್ರೇಕ್ಷಕರ ಮೆಚ್ಚುಗೆ

ವಿದ್ಯುತ್ ಜಮ್ವಾಲ್ ಅಭಿನಯದ ಬಹುನಿರೀಕ್ಷಿತ ''ಕ್ರಾಕ್ - ಜೀತೇಗಾ ತೋ ಜೀಯೇಗಾ'' ಚಿತ್ರದ ಟ್ರೇಲರ್​ ರಿಲೀಸ್​ ಆಗಿದೆ.

author img

By ETV Bharat Karnataka Team

Published : Feb 10, 2024, 10:27 AM IST

Crakk Trailer
ಕ್ರಾಕ್ ಟ್ರೇಲರ್

ಬಾಲಿವುಡ್​​​ ನಟ ವಿದ್ಯುತ್ ಜಮ್ವಾಲ್ ಅಭಿನಯದ ಆ್ಯಕ್ಷನ್ ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ''ಕ್ರಾಕ್ - ಜೀತೇಗಾ ತೋ ಜಿಯೇಗಾ'' ಚಿತ್ರದ ಬಹು ನಿರೀಕ್ಷಿತ ಟ್ರೇಲರ್​​ ಅನಾವರಣಗೊಂಡಿದೆ. ಟೀಸರ್ ಮತ್ತು ಹಾಡುಗಳಿಂದ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದ ಚಿತ್ರತಂಡ ಇದೀಗ ಟ್ರೇಲರ್​ ಮೂಲಕ ಸದ್ದು ಮಾಡಿದೆ. ವಿದ್ಯುತ್ ಜಮ್ವಾಲ್, ಅರ್ಜುನ್ ರಾಂಪಾಲ್, ನೋರಾ ಫತೇಹಿ ಮತ್ತು ಆ್ಯಮಿ ಜಾಕ್ಸನ್ ನಟನೆಯ ''ಕ್ರಾಕ್ - ಜೀತೇಗಾ ತೋ ಜಿಯೇಗಾ'' ಚಿತ್ರದ ಟ್ರೇಲರ್ ಇಬ್ಬರು ನಾಯಕರು ಮುಖಾಮುಖಿಯಾಗುವುದನ್ನು ಚಿತ್ರಿಸಿದೆ.

ಟ್ರೇಲರ್​ ವೀಕ್ಷಿಸಿದ ನೆಟಿಜನ್‌ಗಳು ತಮ್ಮ ಉತ್ಸಾಹ, ಕುತೂಹಲ ವ್ಯಕ್ತಪಡಿಸಲು, ಜೊತೆಗೆ ವಿದ್ಯುತ್‌ ಜಮ್ವಾಲ್​ನ ಅಭಿನಯಕ್ಕೆ ಮೆಚ್ಚುಗೆ ಸೂಚಿಸಲು ಸೋಷಿಯಲ್​ ಮೀಡಿಯಾ ವೇದಿಕೆ ಬಳಸಿಕೊಂಡರು. ಕೆಲವರು ಸಿನಿ ಉದ್ಯಮದಲ್ಲಿ ಈಗಾಗಲೇ ಸ್ಥಾನ ಪಡೆದಿರೋ ತಾರೆಯರು ಮತ್ತು ಹೊಸಬರ ನಡುವಿನ ಅವಕಾಶಗಳಲ್ಲಿನ ಅಸಮಾನತೆ ಎತ್ತಿ ತೋರಿಸಿದ್ದಾರೆ. ಇತರರು ವಿದ್ಯುತ್ ಅವರನ್ನು ನಿಜವಾದ ಆ್ಯಕ್ಷನ್ ಹೀರೋ ಎಂದು ಶ್ಲಾಘಿಸಿದ್ದಾರೆ. ಭಾರತೀಯ ಸಿನಿಮಾದ ಸ್ಟಂಟ್​​, ಆ್ಯಕ್ಷನ್​​ ಅವತಾರಕ್ಕೆ ಸಾಕ್ಷಿಯಾದ ಟ್ರೇಲರ್​ ಅನ್ನು ಪ್ರೇಕ್ಷಕರು ಗುಣಗಾನ ಮಾಡಿದ್ದಾರೆ. ಒಟ್ಟಾರೆ ಟ್ರೇಲರ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸೋಷಿಯಲ್​ ಮೀಡಿಯಾ ಬಳಕೆದಾರರು ವಿದ್ಯುತ್‌ ಜಮ್ವಾಲ್​ಗೆ ಬೆಂಬಲ ವ್ಯಕ್ತಪಡಿಸಿ ಕಾಮೆಂಟ್​ ಶೇರ್ ಮಾಡುತ್ತಿದ್ದಾರೆ. "ಕ್ರಾಕ್ - ಜೀತೇಗಾ ತೋ ಜಿಯೇಗಾ ಟ್ರೇಲರ್ - ವಿದ್ಯುತ್ ಜಮ್ವಾಲ್​ ಸ್ಮ್ಯಾಶ್ ಹಿಟ್‌ಗೆ ಅರ್ಹರು. ಒಂದು ಸ್ಮ್ಯಾಶ್ ಹಿಟ್ ಮತ್ತು ಅವರು ಬಾಲಿವುಡ್‌ನಲ್ಲಿ ಟಾಪ್ ಸ್ಟಾರ್ ಆಗುತ್ತಾರೆ. ಸ್ಟಾರ್​ ಕಿಡ್ಸ್ ಬಹಳ ಸುಲಭವಾಗಿ ಖ್ಯಾತ ನಿರ್ದೇಶಕ, ಬ್ಯಾನರ್ ಪಡೆಯುತ್ತಾರೆ. ಆದರೆ ಅರ್ಹ ವ್ಯಕ್ತಿ ಕಷ್ಟಪಡಬೇಕಾಗಿದೆ" ಎಂದು ಬರೆದಿದ್ದಾರೆ.

ಮತ್ತೊಬ್ಬ ಸೋಷಿಯಲ್​ ಮೀಡಿಯಾ ಬಳಕೆದಾರರು, ವಿದ್ಯುತ್‌ ಅವರ ನಟನಾ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. "ವಿದ್ಯುತ್ ಜಮ್ವಾಲ್ ಅವರು ನಿಜವಾದ ಆ್ಯಕ್ಷನ್ ಸ್ಟಾರ್. ಎಂಥಾ ಅದ್ಭುತ ಟ್ರೇಲರ್. ನಾನು ಈ ಸ್ಫೋಟಕ ಆ್ಯಕ್ಷನ್ ಸಿನಿಮಾವನ್ನು ನೋಡಲೇಬೇಕು" ಎಂದು ಬರೆದುಕೊಂಡಿದ್ದಾರೆ. ಇನ್ನೋರ್ವ ಅಭಿಮಾನಿ ಪ್ರತಿಕ್ರಿಯಿಸಿ, "ಇನ್‌ಕ್ರೆಡಿಬಲ್. ಕ್ರಾಕ್​​ ಟ್ರೇಲರ್ ಭಾರತೀಯ ಸಿನಿಮಾದ ಸ್ಟಂಟ್​ ಗೇಮ್​ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಹಿಂದೆಂದಿಗೂ ನೋಡದ ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್‌ ಸಿನಿಮಾ ವೀಕ್ಷಿಸಲು ಸಿದ್ಧರಾಗಿ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಭೇಟಿಯಾದ ಚಿರಂಜೀವಿ

ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆಯಲ್ಲಿರುವ ಮತ್ತೊಬ್ಬ ಸೋಷಿಯಲ್​ ಮೀಡಿಯಾ ಬಳಕೆದಾರ ಪ್ರತಿಕ್ರಿಯಿಸಿ, ''ಕ್ರಾಕ್​​ ಮಾಸ್ ಟ್ರೇಲರ್​. ಆ್ಯಕ್ಷನ್ ಕಿಂಗ್ ವಿದ್ಯುತ್ ಜಮ್ವಾಲ್ ಅವರ ಸ್ಕ್ರೀನ್ ಪ್ರೆಸೆಂಟೇಶನ್​​ ಮೈಂಡ್​ ಬ್ಲೋಯಿಂಗ್​​. ಅವರ ಆ್ಯಟಿಟ್ಯೂಡ್, ಅವರ ಡೈಲಾಗ್ಸ್, ಅವರ ಸ್ವಾಗ್ ಅಕ್ಷರಶಃ ಅದ್ಭುತ. ಕಥೆ ಆಸಕ್ತಿದಾಯಕವಾಗಿರುವಂತೆ ತೋರುತ್ತಿದೆ. ನಿರ್ದೇಶನ ಉನ್ನತ ಮಟ್ಟದ್ದಾಗಿದೆ. ಬ್ಲಾಕ್​ಬಸ್ಟರ್ ಲೋಡಿಂಗ್" ಎಂದು ಬರೆದುಕೊಂಡಿದ್ದಾರೆ. ಆದಿತ್ಯ ದತ್ ನಿರ್ದೇಶನದ ಈ ಚಿತ್ರ ಇದೇ ಫೆಬ್ರವರಿ 23 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: 28 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ: ಸಂಪೂರ್ಣ ಮಾಹಿತಿ ನಿಮಗಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.