ETV Bharat / entertainment

ಪೃಥ್ವಿ ಅಂಬಾರ್, ಪ್ರಮೋದ್ ಅಭಿನಯದ 'ಭುವನಂ ಗಗನಂ' ಸಿನಿಮಾಗೆ ಸಿಕ್ತು ಅಭಿನಯ ಚಕ್ರವರ್ತಿಯ ಸಾಥ್ - Bhuvanam Gaganam - BHUVANAM GAGANAM

ಪೃಥ್ವಿ ಅಂಬಾರ್ ಹಾಗೂ ಪ್ರಮೋದ್ ತೆರೆ ಹಂಚಿಕೊಂಡಿರುವ ಬಹುನಿರೀಕ್ಷಿತ ಸಿನಿಮಾ ''ಭುವನಂ ಗಗನಂ''. ಇತ್ತಿಚೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸಿನಿಮಾದ ಟೈಟಲ್ ಟ್ರ್ಯಾಕ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Bhuvanam Gaganam team with sudeep
ಸುದೀಪ್​ ಜೊತೆ 'ಭುವನಂ ಗಗನಂ' ಚಿತ್ರತಂಡ (ETV Bharat)
author img

By ETV Bharat Karnataka Team

Published : Aug 29, 2024, 12:34 PM IST

''ಭುವನಂ ಗಗನಂ'' ಟೀಸರ್​ನಿಂದಲೇ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ. ಕ್ಲಾಸ್ ಕಥೆಗಳ ಮೂಲಕ ಗಮನ ಸೆಳೆದಿರುವ ಪೃಥ್ವಿ ಅಂಬಾರ್ ಹಾಗೂ ಮಾಸ್ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿರುವ ಪ್ರಮೋದ್ ಅವರು ಇದೇ ಮೊದಲ ಬಾರಿ ತೆರೆ ಹಂಚಿಕೊಂಡಿರುವ ಬಹುನಿರಿಕ್ಷಿತ ಚಿತ್ರ. ಇತ್ತೀಚೆಗೆ ಸಿನಿಮಾದ ಟೈಟಲ್ ಟ್ರ್ಯಾಕ್ ಅನಾವರಣಗೊಂಡಿದೆ.

ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಸದಾ ಬೆನ್ನು ತಟ್ಟುವ ಸ್ಟಾರ್​ ಹೀರೋ ಕಿಚ್ಚ ಸುದೀಪ್ ಅವರೀಗ ಚಿತ್ರರಂಗದ ಭರವಸೆ ನಾಯಕರಾಗಿರುವ ಪ್ರಮೋದ್ ಮತ್ತು ಪೃಥ್ವಿ ಅಂಬಾರ್​​​ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. 'ಭುವನ ಗಗನ' ಹಾಡು ಅನಾವರಣಗೊಳಿಸಿ ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ. ಭುವನ ಗಗನ ಎಂದು ಶುರುವಾಗುವ ಹಾಡಿಗೆ ಅನಿರುದ್ಧ್ ಶಾಸ್ತ್ರೀ ಪದ ಪೊಣಿಸಿದ್ದು, ಅರ್ಮಾನ್ ಮಲಿಕ್​​ ಹಾಗೂ ಐಶ್ವರ್ಯಾ ರಂಗರಾಜನ್ ಧ್ವನಿಯಾಗಿದ್ದಾರೆ. ಗುಮ್ಮಿನೇನಿ ವಿಜಯ್ ಈ ಮಧುರ ಗೀತೆಗೆ ಟ್ಯೂನ್ ಹಾಕಿದ್ದಾರೆ. 'ಭುವನಂ ಗಗನಂ' ಟೈಟಲ್ ಟ್ರ್ಯಾಕ್​​ನಲ್ಲಿ ಪ್ರಮೋದ್ ಹಾಗೂ ರೆಚೆಲ್ ಡೇವಿಡ್ ಜೋಡಿಯ ಕೆಮಿಸ್ಟ್ರಿ ನೋಡುಗರಿಗೆ ಹಿಡಿಸಿದೆ.

ಗಿರೀಶ್ ಮೂಲಿಮನಿ 'ಭುವನಂ ಗಗನಂ' ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಇವರು ರಾಜರು ಎಂಬ ಚಿತ್ರ ಮಾಡಿದ್ದರು. ಇದೀಗ ಭುವನಂ ಗಗನಂ ಮೂಲಕ ಮತ್ತೊಂದು ಫ್ರೆಶ್ ಕಥೆಯನ್ನು ಹೇಳಲು ಸಜ್ಜಾಗಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡಬೇಕು ಎಂಬ ಕನಸಿನೊಂದಿಗೆ ನಿರ್ಮಾಪಕ ಎಂ ಮುನೇಗೌಡ ತಮ್ಮದೇ ಎಸ್​​ವಿಸಿ ಫಿಲ್ಮ್ಸ್ ಪ್ರೊಡಕ್ಷನ್ ಅಡಿ 'ಭುವನಂ ಗಗನಂ'ಗೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ 'ಪುಷ್ಪ 2' ಖಡಕ್​​ ಲುಕ್​ಗೆ ಫ್ಯಾನ್ಸ್ ಫಿದಾ​​: ಅದ್ಭುತ ಸಿನಿಮೀಯ ಅನುಭವಕ್ಕಿನ್ನು 100 ದಿನ - Pushpa 2

'ಭುವನಂ ಗಗನಂ' ಸಿನಿಮಾ ಲವ್, ರೊಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಅಂಶಗಳುಳ್ಳ ಕಥಾಹಂದರವನ್ನೊಳಗೊಂಡಿದೆ. ನಗರ ಮತ್ತು ಹಳ್ಳಿಯ ಎರಡು ಬ್ಯಾಕ್​​ಡ್ರಾಪ್​​ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್​ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿ ಅಂಬಾರ್​ಗೆ ಜೋಡಿಯಾಗಿ ಅಶ್ವಥಿ ನಟಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಅವರ ಕ್ಯಾಮರಾ ಕೈಚಳಕ, ಗುಮ್ಮಿನೇನಿ ವಿಜಯ್ ಅವರ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಅವರ ಸಂಕಲನ ಈ ಸಿನಿಮಾಗಿದೆ. ಪ್ರಚಾರದ ಅಖಾಡಕ್ಕೆ ಇಳಿದಿರುವ ಚಿತ್ರತಂಡ ಆದಷ್ಟು ಬೇಗ ಭುವನಂ ಗಗನಂ ಸಿನಿಮಾವನ್ನು ತೆರೆಗೆ ತರಲು ಯೋಜಿಸುತ್ತಿದೆ.

ಇದನ್ನೂ ಓದಿ: ನಟ ಜಯಸೂರ್ಯ ಸೇರಿ 7 ಜನರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ನಟಿಯರ ಹೇಳಿಕೆ ದಾಖಲು - Sexual Allegations Against Actors

ETV Bharat Logo

Copyright © 2025 Ushodaya Enterprises Pvt. Ltd., All Rights Reserved.