ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸಿಸನ್ 11' ನಾಲ್ಕನೇ ವಾರಾಂತ್ಯ ಸಮೀಪಿಸಿದೆ. ಈ ಸೀಸನ್ನಲ್ಲಿ ಈಗಾಗಲೇ ಹಲವು ಘಟನೆಗಳು ನಡೆದು ಹೋಗಿವೆ. ಮುಂದಿನ ದಿನಗಳು ಹೇಗಿರಲಿವೆ? ಎಂಬ ಕುತೂಹಲವೂ ಮೂಡಿದೆ. ಇದೀಗ ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲು ಎನ್ನುವಂತೆ ಮನೆಯೊಳಗೆ ಜನಸಾಗರ ಹರಿದುಬಂದಿದೆ. ಆಟದಲ್ಲಿ ಬದಲಾವಣೆಗಳು ಕಂಡುಬಂದಿದ್ದು, ರಾತ್ರಿ ಪ್ರಸಾರ ಕಾಣಲಿರುವ ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.
''ರಾಜಕೀಯ ಅಂದ್ಮೇಲೆ ಜನರು ಬೇಡ್ವಾ? ಬಂದ್ರು ನೋಡಿ!'' ಬಿಗ್ ಬಾಸ್ ಕನ್ನಡ ಸೀಸನ್ 11 - ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಇಂದಿನ ಎಪಿಸೋಡ್ನ ಪ್ರೋಮೋ ಅನಾವರಣಗೊಳಿಸಿದೆ.
ಹೌದು, ಬಿಗ್ ಬಾಸ್ ಮನೆಯೊಳಗೀಗ ರಾಜಕೀಯ ಪಕ್ಷಗಳ ಹವಾ ಜೋರಾಗಿದೆ. ಮತದಾನ ಮಾಡುವ ನಿಟ್ಟಿನಲ್ಲಿ ಜನಸಾಮಾನ್ಯರು ಮನೆಯೊಳಗೆ ಪ್ರವೇಶಿಸಿದ್ದಾರೆ. ಪಕ್ಷಗಳ ಗೆಲುವು ಮತ್ತು ಸೋಲು ಇಂದು ನಿರ್ಧಾರ ಆಗಲಿದೆ.
ಮನೆಯೊಳಗೆ ಜನರ ಎಂಟ್ರಿ: ಸಾಮಾನ್ಯವಾಗಿ ಮನೆಯೊಳಗೆ ಸ್ಪರ್ಧಿಗಳನ್ನು ಹೊರತುಪಡಿಸಿದರೆ ಬೇರೆ ಯಾರ ಆಗಮನವೂ ಆಗುವುದಿಲ್ಲ. ಫಿನಾಲೆ ಹೊತ್ತಿನಲ್ಲಿ ಫೈನಲಿಸ್ಟ್ಗಳ ಮನೆ ಮಂದಿ ಎಂಟ್ರಿ ಕೊಡುತ್ತಾರೆ. ಅಗತ್ಯ ಬಿದ್ದಾಗ ಅಷ್ಟೇ ಬಿಗ್ ಬಾಸ್ ತಂಡದ ಸದಸ್ಯರು ಒಳ ಹೋಗುತ್ತಾರೆ. ಹಾಗಾಗಿ ಈ ಮನೆಯೊಳಗೆ ನೀವು ಇಷ್ಟೊಂದು ಜನರನ್ನು ಕಂಡಿರಲು ಸಾಧ್ಯವೇ ಇಲ್ಲ. ಆದ್ರಿಂದು ಮನೆಯೊಳಗೆ ಹೆಚ್ಚಿನ ಸಂಖ್ಯೆಯ ಜನರು ಎಂಟ್ರಿ ಕೊಟ್ಟಿದ್ದಾರೆ.
ರಾಜಕೀಯಕ್ಕೆ ಸಂಬಂಧಿಸಿದ ಟಾಸ್ಕ್ಗೆ ಸಂಬಂಧಪಟ್ಟಂತೆ ಮತದಾನದ ಹಂತ ನಡೆಯುತ್ತಿದೆ. ಹಾಗಾಗಿ, ವೋಟಿಂಗ್ಗೆ ಜನಸಾಮಾನ್ಯರನ್ನು ಕಳುಹಿಸಿಕೊಡಲಾಗಿದೆ. ಗಾರ್ಡನ್ ಏರಿಯಾದಲ್ಲಿ ಜನರು ಬಂದು ಕುಳಿತಿರುವುದನ್ನು ಕಂಡ ಸ್ಪರ್ಧಿಗಳು ಒಮ್ಮೆಗೆ ಆಶ್ಚರ್ಯಚಕಿತರಾಗಿದ್ದಾರೆ. ಮನೆಯೊಳಗೆ ಇಷ್ಟೊಂದು ಸಂಖ್ಯೆಯ ಜನಸಾಮಾನ್ಯರು ಬರಬಹುದು, ಅವರ ಅಭಿಪ್ರಾಯಗಳು ತಮ್ಮ ಟಾಸ್ಕ್ ಮೇಲೆ ಪರಿಣಾಮ ಬೀರಬಹುದು ಎಂದು ಬಹುಶಃ ಸ್ಪರ್ಧಿಗಳು ಊಹಿಸಿರಲಿಲ್ಲ.
ಹೀಗೆ ರಾಜಕೀಯದಾಟಕ್ಕೆ ಸಂಬಂಧಿಸಿದಂತೆ ಸ್ಪರ್ಧಿಗಳು ಮತ್ತು ಜನಸಾಮಾನ್ಯರ ನಡುವೆ ಮಾತುಕತೆ ನಡೆದಿದೆ. ಕೊನೆಗೆ ಜನರ ಕಡೆಯಿಂದ ಧಿಕ್ಕಾರ ಎಂಬ ಕೂಗು ಸಹ ಕೇಳಿಬಂದಿದೆ.
ಇದನ್ನೂ ಓದಿ: ಆರೋಗ್ಯ ಸಮಸ್ಯೆಯ ನಡುವೆ 'ಸಿಟಾಡೆಲ್' ವೆಬ್ ಸೀರಿಸ್ ಚಿತ್ರೀಕರಣ ಮುಗಿಸಿರುವುದು ಅಚ್ಚರಿ ತರಿಸಿತು: ಸಮಂತಾ
ಇನ್ನೂ, ಕಳೆದ ಸಂಚಿಕೆಯಲ್ಲಿ ''ರಾಜಕೀಯ ಚದುರಂಗದಲ್ಲಿ ಮನೆಮಂದಿಯ ಹೈವೋಲ್ಟೇಜ್ ಕಾದಾಟ!''ದ ವಾತಾವರಣ ನಿರ್ಮಾಣ ಆಗಿತ್ತು. ಆಟದ ರಭಸದಲ್ಲಿ ಕಿತ್ತಾಟಗಳು ಜೋರಾಗಿದ್ದವು. ಹಾಗಾಗಿ ಟಾಸ್ಕ್ ಒಂದನ್ನು ನಿಲ್ಲಿಸಬೇಕಾಯಿತು.
ಇದನ್ನೂ ಓದಿ: ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ 'ಗ್ರೇ ಡಿವೋರ್ಸ್'ಗೆ ಮುಂದಾಗಿದ್ದಾರಾ? ಏನಿದು ಗ್ರೇ ಡಿವೋರ್ಸ್!
ಮತ್ತೊಂದೆಡೆ, ಮನೆಯೊಳಗಿನ ರಾಜಕೀಯ ವಿಚಾರಿಸಲು ಜನಪ್ರಿಯ ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್ ಆಗಮಿಸಿದ್ದಾರೆ. ಅವರಿಗೆ ಸಂಬಂಧಪಟ್ಟ ಟಾಸ್ಕ್ ಇಂದಿನ ಎಪಿಸೋಡ್ನಲ್ಲಿ ಪ್ರಸಾರ ಆಗಲಿದೆ.