'ಬಿಗ್ ಬಾಸ್ ಕನ್ನಡ ಸೀಸನ್ 11' ಐದನೇ ವಾರಾಂತ್ಯ ಸಮೀಪಿಸಿದೆ. ಈ ವೀಕೆಂಡ್ ಅನ್ನು ಕಿಚ್ಚ ಸುದೀಪ್ ನಡೆಸಿಕೊಡುತ್ತಾರೋ ಇಲ್ಲವೋ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ವಾರಾಂತ್ಯಕ್ಕೂ ಮುನ್ನ ಬಿಗ್ ಹೌಸ್ ಹಲವು ಪ್ರಮುಖ ಕ್ಷಣಗಳಿಗೆ ಸಾಕ್ಷಿಯಾಗಿದೆ. ಈ ವಾರ ಭಾವನಾತ್ಮಕವಾಗಿ ಕಾರ್ಯಕ್ರಮ ಹೆಚ್ಚಾಗಿ ಪ್ರೇಕ್ಷಕರ ಗಮನ ಸೆಳೆದಿದೆ.
ಬಿಗ್ ಬಾಸ್ ಮನೆಮಂದಿಗೆ ದೀಪಾವಳಿ ಸರ್ಪೈಸ್ ನೀಡುತ್ತಿದ್ದಾರೆ. ಆದರೆ ಅದಕ್ಕಾಗಿ ಅವರು ಶ್ರಮ ಪಡೆಬೇಕು. ಇಲ್ಲಿ ಹೊಡೆದಾಟ ಬಡಿದಾಟ, ಬೆವರಿಳಿಸುವ ಟಾಸ್ಕ್ ಇಲ್ಲ. ಬದಲಾಗಿ, ಭಾವನೆಗಳನ್ನು ವ್ಯಕ್ತಪಡಿಸಬಾರದು. ಮನೆಯೊಳಗೆ ಬಿಗ್ ಬಾಸ್ ಸಿಬ್ಬಂದಿ ಮಾಸ್ಕ್ ಧರಿಸಿ ಬಂದಿದ್ದಾರೆ. ಸ್ಪರ್ಧಿಗಳ ಏಕಾಗ್ರತೆ ಬ್ರೇಕ್ ಮಾಡುವ ಪ್ರಯತ್ನ ಮಾಡಿದ್ದಾರೆ. ಬಿಗ್ ಬಾಸ್ ಕೊಟ್ಟ ನಿರ್ದಿಷ್ಟ ಸಮಯದವರೆಗೆ ಸ್ಪರ್ಧಿಗಳು ರಿಯಾಕ್ಟ್ ಮಾಡದೇ ಸುಮ್ಮನಿದ್ದರೆ, ಓರ್ವರಿಗೆ ಮನೆಯಿಂದ ಪತ್ರ ಬರುತ್ತದೆ. ಅದರಂತೆ, ಕಳೆದ ಸಂಚಿಕೆಯಲ್ಲಿ ಅನುಷಾ ಅವರು ತಾಯಿಯ ಪತ್ರವನ್ನು ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.
ಉಳಿದಂತೆ ಧನರಾಜ್ ಅವರ ಆಟ ಶುರುವಾಗಿದೆ. ಈ ಟಾಸ್ಕ್ನಲ್ಲಿ ಸ್ವತಃ ಧನರಾಜ್ ಅವರೇ ಮೊದಲು ಫೌಲ್ ಆಗಿದ್ದಾರೆ. ಮೂರು ಬಾರಿ ಫೌಲ್ ಆದಲ್ಲಿ ಅವರಿಗೆ ಮನೆಯ ಪತ್ರ ಸಿಗುವುದಿಲ್ಲ. ಸ್ವತಃ ಧನರಾಜ್ ಅವರೇ ಮೊದಲು ಫೌಲ್ ಆಗಿದ್ದು, ಎರಡನೇ ಫೌಲ್ನಲ್ಲಿ ಎರಡು ಸ್ಪರ್ಧಿಗಳ ಹೆಸರು ಬಂದಿದೆ. ಹಾಗಾಗಿ ಇದು ಮೂರು ಫೌಲ್, ನನಗೆ ಪತ್ರ ಸಿಗುವುದಿಲ್ಲ ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಧನರಾಜ್ ಅವರು ತಮ್ಮ ಎರಡ್ಮೂರು ತಿಂಗಳ ಮಗುವನ್ನು ಬಿಟ್ಟು ಈ ಶೋನಲ್ಲಿ ಭಾಗಿ ಆಗಿರುವುದು ಹೆಚ್ಚಿನ ಸಂಖ್ಯೆಯ ಜನರನ್ನು ಸೆಳೆದಿತ್ತು. ಇದೀಗ ಅವರ ಏಕಾಗ್ರತೆ ಮುರಿಯಲು ಮಗು ಅಳುವ, ನಗುವ ಶಬ್ದವನ್ನೇ ಬಳಸಲಾಗಿದೆ. ಜೊತೆಗೆ, ಮಗುವನ್ನೇ ಹೋಲುವ ಗೊಂಬೆಯನ್ನು ಅವರ ಬಳಿ ಕೊಡುವ ಪ್ರಯತ್ನ ನಡೆದಿದೆ. ಇದು ನೋಡುಗರ ಮನ ಮರುಗುವಂತೆ ಮಾಡಿದೆ.
ಇದನ್ನೂ ಓದಿ: ದೀಪಾವಳಿಗೆ ಗುಡ್ ನ್ಯೂಸ್ ಕೊಟ್ಟ ಡಾಲಿ: ಕೈಹಿಡಿಯೋ ಬಾಳಸಂಗಾತಿ ಪರಿಚಯಿಸಿದ ಧನಂಜಯ್
''ಜೋಕರ್ ಬಂದ ಜೋಕೆ; ನಗದವರಿಗೆ ಹಬ್ಬದ ಕಾಣಿಕೆ!'' ಎಂಬ ಕ್ಯಾಪ್ಷನ್ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ಮನೆಯೊಳಗೆ ಜೋಕರ್ ಪ್ರವೇಶಿಸಿದ್ದು, ಸ್ಪರ್ಧಿಗಳನ್ನು ನಗಿಸಲು, ಅವರ ಏಕಾಗ್ರತೆ ಮುರಿಯಲು ಪ್ರಯತ್ನ ನಡೆದಿದೆ. ಆದ್ರೆ ಮನೆಮಂದಿ ರಿಯಾಕ್ಟ್ ಮಾಡದೇ ಯಶ ಕಾಣುತ್ತಿದ್ದಾರೆ. ಒಬ್ಬೊಬ್ಬರಾಗೇ ಮನೆಯಿಂದ ಬಂದ ಪತ್ರವನ್ನು ಗೆಲ್ಲುತ್ತಿದ್ದಾರೆ. ಆದ್ರೆ, ಮೋಕ್ಷಿತಾ ಅವರಿಗೆ ವಿಡಿಯೋ ಸಂದೇಶವೇ ಬಂದಿದ್ದು, ಬಹಳ ಖುಷಿಯ ಜೊತೆಗೆ ಭಾವುಕರಾಗಿದ್ದಾರೆ. ಒಟ್ಟಾರೆ ಇಡೀ ಮನೆ ಭಾವನಾತ್ಮಕ ಅಲೆಯಲ್ಲಿ ತೇಲುತ್ತಿದೆ.
ಇದನ್ನೂ ಓದಿ: ಶಿವಣ್ಣನ ಟಗರು ಸಾಂಗ್ಗೆ ಯಶ್ ಮಸ್ತ್ ಡ್ಯಾನ್ಸ್: ಮಗನ ಬರ್ತ್ಡೇ ಪಾರ್ಟಿ ವಿಡಿಯೋ ವೈರಲ್
ಎಲಿಮಿನೇಷನ್ಗೆ ನಾಮಿನೇಷನ್ ಆದ ಸ್ಪರ್ಧಿಗಳಿವರು: ಅನುಷಾ, ಧರ್ಮ, ಮಾನಸಾ, ಚೈತ್ರಾ, ಐಶ್ವರ್ಯಾ, ಮೋಕ್ಷಿತಾ, ಭವ್ಯಾ, ಮಂಜು, ಧನರಾಜ್, ಶಿಶಿರ್, ಹನುಮಂತ, ಗೋಲ್ಡ್ ಸುರೇಶ.