ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ರಜತ್ ಕಿಶನ್ ಹಾಗೂ ಶೋಭಾ ಶೆಟ್ಟಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಆಗಮಿಸಿದ್ದು, ಮನೆಯ ಆಟ ಒಂದು ಹಂತ ಮುಂದಕ್ಕೋಗಿದೆ. ರೋಚಕ ತಿರುವುಗಳೊಂದಿಗೆ ಎಂಟನೇ ವಾರದ ಆಟ ಸಾಗಿದೆ. ಕ್ಯಾಪ್ಟನ್ ಭವ್ಯಾ ಮತ್ತು ವೈಲ್ಡ್ ಕಾರ್ಡ್ ಎಂಟ್ರಿ ಶೋಭಾ ಶೆಟ್ಟಿ ನೇತೃತ್ವದಲ್ಲಿ ಎರಡು ತಂಡಗಳು ಈ ವಾರದ ಟಾಸ್ಕ್ನಲ್ಲಿ ಭಾಗಿಯಾಗಿವೆ. ಆಟದಲ್ಲಿ ತಂತ್ರ, ಕುತಂತ್ರಗಳನ್ನು ಸ್ಪರ್ಧಿಗಳು ಉಪಯೋಗಿಸುತ್ತಾರೆ. ಒಂದು ಮಟ್ಟದ ತಂತ್ರ ಆಟಗಾರನಿಗೆ ಬೇಕೇ ಬೇಕು. ಆದ್ರೆ ಎದುರಾಳಿಗಳ ತಂತ್ರವನ್ನು ಹಲವು ಬಾರಿ ಒಪ್ಪಿಕೊಳ್ಳಲಾಗದ ಪರಿಸ್ಥಿತಿಗೆ ಬಂದು ತಲುಪುತ್ತಾರೆ ಕೆಲ ಸ್ಪರ್ಧಿಗಳು. ಆಗ ಕುತಂತ್ರ ಎಂಬ ಮಾತುಗಳು ಕೇಳಿಬರುತ್ತವೆ. ಇದೀಗ ಟಾಸ್ಕ್ನ ಭಾಗವಾಗಿರೋ ಚೈತ್ರಾ ಕುಂದಾಪುರ ಅವರು ಗುಂಪು ಕಟ್ಟಿಕೊಂಡು ಬರೋದಿಲ್ಲ, ಸಿಂಗಲ್ ಸಿಂಹದಂತೆ ಹೊಡೆಯುತ್ತೇನೆ ಎಂದು ಕಿಡಿಕಾರಿದ್ದಾರೆ.
ಚೈತ್ರಾ ಕುಂದಾಪುರ ಅವರ ಆಕ್ರೋಶದ ಒಂದು ಚಿಕ್ಕ ನೋಟವನ್ನು ಬಿಗ್ ಬಾಸ್ ಪ್ರೋಮೋ ಬಿಟ್ಟುಕೊಟ್ಟಿದೆ. ''ಪಾಯಿಂಟ್ಸ್ಗಾಗಿ ಟಾರ್ಗೆಟ್ ಪಾಯಿಂಟ್ ಆಗೋರು ಯಾರು?''. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಪ್ರೋಮೋ ಅನಾವರಣಗೊಂಡಿದೆ. ಸ್ಪರ್ಧಿಗಳ ನಡುವೆ ವಾದ ವಿವಾದ ಆಗುವಂತೆ ತೋರಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಿದೆ.
ಬಿಗ್ ಬಾಸ್ ಮನೆಯಲ್ಲೀಗ ರೆಡ್ ಹಾಗೂ ಬ್ಲ್ಯೂ ಎಂಬ ಎರಡು ತಂಡಗಳ ರಚನೆಯಾಗಿದೆ. ಕೆಂಪು ಬಣ್ಣದ ತಂಡಕ್ಕೆ ಶೋಭಾ ಶೆಟ್ಟಿ ನಾಯಕಿ. ನೀಲಿ ಬಣ್ಣದ ತಂಡಕ್ಕೆ ಭವ್ಯಾ ನಾಯಕಿ. ಎರಡು ತಂಡಗಳು ಟಾಸ್ಕ್ಗಳಲ್ಲಿ ಭಾಗಿಯಾಗುತ್ತಿವೆ. ಜೊತೆಗೆ, ವಿರೋಧ ತಂಡದ ಬಳಿ ಇರುವ ಹಣವನ್ನು ಪಡೆಯಲು ತಂತ್ರಗಳನ್ನು ರೂಪಿಸುತ್ತಿವೆ. ಎರಡೂ ಟೀಮ್ಗಳು ಸ್ಟ್ರಾಟಜಿಗಳನ್ನು ಮಾಡುತ್ತಾ ಆಟ ಮುಂದುವರಿಸಿವೆ.
ಇದನ್ನೂ ಓದಿ: ಆರಂಭದಲ್ಲೇ ರಜತ್, ಶೋಭಾ ಆರ್ಭಟ: ಉಗ್ರಂ ಮಂಜು ವಿರುದ್ಧ ಆಕ್ರೋಶ; ಬಿಗ್ ಬಾಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು
ಇಂದು ಬಿಡುಗಡೆ ಆಗಿರುವ ಪ್ರೋಮೋ ಪ್ರಕಾರ, ಚೈತ್ರಾ ಬಳಿ ಇದ್ದ ಹಣವನ್ನು ಭವ್ಯಾ ತಂಡದ ಗೌತಮಿ ಅವರು ಯಾಮಾರಿಸಿ, ಎತ್ತಿಕೊಂಡಿದ್ದಾರೆ. ಅಸಮಧಾನಗೊಂಡ ಚೈತ್ರಾ, ಎಲ್ಲರೂ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಗುಂಪುಗಾರಿಕೆ ಮಾಡಿಕೊಂಡು ನಾನು ಕುತಂತ್ರ ಮಾಡೋದಿಲ್ಲ. ಡ್ರಾಮಾ ಕ್ವೀನ್ಗಳು ಯಾರು ಎಂಬುದು ಗೊತ್ತಾಯ್ತು. ನನ್ನ ಆಟವನ್ನು ಇನ್ಮೇಲೆ ಶುರು ಹಚ್ಚಿಕೊಳ್ತೇನೆ. ಗುಂಪು ಕಟ್ಟಿಕೊಂಡು ಪ್ಲ್ಯಾನ್ ಮಾಡೋದಿಲ್ಲ. ಸಿಂಗಲ್ ಸಿಂಹದಂತೆ ಹೊಡೆಯುತ್ತೇನೆಂದು ಗರ್ಜಿಸಿದ್ದಾರೆ ಚೈತ್ರಾ ಕುಂದಾಪುರ.
ಇದನ್ನೂ ಓದಿ: ಶ್ರೀಮುರಳಿಯ 'ಬಘೀರ' ವೀಕ್ಷಿಸಿಲ್ವೇ? ಹಾಗಾದ್ರೆ ಈ ಒಟಿಟಿಯಲ್ಲಿ ನೋಡಿ: ಈವರೆಗಿನ ಕಲೆಕ್ಷನ್ ಮಾಹಿತಿ ನಿಮಗಾಗಿ
ಇನ್ನು ಕಳೆದ ಸಂಚಿಕೆಯಲ್ಲಿ ಎದುರಾಳಿ ತಂಡದ ಐಶ್ವರ್ಯಾ ಬಳಿ ಇದ್ದ ಹಣವನ್ನು ಚೈತ್ರಾ ಎತ್ತಿಕೊಂಡಿದ್ದರು. ಇದೀಗ ಚೈತ್ರಾ ಅವರ ಹಣವನ್ನು ಭವ್ಯಾ ತಂಡ ಯಾಮಾರಿಸಿ ತೆಗೆಯುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಆದ್ರೆ ಇದನ್ನು ಅರಗಿಸಿಕೊಳ್ಳಲು ಚೈತ್ರಾ ಅವರ ಕೈಯಿಂದ ಸಾಧ್ಯವಾಗಿಲ್ಲ.