ETV Bharat / entertainment

ನೂತನ ಸಂಸತ್ ಭವನಕ್ಕೆ ರೋಹಿತ್​ ಶೆಟ್ಟಿ ಭೇಟಿ: ಖ್ಯಾತ ನಿರ್ದೇಶಕ ಹೇಳಿದ್ದಿಷ್ಟು - Rohit Shetty Visits Parliament - ROHIT SHETTY VISITS PARLIAMENT

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ನೂತನ ಸಂಸತ್ ಭವನಕ್ಕೆ ಭೇಟಿ ನೀಡಿದ್ದಾರೆ.

Rohit Shetty visits new Parliament
ಸಂಸತ್ ಭವನಕ್ಕೆ ರೋಹಿತ್​ ಶೆಟ್ಟಿ ಭೇಟಿ (Rohit Shetty Instagram)
author img

By ETV Bharat Karnataka Team

Published : May 15, 2024, 1:16 PM IST

ಆ್ಯಕ್ಷನ್ ಸಿನಿಮಾಗಳಿಗೆ ಜನಪ್ರಿಯರಾಗಿರುವ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ನೂತನ ಸಂಸತ್ ಭವನಕ್ಕೆ ಭೇಟಿ ನೀಡಿದ್ದರು. ನಿರ್ದೇಶಕರು ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದು, ಹೊಸ ಸಂಸತ್ತಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ರೋಹಿತ್ ಶೆಟ್ಟಿಗೂ ಮೊದಲು, ಆಯುಷ್ಮಾನ್ ಖುರಾನಾ ಮತ್ತು ಜಾಕಿ ಭಗ್ನಾನಿ ಕೂಡ ಭೇಟಿ ನೀಡಿದ್ದರು.

ಹಲವು ಯಶಸ್ವಿ ಸಿನಿಮಾಗಳು, ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿರುವ ರೋಹಿತ್ ಶೆಟ್ಟಿ ಇಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​​ ಅಕೌಂಟ್​ನಲ್ಲಿ ತಮ್ಮ ವಿಡಿಯೋ ಶೇರ್ ಮಾಡಿದ್ದಾರೆ. ಈ ದೃಶ್ಯದಲ್ಲಿ ದೇಶದ ಹೊಸ ಸಂಸತ್ತಿನ ಒಂದು ನೋಟವಿದೆ. ಇಡೀ ಸಂಸತ್​ ಅನ್ನು ಒಂದು ರೌಂಡ್​​ ಹೊಡೆದ ಬಾಲಿವುಡ್​​ನ ಖ್ಯಾತ ನಿರ್ದೇಶಕರು ಮಾಹಿತಿ ಪಡೆದುಕೊಳ್ಳುತ್ತಿರುವುದನ್ನು ಕಾಣಬಹುದು. ಪೋಸ್ಟ್​ ಶೇರ್ ಮಾಡಿದ ರೋಹಿತ್ ಶೆಟ್ಟಿ, 'ನವ ಭಾರತದ ನೂತನ ಸಂಸತ್​ ಭವನ. ಇದು ಕೇವಲ ಪಾರ್ಲಿಮೆಂಟ್​ ಅಲ್ಲ. ಸಂಪೂರ್ಣ ಭಾರತ. ಈ ಬಗ್ಗೆ ಹೆಮ್ಮೆ ಮತ್ತು ಗೌರವದ ಭಾವನೆ ಮೂಡುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ಇನ್ನು ಸಿನಿಮಾ ವಿಚಾರ ಗಮನಿಸುವುದಾದರೆ, ರೋಹಿತ್ ಶೆಟ್ಟಿ ಅವರ ಮುಂದಿನ ಆ್ಯಕ್ಷನ್​ ಪ್ರೊಜೆಕ್ಟ್​​ 'ಸಿಂಗಮ್​ ಎಗೈನ್'​​​. ಸಿಂಗಮ್​ ಭಾಗ 3ರ ಸಲುವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಆಗಸ್ಟ್ 15 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಅಂದೇ ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್' ಕೂಡ ಬಿಡುಗಡೆ ಆಗಲಿದೆ. ಬಾಕ್ಸ್ ಆಫೀಸ್​​​ ಪೈಪೋಟಿ ಪಕ್ಕಾ ಅಂತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ: 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ': ಯೂತ್​​ ಸಬ್ಜೆಕ್ಟ್ ಸಿನಿಮಾದ ಟ್ರೇಲರ್ ರಿಲೀಸ್ - Vidhyarthi Vidyarthiniyare Trailer

ಸಿಂಗಮ್​ ಭಾಗ 3ರಲ್ಲಿ ಬಾಲಿವುಡ್​ನ ಗಣ್ಯರಾದ ಅಜಯ್ ದೇವ್​​ಗನ್, ಕರೀನಾ ಕಪೂರ್ ಖಾನ್, ಅಕ್ಷಯ್ ಕುಮಾರ್, ರಣ್​​​​ವೀರ್ ಸಿಂಗ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್ ಮತ್ತು ಅರ್ಜುನ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆ ಸಿನಿಮಾ ದೊಡ್ಡ ಮಟ್ಟದಲ್ಲೇ ಸದ್ದು ಮಾಡೋ ಸಾಧ್ಯತೆ ಇದೆ. ಈ ಹಿಂದೆ ತೆರೆಕಂಡಿರುವ ಸಿಂಗಮ್​ 1 ಮತ್ತು 2 ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುವಲ್ಲಿ ಯಶಸ್ವಿಯಾಗಿದೆ. ಬಾಕ್ಸ್​​ ಆಫೀಸ್​​ನಲ್ಲೂ ಗೆದ್ದಿದೆ. ಇದೀಗ ಬರುತ್ತಿರುವ ಮೂರನೇ ಕಂತಿನಲ್ಲಿ ಬಿಗ್​​ ಸ್ಟಾರ್​ ಕಾಸ್ಟ್ ಇದ್ದು, ಪ್ರೇಕ್ಷಕರ ಕುತೂಹಲ ಕೊಂಚ ಹೆಚ್ಚೇ ಎನ್ನಬಹುದು.

ಇದನ್ನೂ ಓದಿ: ಕೆಕೆಆರ್‌ನ ರಿಂಕು ರಾಕ್ಸ್! ಅಲ್ಲು ಅರ್ಜುನ್‌ 'ಪುಷ್ಪ' ಸಿನಿಮಾ ಹಾಡಿಗೆ ಮಸ್ತ್‌ ಡ್ಯಾನ್ಸ್- ವಿಡಿಯೋ ನೋಡಿ - Rinku Singh Pushpa Dance

ಕೆಲ ದಿನಗಳ ಹಿಂದಷ್ಟೇ ರಾಕುಲ್​ ಪ್ರೀತ್​​ ಸಿಂಗ್​ ಮತ್ತು ಜಾಕಿ ಭಗ್ನಾನಿ ಹೊಸ ಸಂಸತ್​​ ಭವನಕ್ಕೆ ಭೇಟಿ ನೀಡಿ, ಗಮನ ಸೆಳೆದಿದ್ದರು. ತಾವು ಶೇರ್ ಮಾಡಿದ ಪೋಸ್ಟ್​​ಗೆ ಮರೆಯಲಾಗದ ಕ್ಷಣ ಎಂದು ಬರೆದುಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.