ETV Bharat / entertainment

ವಿನಯ್​ ರಾಜ್​ಕುಮಾರ್​​ 'ಪೆಪೆ' ಸಿನಿಮಾದ ಡಬ್ಬಿಂಗ್ ರೈಟ್ಸ್​​​ಗೆ ಭರ್ಜರಿ ಆಫರ್ಸ್ - PEPE - PEPE

ಇತ್ತೀಚೆಗೆ ನಟ ವಿನಯ್ ರಾಜ್​​ಕುಮಾರ್ ಮುಖ್ಯಭೂಮಿಕೆಯ ಪೆಪೆ ಟ್ರೇಲರ್​​ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನಾವರಣಗೊಳಿಸಿದ್ದರು. ಇದೀಗ ತಮಿಳು ಮತ್ತು ತೆಲುಗು ಚಿತ್ರರಂಗದಿಂದ ಸಿನಿಮಾದ ಡಬ್ಬಿಂಗ್ ರೈಟ್ಸ್​​​ಗಾಗಿ ಬೇಡಿಕೆಗಳು ಬಂದಿವೆ.

'Pepe' movie Event
​​'ಪೆಪೆ' ಸಿನಿಮಾ ಈವೆಂಟ್​ (ETV Bharat)
author img

By ETV Bharat Entertainment Team

Published : Aug 20, 2024, 7:23 PM IST

ಕನ್ನಡ ಚಿತ್ರರಂಗದ ಭರವಸೆಯ ನಟ ವಿನಯ್ ರಾಜ್​​ಕುಮಾರ್ ಇದೇ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರ 'ಪೆಪೆ'. ಕನ್ನಡ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳ ಗಮನ ಸೆಳೆಯುವಲ್ಲಿ ಕನ್ನಡದ ಸಿನಿಮಾ ಯಶ ಕಂಡಿದೆ. ಇತ್ತೀಚೆಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ಪೆಪೆ ಟ್ರೇಲರ್​ ಅನಾವರಣಗೊಂಡಿದೆ.

ಟ್ರೇಲರ್​​ ಲಾಂಚ್ ಆಗಿದ್ದೇ ತಡ ವಿನಯ್ ಅವರ ಆ್ಯಕ್ಷನ್ ಅಬ್ಬರಕ್ಕೆ ಪ್ರೇಕ್ಷಕ ಮಹಾಪ್ರಭುಗಳು ಉಘೇ ಉಘೇ ಅಂದಿದ್ರು. ಪೆಪೆ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಏರುತ್ತಿರುವಾಗ ಅಕ್ಕ ಪಕ್ಕದ ಇಂಡಸ್ಟ್ರಿಯಿಂದ ರತ್ನಗಂಬಳಿ ಹಾಸಿ ಸ್ವಾಗತ ಕೋರಲಾಗುತ್ತಿದೆ.

ಹೌದು, ಪೆಪೆ ಟ್ರೇಲರ್​​ ಬಿಡುಗಡೆ ಆಗಿ 24 ಗಂಟೆಯೊಳಗೆ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ವೀಕ್ಷಣೆ ಹೆಚ್ಚುತ್ತಿರುವ ಬೆನ್ನಲ್ಲೇ ತಮಿಳು ಮತ್ತು ತೆಲುಗು ಚಿತ್ರರಂಗದಿಂದ ಸಿನಿಮಾದ ಡಬ್ಬಿಂಗ್ ರೈಟ್ಸ್​​​ಗಾಗಿ ಬೇಡಿಕೆಗಳು ಬಂದಿವೆ. ಕೆಲ ನಿರ್ಮಾಪಕರು ಪೆಪೆ ಸಿನಿಮಾದ ಬಿ.ಎಮ್ ಶ್ರೀರಾಮ್ ಹಾಗೂ ಉದಯ್ ಶಂಕರ್ ಅವರಲ್ಲಿ ಡಬ್ಬಿಂಗ್ ರೈಟ್ಸ್ ಕೊಡಿ ಅಂತಿದ್ದಾರಂತೆ.

'Pepe' movie Event
​​'ಪೆಪೆ' ಸಿನಿಮಾ ಈವೆಂಟ್​ (ETV Bharat)

ಪೆಪೆ ಚಿತ್ರದ ಇಬ್ಬರು ನಿರ್ಮಾಪಕರ ಪೈಕಿ ಒಬ್ಬರಾಗಿರುವ ಬಿ.ಎಮ್ ಶ್ರೀರಾಮ್ ಮಾತನಾಡಿ, ನಮ್ಮ ಸಿನಿಮಾದ ಟ್ರೇಲರ್​ ನೋಡಿ ಡಬ್ಬಿಂಗ್​ಗೆ ಬೇಡಿಕೆಗಳು ಬಂದಿವೆ. ನಮ್ಮ ಸಿನಿಮಾಗಿರುವ ಡಿಮ್ಯಾಂಡ್ ನೋಡಿ ಸಂತೋಷ ಆಗುತ್ತಿದೆ. ಈಗಾಗ್ಲೇ ಸಾಕಷ್ಟು ನಿರ್ಮಾಪಕರು ಫೋನ್​ ಮೂಲಕ ಕೇಳಿದ್ದಾರೆ. ರೈಟ್ಸ್​​ ತಮ್ಮದಾಗಿಸಿಕೊಳ್ಳಲು 50 ಲಕ್ಷದವರೆಗೂ ಕೊಡುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ನಟಿ ಶ್ರುತಿ - Actress Shruti

'ಪೆಪೆ', ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಚಿತ್ರ. ಗ್ಯಾಂಗ್​​​ಸ್ಟರ್ ಸಿನಿಮಾ ಇದಾಗಿದ್ದು, ವಿನಯ್ ರಾಜ್​​ಕುಮಾರ್ ತಮ್ಮ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನ ಅವತಾರ ತಾಳಿದ್ದಾರೆ. ಒಂದೇ ಜಾನರ್ ಸಿನಿಮಾಗೆ ಒಗ್ಗಿಕೊಳ್ಳದೇ, ಪ್ರತೀ ಬಾರಿ ವಿಭಿನ್ನ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುವ ವಿನಯ್ ಈ ಚಿತ್ರದಲ್ಲಿ ಮಾಸ್​​​ ಲುಕ್​ನಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲಿದ್ದಾರೆ. ಈವರೆಗೂ ಕ್ಲಾಸ್​​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಗ್ಯಾಂಗ್ ಲೀಡರ್ ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ‌. ಈ ಟ್ರೇಲರ್​ ನೋಡಿದ ಅಭಿಮಾನಿ ಬಳಗ ವಿನಯ್ ಲುಕ್​ ಬಗ್ಗೆ ಸಖತ್​​ ಥ್ರಿಲ್ ಆಗಿದ್ದು, ಸಿನಿಮಾ ಮೇಲಿನ ಅವರ ನಿರೀಕ್ಷೆ, ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

'Pepe' movie Event
ವಿನಯ್​ ರಾಜ್​ಕುಮಾರ್​​ (ETV Bharat)

ಇದನ್ನೂ ಓದಿ: ಗಣಿ ಅಭಿನಯದ 'ಕೃಷ್ಣಂ ಪ್ರಣಯ ಸಖಿ' 5 ದಿನದಲ್ಲಿ ಗಳಿಸಿದ್ದೆಷ್ಟು? - Krishnam Pranaya Sakhi Collection

ವಿನಯ್ ರಾಜ್​​ಕುಮಾರ್ ಜೋಡಿಯಾಗಿ ಕಾಜಲ್ ಕುಂದರ್ ತೆರೆಹಂಚಿಕೊಂಡಿದ್ದು, ಯಶ್ ಶೆಟ್ಟಿ, ಬಾಲ ರಾಜ್ ವಾಡಿ, ಮೆದಿನಿ ಕೆಳಮನಿ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್​ ಅವರನ್ನೊಳಗೊಂಡ ತಾರಾಬಳಗವಿದೆ. ಚಿತ್ರದಲ್ಲಿ ಅಭಿಷೇಕ್ ಜಿ.ಕಾಸರಗೋಡು ಅವರ ಕ್ಯಾಮರಾ ವರ್ಕ್ ಇದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶ ಮಾಡಿದ್ದಾರೆ. ಡಾ.ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಉದಯ್ ಸಿನಿ ವೆಂಚರ್, ದೀಪ ಫಿಲ್ಮ್ಸ್ ಬ್ಯಾನರ್ ಅಡಿ ಉದಯ್ ಮತ್ತು ಶ್ರೀರಾಮ್ ಸೇರಿಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೇಲರ್​​​ನಿಂದ ಸದ್ದು ಮಾಡುತ್ತಿರುವ ಪೆಪೆ ಇದೇ ತಿಂಗಳ 30ಕ್ಕೆ ಪ್ರೇಕ್ಷಕರಿಗೆ ದರ್ಶನ ಕೊಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.