ಕನ್ನಡದ ಬಿಗ್ ಬಾಸ್ 4ನೇ ವಾರಕ್ಕೆ ಕಾಲಿಟ್ಟಿದ್ದು, ಸ್ಪರ್ಧಿಗಳ ನಡುವಿನ ನಾಮಿನೇಷನ್ ಕೋಪ, ದ್ವೇಷ, ಮುನಿಸು, ದೊಡ್ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಮನೆಯಲ್ಲಿನ 15 ಜನರಿಗೂ ಮಾತಿನಲ್ಲೇ ಕೌಂಟರ್ ಕೊಡುತ್ತಿದ್ದ ಲಾಯರ್ ಜಗದೀಶ್ ಹಾಗೂ ನಟ ರಂಜಿತ್ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದು, ಅವರನ್ನು ಹೊರಕ್ಕೆ ಕಳಿಸಲು ಬಿಗ್ ಬಾಸ್ ಆದೇಶ ಕೊಟ್ಟ ಪ್ರೋಮೋ ವಿಡಿಯೋ ವೈರಲ್ ಆಗುತ್ತಿದೆ. ಆದರೆ, ಅದು ನಿಜವೇ ಎಂಬ ಸತ್ಯ ಇಂದಿನ ಎಪಿಸೋಡ್ನಲ್ಲಿ ಗೊತ್ತಾಗಲಿದೆ.
ಬಿಗ್ ಬಾಸ್ ಇಬ್ಬರನ್ನು ಹೊರ ಹಾಕುವ ಆದೇಶ ಮಾಡುತ್ತಿದ್ದಂತೆ ಇತರ ಸ್ಪರ್ಧಿಗಳು ಶಾಕ್ ಆಗಿದ್ದು, ಇಬ್ಬರನ್ನು ಕ್ಷಮಿಸುವಂತೆ ಬಿಗ್ ಬಾಸ್ ಬಳಿ ಮನವಿ ಮಾಡಿದ್ದಾರೆ. ಈ ನಡುವೆ ಇವರಿಬ್ಬರೂ ಮನೆಯಿಂದ ಹೊರ ಬಂದ ಬಳಿಕ ಉಳಿದ ಸ್ಪರ್ಧಿಗಳ ನಡುವಿನ ವಾರ್ ಕೂಡ ಬಿರುಸಾಗಿ ಸಾಗಿದೆ.
ಈ ವಾರದ ಕಿಚ್ಚನ ಪಂಚಾಯತಿಯಲ್ಲಿ ಮುಖ್ಯವಾಗಿ ಯಾರು ಯಾರಿಗೆ ಸುದೀಪ್ ಕಡೆಯಿಂದ ವಾರ್ನಿಂಗ್ ಆಗುತ್ತೆ? ಯಾವ ಸ್ಪರ್ಧಿಗೆ ಮತ್ತೊಬ್ಬ ಸ್ಪರ್ಧಿ ಕಂಡರೆ ಆಗೋಲ್ಲ? ಬಿಗ್ ಬಾಸ್ ಮನೆಯಿಂದ ಹೊರಬಂದ ಜಗದೀಶ್ ಹಾಗೂ ರಂಜಿತ್ ಅವರನ್ನ ಈ ಶೋಯಿಂದ ಸಂಪೂರ್ಣವಾಗಿ ಮನೆಗೆ ಕಳುಹಿಸಲಾಗಿದ್ಯಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ಒಂದೇ ತಿಂಗಳಿಗೆ ಬಿಗ್ ಬಾಸ್ ಮನೆ ರಣರಂಗ ಆಗಿರೋ ಬೆನ್ನಲ್ಲೇ ಈ ಶೋ ನೋಡುವ ವೀಕ್ಷಕರಲ್ಲೂ ಸುದೀಪ್ ಪಂಚಾಯಿತಿಯಲ್ಲಿ ಯಾರಿಗೆ ಕ್ಲಾಸ್ ತಗೆದುಕೊಳ್ಳುತ್ತಾರೆ? ಸುದೀಪ್ ಸೀರಿಯಸ್ ಡಿಸ್ಕಷನ್ ಮಧ್ಯೆ ಯಾರಿಗೆ ಕಾಲು ಎಳೆದು ಎಂಟರ್ಟೈನ್ ಮಾಡ್ತಾರೆ ಅಂತಾ ನೋಡುವುದಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ.
ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಮೊದಲಿಗೆ ಮನೆಯಿಂದ ಹೊರಗಡೆ ಹೋಗಿದ್ದಾರೆ ಅಂತಾ ಹೇಳುವ ಲಾಯರ್ ಜಗದೀಶ್ ಹಾಗೂ ರಂಜಿತ್ ಅವರನ್ನ ಸ್ಪೆಷಲ್ ರೂಮ್ನಲ್ಲಿ ಇರಿಸಿ ಅದ್ರಲ್ಲಿ ಜಗದೀಶ್ ಅವರನ್ನು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಳ್ಳುವ ಲಕ್ಷಣಗಳೂ ಇವೆ. ಯಾಕೆಂದರೆ ಜಗದೀಶ್ ನಾನೇ ಈ ಬಿಗ್ ಬಾಸ್ ಮನೆಯ ಗೇಮ್ ಚೇಂಜರ್ ಎಂಬ ಭ್ರಮೆಯಲ್ಲಿ ಎದುರಾಳಿ ಸ್ಪರ್ಧಿಗಳಿಗೆ ಕ್ಯಾರೇ ಅನ್ನದೇ ಮಾತಿನಲ್ಲೇ ಕೌಂಟರ್ ಕೊಡುತ್ತಿರುವುದು ಒಂದೆಡೆಯಾದರೆ, ಮಾತಿನ ಭರದಲ್ಲಿ ಮಾನಸ ಹಾಗೂ ಚೇತ್ರಾಗೆ ಏಕವಚನ ಪದ ಬಳಕೆ ಮಾಡಿರೋದು ತಪ್ಪು ಅನ್ನೋದು ಹೊರಗಡೆ ಈ ಶೋ ನೋಡ್ತಾ ಇರೋ ವೀಕ್ಷಕರು ಅಭಿಪ್ರಾಯ. ಅದಕ್ಕೆ ಜಗದೀಶ್ ಸರಿಯಾಗಿ ಸುದೀಪ್ ಅವರು ಬುದ್ಧಿ ಹೇಳಬೇಕು ಅಂತಾ ಜಗದೀಶ್ ವಿರುದ್ಧ ಸಾಕಷ್ಟು ವೀಕ್ಷಕರು ಆರೋಪ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಜಗದೀಶ್ಗೆ ಸುದೀಪ್ ಅವರು ಮಾತಿನಲ್ಲೇ ಖಡಕ್ ವಾರ್ನಿಂಗ್ ಕೊಡ್ತಾರಾ ಎಂಬುದನ್ನು ನೋಡಬೇಕು.
ನಾನು ಹುಚ್ಚ ವೆಂಕಟ್ಗಿಂತ ಒಂದು ಕೈ ಮೇಲೆ ಅಂದುಕೊಂಡಿರುವ ಜಗದೀಶ್, ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿರುವುದಾಗಿ ಆಡಿಯೋಯೊಂದನ್ನು ಹರಿ ಬಿಟ್ಟಿದ್ದಾರೆ. ಬಿಗ್ ಬಾಸ್ ಮನೆ ಕನ್ನಡಿ ಇದ್ದಂತೆ. ನಾನು ಈ ರೀತಿ ನಡೆದುಕೊಂಡಿರುವುದು ನನಗೇ ನಂಬೋದಿಕ್ಕೆ ಆಗುತ್ತಿಲ್ಲ. ಈ ಶೋಯಿಂದ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಮಿಸ್ ಯೂ ಬಿಗ್ ಬಾಸ್ ಅಂತಾ ಜಗದೀಶ್ ಒಂದು ಆಡಿಯೋ ಬಿಟ್ಟಿದ್ದಾರೆ. ಆದರೆ, ಅವರ ಮಾತುಗಳು ಕೇಳಿದ್ರೆ ಇನ್ನು ಬಿಗ್ ಬಾಸ್ ಮನೆಯಲ್ಲಿ ಇರ್ತಾರೆ ಅನ್ನೋದು ಗೊತ್ತಾಗುತ್ತೆ.
ಇದು ಜಗದೀಶ್ ಕಥೆಯಾದ್ರೆ, ರಂಜಿತ್ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಮೇಲೆ ಸ್ನೇಹಿತರು ಹಾಗೂ ಫ್ಯಾಮಿಲಿ ಅವರನ್ನ ನೋಡುಬೇಕಿತ್ತು. ಆದರೆ, ರಂಜಿತ್ ಎಲ್ಲಿದ್ದಾರೆ ಅನ್ನೋದು ಸರಿಯಾದ ಮಾಹಿತಿ. ಇದೆನ್ನೆಲ್ಲ ನೋಡಿದ್ರೆ ಜಗದೀಶ್ ಮತ್ತು ರಂಜಿತ್ ಮನೆಯ ಸ್ಪೆಷಲ್ ರೂಮಿನಲ್ಲಿದ್ದಾರೆ ಅನ್ನೋದು ಇವತ್ತಿನ ಎಪಿಸೋಡ್ನಲ್ಲಿ ಗೊತ್ತಾಗಲಿದೆ.
ಇದರ ಜೊತೆಗೆ ಕಿಚ್ಚನ ಪಂಚಾಯಿತಿಯಲ್ಲಿ ಮತ್ಯಾವ ಕಂಟೆಂಸ್ಟ್ಗೆ ಕಿಚ್ಚನ ಪಾಠ ಆಗುತ್ತೆ? ಯಾರು ಈ ವಾರ ನಾಮಿನೇಷನ್ ಆಗ್ತಾರೆ? ಬಿಗ್ ಬಾಸ್ ಮನೆಗೆ ಮತ್ತೆ ಲಾಯರ್ ಜಗದೀಶ್ ಹಾಗೂ ರಂಜಿತ್ಗೆ ಸ್ಪೆಷಲ್ ಎಂಟ್ರಿ ಆಗುತ್ತಾ? ಹೀಗೆ ಹಲವು ಪ್ರಶ್ನೆಗಳಿಗೆ ಕಿಚ್ಚನ ಪಂಚಾಯಿತಿಯಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ: ನಿಜಕ್ಕೂ ಮನೆಯಿಂದ ಹೊರಬಿದ್ರಾ ಲಾಯರ್ ಜಗದೀಶ್ - ರಂಜಿತ್; ಏನಿದು ಬಿಗ್ಬಾಸ್ ಟ್ವಿಸ್ಟ್?