ETV Bharat / entertainment

ಸ್ಪ್ಯಾನಿಷ್ ಮಹಿಳೆ ಮೇಲೆ ಅತ್ಯಾಚಾರ: ದುಲ್ಕರ್ ಸಲ್ಮಾನ್ ಸೇರಿ ಸೆಲೆಬ್ರಿಟಿಗಳಿಂದ ಖಂಡನೆ - ದುಲ್ಕರ್ ಸಲ್ಮಾನ್

ಜಾರ್ಖಂಡ್‌ನಲ್ಲಿ ಸ್ಪ್ಯಾನಿಷ್ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸುದ್ದಿಗೆ ರಿಚಾ ಚಡ್ಡಾ, ಚಿನ್ಮಯಿ ಶ್ರೀಪಾದ ಮತ್ತು ದುಲ್ಕರ್ ಸಲ್ಮಾನ್ ಪ್ರತಿಕ್ರಿಯಿಸಿದ್ದಾರೆ.

Spanish Woman Gangrape: Richa Chadha, Dulquer Salmaan, Chinmayi Sripaada React
ಸ್ಪ್ಯಾನಿಷ್ ಮಹಿಳೆ ಮೇಲೆ ಅತ್ಯಾಚಾರ; ದುಲ್ಕರ್ ಸಲ್ಮಾನ್ ಸೇರಿ ಸೆಲೆಬ್ರಿಟಿಗಳಿಂದ ಖಂಡನೆ!
author img

By ETV Bharat Karnataka Team

Published : Mar 3, 2024, 8:19 PM IST

ಜಾರ್ಖಂಡ್‌ನಲ್ಲಿ ಸ್ಪ್ಯಾನಿಷ್ ದಂಪತಿ ಮೇಲೆ ದಾಳಿ ನಡೆದಿರುವ ಘಟನೆಗೆ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ನಟರಾದ ರಿಚಾ ಚಡ್ಡಾ ಮತ್ತು ದುಲ್ಕರ್ ಸಲ್ಮಾನ್, ಗಾಯಕಿ ಚಿನ್ಮಯಿ ಶ್ರೀಪಾದ ಸೋಷಿಯಲ್​ ಮೀಡಿಯಾ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಏಳು ಮಂದಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದು, ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ಈ ಕೃತ್ಯ ಸಮಾಜದ ನಾಚಿಕೆಗೇಡಿನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ನಟಿ ರಿಚಾ ಚಡ್ಡಾ ತಿಳಿಸಿದ್ದಾರೆ. ವಿದೇಶಿಯರನ್ನು ಭಾರತೀಯ ಮಹಿಳೆಯರಂತೆ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ. "ನಾಚಿಕೆಗೇಡು! ಭಾರತೀಯರು ತಮ್ಮ ಮಹಿಳೆಯರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯಂತೆ ವಿದೇಶಿಯರನ್ನು ನಡೆಸಿಕೊಳ್ಳುತ್ತಿದ್ದಾರೆ. ನಮ್ಮ ಕೊಳೆತ ಸಮಾಜಕ್ಕೆ ನಾಚಿಕೆಯಾಗಲಿ" ಎಂದು ದುಮ್ಕಾದ ಸಾಮೂಹಿಕ ಅತ್ಯಾಚಾರದ ಬಗ್ಗೆ ನಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಸ್ಟೋರಿಯಲ್ಲಿ ದಕ್ಷಿಣ ಚಿತ್ರರಂಗದ ಖ್ಯಾತ ನಟ ದುಲ್ಕರ್ ಸಲ್ಮಾನ್, ಸ್ಪ್ಯಾನಿಷ್​​​​ ದಂಪತಿಯ ವಿಡಿಯೋ ಹಂಚಿಕೊಂಡು ಅಸಮಧಾನ ಹೊರಹಾಕಿದ್ದಾರೆ. "ಘಟನೆ ಬಗ್ಗೆ ಕೇಳಿ ಆಘಾತವಾಗಿದೆ. ನೀವಿಬ್ಬರೂ ಇತ್ತೀಚೆಗೆ ಕೊಟ್ಟಾಯಂಗೆ ಭೇಟಿ ನೀಡಿದ್ದಿರಿ. ಆಪ್ತ ಸ್ನೇಹಿತರು ನಿಮ್ಮ ಆತಿಥ್ಯ ವಹಿಸಿದ್ದರು. ಹೀಗೆ ಎಲ್ಲಿಯೂ, ಯಾರಿಗೂ ಆಗಬಾರದು" ಎಂದು ಬರೆದುಕೊಂಡಿದ್ದಾರೆ. ಗಾಯಕಿ ಚಿನ್ಮಯಿ ಶ್ರೀಪಾದ ಕೂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಂಥ ಹೀನ ಕೃತ್ಯಗಳನ್ನು ತೀವ್ರವಾಗಿ ಖಂಡಿಸಿದ ಚಿನ್ಮಯಿ ಶ್ರೀಪಾದ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪ್ರವಾಸಕ್ಕೆ ಬಂದ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ನೇಪಾಳಕ್ಕೆ ತೆರಳುತ್ತಿದ್ದ ಸ್ಪ್ಯಾನಿಷ್ ದಂಪತಿ ಮೇಲೆ ಜಾರ್ಖಂಡ್​ನ ದುಮ್ಕಾ ಜಿಲ್ಲೆಯ ಕುರ್ಮಹತ್ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅಲ್ಲದೇ ಆರೋಪಿಗಳೆಲ್ಲರೂ ದರೋಡೆಯಲ್ಲೂ ಭಾಗಿಯಾಗಿದ್ದಾರೆ. ಘಟನೆಯ ನಂತರ ಮೂವರು ಶಂಕಿತರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ರಾಮನವಮಿಗೆ ಯಶ್​​, ರಣ್​ಬೀರ್​​, ಸಾಯಿಪಲ್ಲವಿಯ ''ರಾಮಾಯಣ'' ಅನೌನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.