ETV Bharat / entertainment

ಅಂಬಾನಿ ಕಾರ್ಯಕ್ರಮಕ್ಕೆ ಆಗಮಿಸಿದ ಅಮಿತಾಭ್​​-ರಜನಿ, ಐಶ್​-ಅಭಿ: ವಿಡಿಯೋ - ಅಮಿತಾಭ್​ ಬಚ್ಚನ್​

ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯುತ್ತಿರುವ ಅಂಬಾನಿ ಕುಟುಂಬದ ಅದ್ಧೂರಿ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ದಿಗ್ಗಜರು ಆಗಮಿಸಿದ್ದಾರೆ.

Big B, Rajinikanth Arrives to Jamnagar For ambani program
ಅಂಬಾನಿ ಕಾರ್ಯಕ್ರಮಕ್ಕೆ ಆಗಮಿಸಿದ ಅಮಿತಾಭ್​​-ರಜನಿ
author img

By ETV Bharat Karnataka Team

Published : Mar 3, 2024, 2:56 PM IST

Updated : Mar 3, 2024, 4:05 PM IST

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಗ್ರ್ಯಾಂಡ್​​ ಪ್ರೀ ವೆಡ್ಡಿಂಗ್​ ಸೆಲೆಬ್ರೇಶನ್​ಗೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಸಾಕ್ಷಿಯಾಗಿದ್ದಾರೆ. ಇಂದು ಮೂರನೇ ದಿನದ ಸಂಭ್ರಮಾಚರಣೆ ಜರುಗಲಿದ್ದು, ಭಾರತೀಯ ಚಿತ್ರರಂಗದ ದಿಗ್ಗಜರಾದ ಅಮಿತಾಭ್​ ಬಚ್ಚನ್​ ಮತ್ತು ರಜನಿಕಾಂತ್​ ಕೂಡ ಗುಜರಾತ್​ಗೆ ಆಗಮಿಸಿದ್ದಾರೆ.

ಅಲ್ಲದೇ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್​​ ಮತ್ತು ಪತಿ-ನಟ ಅಭಿಷೇಕ್​ ಬಚ್ಚನ್​​ ಕೂಡ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈ ನಾಲ್ವರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ರಿಲಯನ್ಸ್ ಸಂಸ್ಥೆಯ ಅಧ್ಯಕ್ಷ ಮುಖೇಶ್ ಅಂಬಾನಿ - ನೀತಾ ಅಂಬಾನಿ ದಂಪತಿಯ ಕಿರಿಪುತ್ರ ಅನಂತ್ ಅಂಬಾನಿ ಹಾಗೂ ಕೈಗಾರಿಕೋದ್ಯಮಿ ವೀರೆನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಈ ವರ್ಷದ ಜುಲೈನಲ್ಲಿ ಹಸೆಮಣೆ ಏರಲಿದ್ದಾರೆ. ಪ್ರಸ್ತುತ ಗುಜರಾತ್‌ನ ಜಾಮ್‌ನಗರದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಜರುಗುತ್ತಿವೆ.​​ ಸಂಭ್ರಮಾಚರಣೆ ಶುಕ್ರವಾರ ಆರಂಭಗೊಂಡಿದ್ದು, ಇಂದು ರಾತ್ರಿ ಪೂರ್ಣಗೊಳ್ಳಲಿದೆ. ಸಮಾರಂಭಕ್ಕೆ ಸಿನಿಮಾ, ಕ್ರಿಕೆಟ್​ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಶ್ರೀಮಂತ ವ್ಯಕ್ತಿಗಳು ಸಾಕ್ಷಿಯಾಗಿದ್ದಾರೆ. ಇಂದು ಬಿಗ್ ಬಿ ಮತ್ತು ತಲೈವಾ ವಿಮಾನ ನಿಲ್ದಾಣದಿಂದ ಸಮಾರಂಭದ ಸ್ಥಳಕ್ಕೆ ಆಗಮಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಅಂತಿಮ ಹಂತದಲ್ಲಿ 'ಪರವಶ': ಹೊಸ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್

ಅಂಬಾನಿ ಅವರ ಆಪ್ತ ಸ್ನೇಹಿತರಾದ ಬಚ್ಚನ್ ಕುಟುಂಬಸ್ಥರು ಯಾಕಿನ್ನು ಬಂದಿಲ್ಲವೆಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದ್ರಿಂದು ಅಮಿತಾಭ್​​ ಬಚ್ಚನ್​, ಶ್ವೇತಾ ನಂದಾ ಮತ್ತು ಅಗಸ್ತ್ಯ ನಂದಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಊಹಾಪೋಹಗಳಿಗೆ ಅಂತ್ಯ ಹಾಡಿದರು. ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯ ಅವರು ಮತ್ತೊಂದು ಕಾರಿನಲ್ಲಿ ಆಗಮಿಸಿರುವುದು ಕಂಡುಬಂದಿದೆ.

ಇದನ್ನೂ ಓದಿ: ಅಂಬಾನಿ ಪುತ್ರನ ಪ್ರಿ-ವೆಡ್ಡಿಂಗ್ ವೈಭವ: ಒಂದೇ ವೇದಿಕೆಯಲ್ಲಿ ಶಾರುಖ್​, ಅಮೀರ್​, ಸಲ್ಮಾನ್ ಡ್ಯಾನ್ಸ್​ ಝಲಕ್‌

ಶುಕ್ರವಾರ ಕಾರ್ಯಕ್ರಮ ಆರಂಭಗೊಂಡಿದ್ದು, ಇಂದು ಮುಕ್ತಾಯವಾಗಲಿದೆ. ಸಮಾರಂಭದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಶ್ರದ್ಧಾ ಕಪೂರ್, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ವರುಣ್ ಧವನ್, ಅನನ್ಯಾ ಪಾಂಡೆ, ಆದಿತ್ಯ ರಾಯ್ ಕಪೂರ್, ಅನಿಲ್ ಕಪೂರ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ರಾಮ್​ ಚರಣ್​, ಉಪಾಸನಾ, ದಿಲ್ಜಿತ್ ದೋಸಾಂಜ್, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ರಣ್​​​ವೀರ್ ಸಿಂಗ್, ರಣ್​​ಬೀರ್ ಕಪೂರ್, ಆಲಿಯಾ ಭಟ್, ಮಹೇಂದ್ರ ಸಿಂಗ್​ ಧೋನಿ, ಸಚಿನ್​ ತೆಂಡೂಲ್ಕರ್, ರೋಹಿತ್​​ ಶರ್ಮಾ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಬಾಲಿವುಡ್​ ಮಂದಿ ಡ್ಯಾನ್ಸ್​​ ಪ್ರೋಗ್ರಾಮ್​​ ಕೂಡ ಕೊಟ್ಟಿದ್ದಾರೆ. ಸೆಲೆಬ್ರಿಟಿಗಳ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

Last Updated : Mar 3, 2024, 4:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.