ETV Bharat / entertainment

ಸುದೀಪ್​ ಗುಡ್​ ಬೈ ಬೆನ್ನಲ್ಲೇ ಮನೆಯಿಂದ ಹೊರನಡೆದ ಬಿಗ್​ ಬಾಸ್​​! ಸ್ಪರ್ಧಿಗಳ ಉಡಾಫೆತನದ ವಿರುದ್ಧ ರೊಚ್ಚಿಗೆದ್ದ Bigg Boss - BIGG BOSS KANNADA SEASON 11

ಇದು 'ಬಿಗ್ ಬಾಸ್ ಕನ್ನಡ'ಕ್ಕೆ ನಿರೂಪಕನಾಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಎಂದು ಕಿಚ್ಚ ಸುದೀಪ್​ ತಿಳಿಸಿದ ಬೆನ್ನಲ್ಲೇ ಬಿಗ್​ ಬಾಸ್​ ಕೂಡಾ ಬ್ರೇಕ್​ ತೆಗೆದುಕೊಂಡಿದ್ದಾರೆ.

Bigg Boss Host Sudeep
ಬಿಗ್ ಬಾಸ್ ನಿರೂಪಕ ಸುದೀಪ್ (Photo: Social media)
author img

By ETV Bharat Entertainment Team

Published : Oct 14, 2024, 12:53 PM IST

ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ ಸೀಸನ್​​ 11' ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಪಾಪ್ಯುಲರ್​ ಪ್ರೋಗ್ರಾಮ್​ ಮೂರನೇ ವಾರವನ್ನೂ ಆರಂಭಿಸಿದೆ. ಕಳೆದ ಎರಡು ದಿನ ವಾರದ ಕತೆ ಕಿಚ್ಚನ ಜೊತೆ, ಸೂಪರ್ ಸಂಡೇ ವಿತ್​ ಸುದೀಪ್​ ಸಂಚಿಕೆಗಳು ಅತ್ಯುತ್ತಮವಾಗಿ ಮೂಡಿಬಂದಿವೆ. ಆದ್ರೆ, ನಿನ್ನೆ ರಾತ್ರಿ ಸುದೀಪ್​ ತಮ್ಮ ಈ ಕಾರ್ಯಕ್ರಮಕ್ಕೆ ವಿದಾಯ ಘೋಷಿಸಿದ್ದಾರೆ. ಇಂದು ಬಿಗ್​ ಬಾಸ್​ ಕೂಡಾ ಸ್ಪರ್ಧಿಗಳ ವಿರುದ್ಧ ಅಸಮಾಧಾನಗೊಂಡು ಮನೆಯಿಂದ ಹೊರನಡೆದಿದ್ದಾರೆ.

ಬಿಗ್​ ಬಾಸ್​ ಪ್ರೋಮೋ: ''ಬಿಗ್ ಬಾಸೇ ಮನೆಯಿಂದ ಹೊರಬಂದ್ರೆ, ಮುಂದೇನು?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್​ನೊಂದಿಗೆ ಕಲರ್ಸ್ ಕನ್ನಡ ತನ್ನ ವಿವಿಧ ಅಧಿಕೃತ ಸೋಷಿಯಲ್​​ ಮೀಡಿಯಾ ಪ್ಲ್ಯಾಟ್​ಫಾರ್ಮ್​​​​​ಗಳಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ.

ಮನೆಯಲ್ಲಿ ಫೋನ್​ ರಿಂಗ್​ ಆಗಿದೆ. ಕ್ಯಾಪ್ಟನ್​ ಶಿಶಿರ್​​ ಹೋಗಿ ಕಾಲ್​ ರಿಸೀವ್​ ಮಾಡಿದ್ದಾರೆ. ಶಿಶಿರ್ ಹಲೋ ಎಂದಿದ್ದು, ಬಿಗ್​ ಬಾಸ್​ ಕೋಪದ ಧ್ವನಿಯಲ್ಲಿ ಹಲೋ ಎಂದಿದ್ದಾರೆ. ನಂತರ 'ಇದು ಬಿಗ್​ ಬಾಸ್​, ನಿಮ್ಮೆಲ್ಲರ ವರ್ತನೆಯಿಂದ ನಂಗೆ ತುಂಬಾ ನೋವಾಗಿದೆ. ಥ್ಯಾಂಕ್​ ಯೂ ವೆರಿ ಮಚ್'​ ಎಂದು ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಕ್ಯಾಪ್ಟನ್​ ಶಿಶಿರ್​ ಥ್ಯಾಂಕ್​ ಯೂ ಬಿಗ್​ ಬಾಸ್​ ಎಂದು ಉತ್ತರಿಸಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಬಿಗ್​ ಬಾಸ್​, 'ಏನ್​ ಥ್ಯಾಂಕ್​ ಯೂ ಹೇಳ್ತಿದ್ದೀರಲ್ವಾ?. ಉಡಾಫೆತನ, ಅಪ್ರಾಣಿಕ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಗ್​ ಬಾಸ್​ ನಿಮ್ಮೊಂದಿಗೆ ಇರಲ್ಲ. ನಾನು ಬ್ರೇಕ್​ ತಗೊಳ್ತಾ ಇದ್ದೀನಿ' ಎಂದು ಹೇಳಿ ಕಾಲ್​ ಕಟ್​ ಮಾಡಿದ್ದಾರೆ. ಈ ಪ್ರೋಮೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದ್ದು, ಪ್ರೇಕ್ಷಕರು ಸಂಪೂರ್ಣ ಸಂಚಿಕೆ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಮಲಯಾಳಂ ನಟ ಬಾಲಾ ಬಂಧನ : ದೂರು ನೀಡಿದ್ದ ಮಾಜಿ ಪತ್ನಿ, ಮಗಳು

ಸುದೀಪ್​ ಪೋಸ್ಟ್​: ವೀಕೆಂಡ್​ ಶೋ ಸುದೀಪ್​ ನಿರೂಪಣೆ ಶೈಲಿಯಿಂದಲೇ ಸಾಕಷ್ಟು ಜನಪ್ರಿಯವಾಗಿತ್ತು. ಆದ್ರೆ ತಮ್ಮ ಈ ಪಯಣಕ್ಕೆ ಕಿಚ್ಚ ಗುಡ್​ ಬೈ ಹೇಳಿದ್ದಾರೆ. ಈ ಬಗ್ಗೆ ಪೋಸ್ಟ್ ಶೇರ್ ಮಾಡಿರುವ ಹೋಸ್ಟ್, ''ಬಿಗ್​ ಬಾಸ್​ ಕನ್ನಡ ಸೀಸನ್​ 11ಕ್ಕೆ ತೋರಿಸಿರುವ ಅತ್ಯದ್ಭುತ ಪ್ರತಿಕ್ರಿಯೆಗಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಟಿವಿಆರ್ (ನಂಬರ್​) ಬಿಗ್​ ಬಾಸ್ ಶೋ ಮತ್ತು ನನ್ನ ಬಗ್ಗೆ ನೀವೆಲ್ಲರೂ ತೋರಿದ ಪ್ರೀತಿಯ ಬಗ್ಗೆ ಮಾತನಾಡುತ್ತಿದೆ. ಇದೊಂದು ಅತ್ಯುತ್ತಮ 10+1 ವರ್ಷಗಳ ಪ್ರಯಾಣ. ಮತ್ತು ನಾನು ಮಾಡಬೇಕೆಂದಿರುವುದನ್ನು ಮುಂದುವರಿಸಲು ಇದು ಸೂಕ್ತ ಸಮಯ. ಇದು ಬಿಗ್​ ಬಾಸ್​ ಕನ್ನಡಕ್ಕೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ಈ ನಿರ್ಧಾರವನ್ನು ನನ್ನ ಕಲರ್ಸ್ ಮತ್ತು ಇಷ್ಟು ವರ್ಷಗಳಲ್ಲಿ ಬಿಗ್​ ಬಾಸ್​ ಅನ್ನು ಫಾಲೋ ಮಾಡಿದ ಎಲ್ಲರೂ ಗೌರವಿಸುತ್ತಾರೆಂದು ನಾನು ನಿಜವಾಗಿಯೂ ನಂಬಿದ್ದೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ. ಮತ್ತು ನಾನು ಕೂಡಾ ನಿಮ್ಮೆಲ್ಲರನ್ನು ರಂಜಿಸುತ್ತೇನೆ. ಲವ್ ಯೂ (ಅಪ್ಪುಗೆಗಳು)'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​​ ನಿರೂಪಣೆಗೆ ಕಿಚ್ಚ ಸುದೀಪ್ ಗುಡ್ ಬೈ: ಅಭಿಮಾನಿಗಳಿಗೆ ಬಿಗ್​ ಶಾಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.