ಅದ್ಧೂರಿಯಾಗಿ ಶುಭಾರಂಭ ಮಾಡಿರುವ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11' ಎರಡನೇ ಎಲಿಮಿನೇಶನ್ ಹೊಸ್ತಿಲಲ್ಲಿದೆ. ಮೊದಲ ವಾರ ನಟಿ ಯಮುನಾ ಶ್ರೀನಿಧಿ ಮನೆಯಿಂದ ಹೊರನಡೆದರು. ಇದೀಗ ಎರಡನೇ ಎಲಿಮಿನೇಶನ್ ಕಾವು ಜೋರಾಗಿದೆ. ಮನೆಮಂದಿ ಜೊತೆಗೆ ಹೊರಗಿನ ಪ್ರೇಕ್ಷಕರ ಕಳವಳವೂ ಹೆಚ್ಚಾಗಿದೆ. ಅದರಲ್ಲೂ ಈ ಬಾರಿ ಇಡೀ ಮನೆಮಂದಿಯನ್ನು ಬಿಗ್ ಬಾಸೇ ನಾಮಿನೇಟ್ ಮಾಡಿದ್ದು, ನಾಳೆಯ ಸಂಚಿಕೆ ವೀಕ್ಷಿಸುವ ಕುತೂಹಲ ಏರತೊಡಗಿದೆ.
''ಕಿಚ್ಚನ ಪಂಚಾಯ್ತಿಯಲ್ಲಿ ಯಾರ ವಿಷ್ಯ ಚರ್ಚೆ ಆಗ್ಲೇಬೇಕು ಕಮೆಂಟ್ ಮಾಡಿ!'' ಎಂಬ ಕ್ಯಾಪ್ಷನ್‌ನೊಂದಿಗೆ ಬಿಗ್ ಬಾಸ್ ಪೋಸ್ಟ್ ಒಂದನ್ನು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಶೇರ್ ಮಾಡಿದೆ. ಈ ಪೋಸ್ಟ್ಗೆ, ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವಾರದ ಆರಂಭದಲ್ಲಿ, ತ್ರಿವಿಕ್ರಮ್, ಅನುಷಾ, ಧನರಾಜ್, ಜಗದೀಶ್, ಐಶ್ವರ್ಯಾ, ಮಾನಸಾ, ರಂಜಿತ್ ಎರಡನೇ ವಾರದ ಎಲಿಮಿನೇಶನ್ಗೆ ನಾಮಿನೇಟ್ ಆಗಿದ್ದರು. ಆದ್ರೆ ಮನೆಯ ಕೆಲವೇ ಕೆಲ ಮಂದಿ ಮಾಡಿದ ಒಂದು ತಪ್ಪಿನಿಂದಾಗಿ ಇಡೀ ಮನೆಯೇ ಎಲಿಮಿನೇಶನ್ಗೆ ನಾಮಿನೇಟ್ ಆಗಿದೆ.
ಬಿಗ್ ಬಾಸ್ ನಾಮಿನೇಟ್ ಮಾಡಿದವರ ಪಟ್ಟಿ:
- ಅನುಷಾ
- ಶಿಶಿರ್
- ಮಾನಸಾ
- ಗೋಲ್ಡ್ ಸುರೇಶ
- ಚೈತ್ರಾ
- ಮೋಕ್ಷಿತಾ
- ರಂಜಿತ್
- ಭವ್ಯಾ
- ಧನರಾಜ್
- ಗೌತಮಿ
- ಧರ್ಮ
- ಜಗದೀಶ್
- ತ್ರಿವಿಕ್ರಮ್
- ಹಂಸಾ
- ಐಶ್ವರ್ಯಾ
- ಮಂಜು
ಮೊದಲ ವಾರ ಯಮುನಾ ಎಲಿಮಿನೇಟ್ ಆಗಿದ್ದಾರೆ. ಎರಡನೇ ವಾರದ ಎಲಿಮಿನೇಶನ್ ಮೇಲೆ ಎಲ್ಲರ ಗಮನ ನೆಟ್ಟಿದೆ. ಟಾಸ್ಕ್ಗಳ ಮೂಲಕ ಕೆಲವರು ಸೇಫ್ ಆಗುತ್ತಿದ್ದು, ನಾಳೆ ಸಂಜೆ ಎಲಿಮಿನೇಶನ್ ಲಿಸ್ಟ್‌ನಲ್ಲಿ ಯಾರೆಲ್ಲಾ ಉಳಿದುಕೊಳ್ಳಲಿದ್ದಾರೆ ಎಂಬ ಕುತೂಹಲ ನೋಡುಗರಲ್ಲಿದೆ.
ಇದನ್ನೂ ಓದಿ: ಕನ್ನಡ ಬಿಗ್ ಬಾಸ್ ಮನೆ ಧ್ವಂಸ: ಸ್ಪರ್ಧಿಗಳ ತಪ್ಪೇನು? ಈ ನಿರ್ಧಾರಕ್ಕೆ ಕಾರಣವಾದ್ರೂ ಏನು?
ಬಿಗ್ ಬಾಸ್ ಎಲ್ಲರನ್ನೂ ನಾಮಿನೇಟ್ ಮಾಡಲು ಕಾರಣ ಇದು!: ಇಡೀ ಮನೆ ಎಲಿಮಿನೇಟ್ ಆಗಿದ್ದು ಮತ್ತು ಬಿಗ್ ಬಾಸ್ ಇಂಥ ಗಂಭೀರ ನಿರ್ಧಾರ ಕೈಗೊಂಡಿದ್ದು, ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲು. ಹೌದು, ಈ ಜನಪ್ರಿಯ ಕಾರ್ಯಕ್ರಮದ ಪ್ರಮುಖ ನಿಯಮವೆಂದರೆ, ಬ್ಲೈಂಡ್ಸ್ (ಸ್ಕ್ರೀನ್) ಡೌನ್ ಆದಾಗ ಸ್ಪರ್ಧಿಗಳು ಅದರಿಂದಾಚೆಗೆ ಇಣುಕಿ ನೋಡುವಂತಿಲ್ಲ. ಆ ವೇಳೆ ಟಾಸ್ಕ್ಗೆ ಬೇಕಾದ ಸಿದ್ಧತೆಗಳು ನಡೆಯುತ್ತಿರುತ್ತವೆ ಮತ್ತು ಬಿಗ್ ಬಾಸ್ ಸಿಬ್ಬಂದಿ ಮನೆಯೊಳಗೆ ಎಂಟ್ರಿ ಕೊಟ್ಟಿರುತ್ತಾರೆ. ಇದು ನೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮ. ಮನೆಯೊಳಗೆ ಅನುಮತಿ ಸಿಗದ ಬೇರೆ ಯಾರೂ ಆಗಮಿಸುವುದಿಲ್ಲ. ಆದ್ರೆ ಸೀಸನ್ 11ರ ಕೆಲ ಸ್ಪರ್ಧಿಗಳು ಈ ಮಹತ್ವದ ನಿಯಮವನ್ನೇ ಉಲ್ಲಂಘಿಸಿದ್ದಾರೆ. ಬಿಗ್ ಬಾಸ್ಗೆ ಗೌರವ ಕೊಡದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಎಲ್ಲರನ್ನೂ ನಾಮಿನೇಟ್ ಮಾಡಿದ್ದರು.
ಇದನ್ನೂ ಓದಿ: ದರ್ಶನ್ ಫ್ಯಾನ್ಸ್ಗೆ ಗುಡ್ ನ್ಯೂಸ್: ರೀ ರಿಲೀಸ್ ಆಗಲಿದೆ ಸೂಪರ್ ಹಿಟ್ 'ನವಗ್ರಹ' ಸಿನಿಮಾ
ಈಗ ಆಟಗಳಲ್ಲಿ ಒಬ್ಬೊಬ್ಬರೇ ಸೇವ್ ಆಗುತ್ತಾ ಬರುತ್ತಿದ್ದು, ನಾಳೆ ಯಾರೆಲ್ಲಾ ಬಾಕಿ ಉಳಿಯಲಿದ್ದಾರೆ ಎಂಬುದನ್ನು ನೋಡಬೇಕು. ಈ ನಡುವೆ ವಾದ-ವಿವಾದಗಳು ಜೋರಾಗಿವೆ. ಕ್ಯಾಪ್ಟನ್ ಹಂಸ ಅವರ ವಿರುದ್ಧವೂ ಅಸಮಧಾನ ವ್ಯಕ್ತವಾಗಿದೆ. ನಾಳೆ ಯಾರ ವಿಷಯ ಹೆಚ್ಚು ಚರ್ಚೆ ಆಗುತ್ತದೆ ಎಂಬುದನ್ನು ನೋಡೋಣ.