ETV Bharat / entertainment

ಕಾದಂಬರಿ ಜೇತ್ವಾನಿ ಕುಟುಂಬಕ್ಕೆ ರಾಜಕೀಯ ಮುಖಂಡನಿಂದ ಕಿರುಕುಳ: ಮಾಧ್ಯಮಗಳೆದುರು ಕಣ್ಣೀರಿಟ್ಟ ನಟಿ - Kadambari Jethwani

ಬಾಲಿವುಡ್ ನಟಿ ಕಾದಂಬರಿ ಜೇತ್ವಾನಿ ಅವರು ರಾಜಕೀಯ ಮುಖಂಡ, ಚಲನಚಿತ್ರ ನಿರ್ಮಾಪಕ ಕೆವಿಆರ್ ವಿದ್ಯಾಸಾಗರ್ ವಿರುದ್ಧ ದೂರು ದಾಖಲಿಸಿದ್ದಾರೆ. ವಿದ್ಯಾಸಾಗರ್ ತಮ್ಮ ಮತ್ತು ತಮ್ಮ ಪೋಷಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಹಿರಿಯಾಧಿಕಾರಿಗಳು ಭಾಗಿ ಆಗಿದ್ದಾರೆಂದು ಆರೋಪಿಸಿದ್ದಾರೆ.

Bollywood actress Kadambari Jethwani
ನಟಿ ಕಾದಂಬರಿ ಜೇತ್ವಾನಿ (ETV Bharat)
author img

By ETV Bharat Karnataka Team

Published : Aug 31, 2024, 3:05 PM IST

ವಿಜಯವಾಡ (ಆಂಧ್ರಪ್ರದೇಶ): ಬಾಲಿವುಡ್ ನಟಿ ಕಾದಂಬರಿ ಜೇತ್ವಾನಿ ಅವರು ಶುಕ್ರವಾರದಂದು ಎನ್‌ಟಿಆರ್ ಪೊಲೀಸ್ ಕಮಿಷನರ್ ಎಸ್‌ವಿ ರಾಜಶೇಖರ್ ಬಾಬು ಅವರನ್ನು ಭೇಟಿಯಾಗಿ ರಾಜಕೀಯ ಮುಖಂಡ, ಚಲನಚಿತ್ರ ನಿರ್ಮಾಪಕ ಕೆವಿಆರ್ ವಿದ್ಯಾಸಾಗರ್ ವಿರುದ್ಧ ದೂರು ದಾಖಲಿಸಿದ್ದಾರೆ. ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ನಟಿ ಅನುಭವಿಸಿದ ಕಿರುಕುಳದ ಬಗ್ಗೆ ಮಹತ್ವದ ವಿವರಗಳನ್ನು ದೂರಿನಲ್ಲಿ ಬಹಿರಂಗಪಡಿಸಲಾಗಿದೆ.

ಫೆಬ್ರವರಿಯಲ್ಲಿ ಇಬ್ರಾಹಿಂಪಟ್ಟಣಂ ಪೊಲೀಸರೊಂದಿಗೆ ಕೆವಿಆರ್​​​ ವಿದ್ಯಾಸಾಗರ್ ಅವರು ತಮ್ಮ ಕುಟುಂಬದ ಮೇಲೆ ಇಲ್ಲಸಲ್ಲದ ಸುಲಿಗೆ ಪ್ರಕರಣ (forgery and extortion) ಹೊರಿಸಿದ್ದಾರೆ. ವಿದ್ಯಾಸಾಗರ್ ಸೂಚನೆ ಮೇರೆಗೆ ಪೊಲೀಸರು ಮುಂಬೈಗೆ ಆಗಮಿಸಿದರು. ಯಾವುದೇ ಮುನ್ಸೂಚನೆಯಿಲ್ಲದೇ ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ಬಂಧಿಸಿ ವಿಜಯವಾಡಕ್ಕೆ ಕರೆತಂದು ಕಸ್ಟಡಿಯಲ್ಲಿ ಇರಿಸಲಾಯಿತು ಎಂದು ನಟಿ ಆರೋಪಿಸಿದ್ದಾರೆ.

ಕಾನೂನುಬಾಹಿರ ಬಂಧನ ಮತ್ತು ದುರ್ವರ್ತನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆಂದು ನಟಿ ಆರೋಪಿಸಿದ್ದಾರೆ. ಕಾದಂಬರಿ ಪ್ರಕಾರ, ಇಬ್ರಾಹಿಂಪಟ್ಟಣಂ ಪೊಲೀಸರೊಂದಿಗೆ ಮುಂಬೈಗೆ ಬಂದ ತಂಡದಲ್ಲಿ ಮೂವರು ಐಪಿಎಸ್ ಅಧಿಕಾರಿಗಳು ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸಾಮಾನ್ಯ ಉಡುಗೆ ಧರಿಸಿದ್ದರು. ಜೇತ್ವಾನಿ ಮತ್ತು ಪೋಷಕರನ್ನು ಸುಮಾರು 40 ದಿನಗಳ ಕಾಲ ವಶದಲ್ಲಿಡಲಾಗಿತ್ತು.

ಮಾಧ್ಯಮಗಳೆದುರು ಕಣ್ಣೀರಿಟ್ಟ ನಟಿ ಕಾದಂಬರಿ ಜೇತ್ವಾನಿ (ETV Bharat)

ತಮ್ಮ ವಿರುದ್ಧ ಪ್ರಕರಣ ದಾಖಲಾಗುವ ಮುನ್ನ ಮುಂಬೈನ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೀತಾರಾಮಾಂಜನೇಯು, ಕಾಂತಿ ರಾಣಾ ಮತ್ತು ವಿಶಾಲ್ ಗುನ್ನಿ ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಾದಂಬರಿ ತಮ್ಮ ವಕೀಲರೊಂದಿಗೆ ವಿಜಯವಾಡದ ರಾಜಶೇಖರ್ ಬಾಬು ಅವರ ಕಚೇರಿಗೆ ತೆರಳಿ ನ್ಯಾಯ ಕೋರಿದ್ದಾರೆ. ತಾವು ಎದುರಿಸುತ್ತಿರುವ ಕಿರುಕುಳದ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ. ನಟಿಯ ದೂರಿನ ಪ್ರತಿಯನ್ನು ಎಸಿಪಿ ಶ್ರವಂತಿ ರಾಯ್ (ವಿಚಾರಣಾ ಅಧಿಕಾರಿ)ಗೆ ನೀಡಲಾಯಿತು. ಆಡಿಯೋ, ವಿಡಿಯೋ ಮತ್ತು ಫೋಟೋಗಳು ಸೇರಿದಂತೆ ಕೆಲ ಸಾಕ್ಷ್ಯಗಳನ್ನು ನಟಿ ಒದಗಿಸಿದ್ದಾರೆ. ಶುಕ್ರವಾರ ಸಂಜೆ 6:15ಕ್ಕೆ ವಿಚಾರಣೆ ಆರಂಭವಾಗಿ ರಾತ್ರಿ 10:15ರ ವರೆಗೆ ನಡೆಯಿತು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿರು ನಟಿ ಕಾದಂಬರಿ ಜೇತ್ವಾನಿ, "ದೇಶದ ಪ್ರಾಮಾಣಿಕ ನಾಗರಿಕರು ತಮ್ಮ ಹೆಸರನ್ನು ವಿವಾದಗಳಲ್ಲಿ ಸಿಲುಕಿಕೊಳ್ಳಲಿ ಎಂದು ಎಂದಿಗೂ ಬಯಸುವುದಿಲ್ಲ. ಆದ್ರೆ ನನ್ನನ್ನು ಕಾನೂನುಬಾಹಿರವಾಗಿ ಈ ವಿಷಯಕ್ಕೆ ಎಳೆಯಲಾಗಿದೆ. ಜನರು ತಮಗೆ ಬೇಕಾದುದನ್ನು ಮಾಡುತ್ತಾರೆ. ಆದ್ರೆ ನನಗೆ ದೇವರ ಮೇಲೆ ಸಂಪೂರ್ಣ ನಂಬಿಕೆಯಿದೆ. ದೇಶದಲ್ಲಿ ಒಳ್ಳೆಯ ಜನರಿದ್ದಾರೆ. ಪ್ರಾಮಾಣಿಕ ಜನರು ಮುಗ್ಧರಿಗೆ ನೋವಾಗಲು ಬಿಡುವುದಿಲ್ಲ'' ಎಂದು ತಿಳಿಸಿದರು.

ಪವರ್​ಫುಲ್​​ ಜನರಿಗೆ ಕ್ಲೀನ್ ಚಿಟ್ ನೀಡಲು ನನ್ನ ಕುಟುಂಬಕ್ಕೆ ಕಿರುಕುಳ ನೀಡಲಾಯಿತು ಎಂದು ನಟಿ ಹೇಳಿಕೊಂಡಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ರಾಜಕೀಯ ಕೈದಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಈ ಹಿಂದೆ ವಿಜಯವಾಡ ಕಮಿಷನರ್ ಕಂಠಿ ರಾಣಾ ಟಾಟಾ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ ಅಧಿಕಾರಿಗಳೇ ಇದಕ್ಕೆ ಹೊಣೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಟಿಯ ವಕೀಲ ಎನ್ ಶ್ರೀನಿವಾಸ್ ರಾವ್ ಮಾತನಾಡಿ, "ನಟಿ ಗೌರವಾನ್ವಿತ ಕುಟುಂಬಕ್ಕೆ ಸೇರಿದವರು. ಅವರ ತಂದೆಗೆ 83 ವರ್ಷ, ನಿವೃತ್ತ ಸೇನಾ ಅಧಿಕಾರಿ. ಅವರ ತಾಯಿ ಆರ್‌ಬಿಐನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಆಂಧ್ರಪ್ರದೇಶ ಪೊಲೀಸರು ಅವರ ವಿರುದ್ಧ ಕ್ರೂರವಾಗಿ ವರ್ತಿಸಿದ್ದಾರೆ. ಹಿರಿಯ ಅಧಿಕಾರಿಗಳು ಮುಂಬೈನಲ್ಲಿ ರಾಜಿಸಂಧಾನಕ್ಕಾಗಿ ನಟಿಗೆ ಕಿರುಕುಳ ನೀಡಿದ್ದಾರೆ. ಕೆಲ ಪ್ರಮುಖ ವ್ಯಕ್ತಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ವಿಷಯದಲ್ಲಿ ರಾಜಕೀಯ ವ್ಯಕ್ತಿಗಳು ಭಾಗಿತ್ವ ಇದೆ'' ಎಂದು ತಿಳಿಸಿದರು.

ಇದನ್ನೂ ಓದಿ: ಬರ್ತ್​​​ಡೇ, ಬಿಗ್​​ಬಾಸ್​ ಬಗ್ಗೆ ಮಾಹಿತಿ ಕೊಟ್ಟ ಸುದೀಪ್​​: 'ದರ್ಶನ್ ಬಗ್ಗೆ ಮಾತನಾಡಿ ನೋವು ಕೊಡೋದು ಬೇಡ'ವೆಂದ ಕಿಚ್ಚ - Sudeep

ವಿಜಯವಾಡ ಪೊಲೀಸರು ಮುಂಬೈಗೆ ಬಂದು ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಕೆ ಹಾಕಿ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ ಎಂದು ಜೇತ್ವಾನಿ ಆರೋಪಿಸಿದ್ದಾರೆ. ತಮ್ಮ ವಿರುದ್ಧ ಯಾವುದೇ ಕಾನೂನುಬದ್ಧ ಪ್ರಕರಣಗಳಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಕೆಡಿಸುವ ಕೆಲಸ ನಡೆಯುತ್ತಿದೆ, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

2020ರಲ್ಲಿ ತಮ್ಮ ಮುಂಬೈ ಮನೆಯನ್ನು ಖರೀದಿಸಿದ್ದೇನೆ, ಆದರೆ 2018ರ ಸುಳ್ಳು ದಾಖಲೆಗಳನ್ನು ತಮ್ಮ ವಿಳಾಸದೊಂದಿಗೆ ರಚಿಸಲಾಗಿದೆ ಎಂದು ನಟಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಮೇಲೆ ಸುಲಿಗೆ ಆರೋಪ ಹೊರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭೈರತಿ ರಣಗಲ್ ಸಂದರ್ಶನ ಮಾಡಿದ ಸೂರ್ಯ: ನಾನಿ ಜೊತೆ ಸಿನಿ ಅನುಭವ ಹಂಚಿಕೊಂಡ ಶಿವಣ್ಣ - Shivanna with Nani

ನಟಿ ತಮ್ಮ ಮನೆಯ ದಾಖಲೆಗಳನ್ನು ಅಧಿಕಾರಿಗಳಿಗೆ ಒದಗಿಸಿದ್ದಾರೆ. ತಮ್ಮ ಕುಟುಂಬಸ್ಥರನ್ನು ಅನ್ಯಾಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. 42 ದಿನಗಳ ಕಾಲ ರಿಮಾಂಡ್​ನಲ್ಲಿರಿಸಲಾಗಿತ್ತು. ಜಾಮೀನಿಗಾಗಿ ವಕೀಲರನ್ನು ಸಂಪರ್ಕಿಸಲು ಅವಕಾಶ ನೀಡದೇ ಪೊಲೀಸರು ದೌರ್ಜನ್ಯವೆಸಗಿದ್ದರಿಂದ ಅರ್ಜಿ ಸಲ್ಲಿಸಲು ವಿಳಂಬವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

41ಎ ಸಿಆರ್‌ಪಿಸಿ ನೋಟಿಸ್ ಅಗತ್ಯವಿರುವ ಪ್ರಕರಣದಲ್ಲಿ ಕುಟುಂಬವನ್ನು ಅನ್ಯಾಯವಾಗಿ ಬಂಧಿಸಲಾಗಿದೆ ಎಂದು ಅವರ ವಕೀಲ ಹೇಳಿದ್ದಾರೆ. 10 ಮಂದಿ ವಕೀಲರು ಕಾನೂನು ನೆರವು ನೀಡಲು ಮುಂದೆ ಬಂದಿದ್ದು, ನಟಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.