ETV Bharat / entertainment

'ಪಾರು ಪಾರ್ವತಿ' ಚಿತ್ರಕ್ಕಾಗಿ 1 ತಿಂಗಳಲ್ಲಿ 10 ಕೆ.ಜಿ ತೂಕ ಇಳಿಸಿಕೊಂಡ ಬಿಗ್ ಬಾಸ್ ಖ್ಯಾತಿಯ ದೀಪಿಕಾದಾಸ್ - Deepika Das

ಯುವ ನಿರ್ದೇಶಕ ರೋಹಿತ್ ಕೀರ್ತಿ ನಿರ್ದೇಶನದ 'ಪಾರು ಪಾರ್ವತಿ' ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಕಾಣಿಸಿಕೊಳ್ಳಲಿದ್ದಾರೆ.

'Paru Parvathy' film team
'ಪಾರು ಪಾರ್ವತಿ' ಚಿತ್ರತಂಡ (ETV Bharat)
author img

By ETV Bharat Karnataka Team

Published : Sep 3, 2024, 8:00 PM IST

'ಪಾರು ಪಾರ್ವತಿ' ಸ್ಯಾಂಡಲ್​​ವುಡ್​​ನಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಸಿನಿಮಾ. ಯುವನಿರ್ದೇಶಕ ರೋಹಿತ್ ಕೀರ್ತಿ ನಿರ್ದೇಶನದ ಈ ಚಿತ್ರದ ಶೀರ್ಷಿಕೆ ಅನಾವರಣ ಮತ್ತು 'Eighteen Thirty Six' ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಉದ್ಘಾಟನೆ ಇತ್ತೀಚೆಗೆ ನೆರವೇರಿತು. ಆನಂತರ ಈ ಚಿತ್ರತಂಡ ತಮ್ಮ ಸಿನಿಮಾ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿತು.

'Paru Parvathy' film team
'ಪಾರು ಪಾರ್ವತಿ' ಸಿನಿಮಾ ಈವೆಂಟ್​ (ETV Bharat)

ನಿರ್ದೇಶಕ ರೋಹಿತ್ ಕೀರ್ತಿ ಮಾತನಾಡಿ, ''ಹತ್ತು ವರ್ಷಗಳಿಂದ ಪಿ.ವಾಸು, ಅರವಿಂದ್ ಶಾಸ್ತ್ರಿ, ಸುನಿ ಮುಂತಾದ ನಿರ್ದೇಶಕರ ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ನನಗಿದು ಚೊಚ್ಚಲ ನಿರ್ದೇಶನದ ಚಿತ್ರ. ಇದೊಂದು ಅಡ್ವೆಂಚರ್ಸ್ ಮತ್ತು ಪ್ರವಾಸ ಕಥನ. ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಾಖಂಡ್​​​​ನಲ್ಲಿ ಚಿತ್ರೀಕರಣ ನಡೆದಿದೆ. ಮೂರು ಮುಖ್ಯಪಾತ್ರಗಳ ಸುತ್ತ ಸಿನಿಮಾ ಕಥೆ ಸಾಗುತ್ತದೆ''.

'Paru Parvathy' film team
'ಪಾರು ಪಾರ್ವತಿ' ಚಿತ್ರತಂಡ (ETV Bharat)

''ಪಾಯಲ್ ಎಂಬ ಪಾತ್ರದಲ್ಲಿ ದೀಪಿಕಾ ದಾಸ್ ಕಾಣಿಸಿಕೊಳ್ಳಲಿದ್ದಾರೆ. ನಿಜಜೀವನದಲ್ಲೂ ಅಡ್ವೆಂಚರ್ಸ್ ಹಾಗೂ ಜರ್ನಿಯಲ್ಲಿ ಆಸಕ್ತಿಯಿರುವ ದೀಪಿಕಾ ದಾಸ್ ಅವರಿಗೆ ಇದು ಹೇಳಿ ಮಾಡಿಸಿದ ಪಾತ್ರ. ಈವರೆಗೂ ನೀವು ನೋಡಿರದ ದೀಪಿಕಾ ದಾಸ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಇನ್ನೆರಡು ಪ್ರಮುಖ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಚಿತ್ರೀಕರಣ ಮುಗಿಸಿರುವ ನಮ್ಮ ಚಿತ್ರ ತಂಡವೀಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ'' ಎಂದು ತಿಳಿಸಿದರು.

'Paru Parvathy' film team
'ಪಾರು ಪಾರ್ವತಿ' ಚಿತ್ರತಂಡ (ETV Bharat)

ಬಳಿಕ ನಟಿ ದೀಪಿಕಾ ದಾಸ್ ಮಾತನಾಡಿ, ''ನನಗೆ ಮೊದಲಿನಿಂದಲೂ ಪ್ರವಾಸ ಹಾಗೂ ಅಡ್ವೆಂಚರ್ಸ್​​​ನಲ್ಲಿ ಆಸಕ್ತಿ ಹೆಚ್ಚು. ಈ ಚಿತ್ರದಲ್ಲಿ ನಾನು ಏಕಾಂಗಿ ಸಂಚಾರಿ. ಪಾಯಲ್ ನನ್ನ ಪಾತ್ರದ ಹೆಸರು. ಪ್ರಯಾಣದಲ್ಲೇ ಚಿತ್ರದ ಹೆಚ್ಚು ಕಥೆ ನಡೆಯುತ್ತದೆ. ಈ ಚಿತ್ರಕ್ಕಾಗಿ ನಾನು 1 ತಿಂಗಳಲ್ಲಿ 10 ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ‌ ಹಾಗೂ ಉದ್ದ ಕೇಶರಾಶಿಗೆ ಕತ್ತರಿ ಹಾಕಿದ್ದೇನೆ. ನನ್ನ ಪಾತ್ರ ಕೇಳಿದ್ದನ್ನು ಮಾಡಿದ್ದೇನೆ. ಈ ಚಿತ್ರದಲ್ಲಿ ನಾವು ಸಂಚರಿಸುವ ಕಾರು ನಮ್ಮಷ್ಟೇ ಮುಖ್ಯ ಪಾತ್ರ ವಹಿಸಿದೆ'' ಎಂದು ತಿಳಿಸಿದರು.

'Paru Parvathy' film team
'ಪಾರು ಪಾರ್ವತಿ' ಚಿತ್ರತಂಡ (ETV Bharat)

ಚಿತ್ರದ ನಿರ್ಮಾಪಕ ಪ್ರೇಮನಾಥ್ ಮಾತನಾಡಿ, ನಾನು ಮೂಲತಃ ಐಟಿ ಉದ್ಯೋಗಿ. ಚಿಕ್ಕವಯಸ್ಸಿನಿಂದಲೂ ಸಿನಿಮಾ ನೋಡುತ್ತಿದ್ದ ನನಗೆ ಸಿನಿಮಾ ನಿರ್ಮಾಣ ಮಾಡುವ ಕನಸಿತ್ತು. ಅದೀಗ ನೆರವೇರಿದೆ‌.‌ ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ನಾನು ಕೆಲಸದ ಮೇಲೆ ಅನೇಕ ಊರುಗಳಲ್ಲಿ ವಾಸವಾಗಿದ್ದೆ. ಇದು ಕೂಡ ಒಂದು ಪ್ರವಾಸದ ಕಥೆ ಆಗಿರುವುದರಿಂದ ಇಷ್ಟವಾಯಿತು. ಇನ್ನೂ ನಮ್ಮ Eighteen Thirty Six ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಉದ್ಘಾಟನೆಯಾಗಿದೆ. 9 ನನ್ನ ಲಕ್ಕಿ ನಂಬರ್ ಎಂದು ಹೇಳಿದರು.

ಇದನ್ನೂ ಓದಿ: ಕನ್ನಡ ಸೇರಿ 5 ಭಾಷೆಗಳಲ್ಲಿ ಬರಲಿದೆ 1990ರ ಪ್ರೇಮಕಥೆ - 1990s Teaser

ಚಿತ್ರದಲ್ಲಿ ದೀಪಿಕಾ ದಾಸ್ ಜೊತೆಗೆ ಪೂನಂ ಸರ್ ನಾಯಕ್ ಮತ್ತು ಫವಾಜ್ ಅಶ್ರಫ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾ ಅಬಿನ್ ರಾಜೇಶ್ ಅವರ ಕ್ಯಾಮೆರಾವರ್ಕ್, ಹರಿ ಸಂಗೀತ ನಿರ್ದೇಶನ, ಸಿ‌.ಕೆ.ಕುಮಾರ್ ಸಂಕಲನ, ಗೀತರಚನೆಕಾರ ನಾಗಾರ್ಜುನ ಶರ್ಮಾ ಹಾಗೂ ರಾಘು ಮೈಸೂರು ಅವರ ಕಲಾ ನಿರ್ದೇಶನವಿದೆ. ಚೇತನ್ ಡಿಸೋಜಾ ಸಾಹಸ ನಿರ್ದೇಶನ ಹಾಗೂ ರಾಜಾಕೃಷ್ಣನ್ ಆಡಿಯೋಗ್ರಾಫಿ ಈ ಚಿತ್ರಕಿದ್ದು, ಡಿಸೈನರ್ ಆಗಿ ಮಹಮ್ಮದ್ ಹಮ್ಜ ಕಾರ್ಯ ನಿರ್ವಹಿಸಿದ್ದಾರೆ. Eighteen Thirty Six ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಮನಾಥ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದು ಶೀರ್ಘದಲ್ಲೇ ಪಾರು ಪಾರ್ವತಿ ಚಿತ್ರ ತೆರೆಗೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.