ETV Bharat / entertainment

ಎಲಿಮಿನೇಷನ್​​ನಿಂದ ಭವ್ಯಾ ಬಚಾವ್​​​: ಜೋಡಿ ಆಟ ಶುರು; ನಿಮ್ಮಿಷ್ಟದ ಜೋಡಿ ಯಾವುದು? - BIGG BOSS KANNADA 11

'ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ವಿಂಗಡಣೆ!'... ಇಂದಿನ ಟಾಸ್ಕ್​ ಮನರಂಜನಾತ್ಮಕವಾಗಿರಲಿದೆ ಎಂಬ ಸುಳಿವನ್ನು ಪ್ರೋಮೋ ಬಿಟ್ಟುಕೊಟ್ಟಿದೆ.

Bigg Boss kannada 11
ಬಿಗ್​ ಬಾಸ್​ ಕನ್ನಡ 11 (Photo: Bigg Boss Team)
author img

By ETV Bharat Entertainment Team

Published : Nov 11, 2024, 2:12 PM IST

ಬಿಗ್​ ಬಾಸ್​​ ಸೀಸನ್​​ 11ರ ಏಳನೇ ವಾರದ ಆಟ ಮುಂದುವರೆದಿದೆ. ಆರನೇ ವಾರಾಂತ್ಯ ಯಾರು ಮನೆಯಿಂದ ಹೊರನಡೆಯಬಹುದು ಎಂಬ ಕುತೂಹಲ ನೋಡುಗರಲ್ಲಿತ್ತು. ಆದ್ರೆ ಎಲಿಮಿನೇಷನ್​ ನಡೆದಿಲ್ಲ. ಕೊನೆವರೆಗೂ ಭವ್ಯಾ ಅವರು ಎಲಿಮಿನೇಟ್​ ಎಂದೇ ಭಾವಿಸಲಾಗಿತ್ತು. ಆದ್ರೆ ಕಳೆದ ಸಂಚಿಕೆ ಕೊನೆಯಲ್ಲಿ ಬಿಗ್​ ಬಾಸ್​ನಲ್ಲಿ ಬಿಗ್​ ಟ್ವಿಸ್ಟ್​​ ನಡೆದಿದೆ. ಎಲಿಮಿನೇಷನ್​​ ಬಿಸಿಯಿಂದ ಭವ್ಯಾ ಬಚಾವ್​ ಆಗಿದ್ದಾರೆ.

ಸಾಮಾನ್ಯವಾಗಿ ಬಿಗ್​ ಬಾಸ್​ನಲ್ಲಿ ವಾರದಿಂದ ವಾರಕ್ಕೆ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಾ ಬರುತ್ತದೆ. ಅದರಂತೆ ಆಟದಲ್ಲಿ, ಸ್ಪರ್ಧಿಗಳ ಪರ್ಫಾಮೆನ್ಸ್​ನಲ್ಲಿಯೂ ಹಲವು ಬದಲಾವಣೆಗಳಾಗುತ್ತವೆ. ಒಟ್ಟಾರೆ, ಆಟದ ಕಾವು ಏರುತ್ತದೆ. ಅದರಂತೆ, ಆರನೇ ವಾರ ಮನೆಯಿಂದ ಹೊರಹೋಗೋದು ಯಾರು ಎಂಬ ಕುತೂಹಲ ಮನೆಯೊಳಗಿನ ಸ್ಪರ್ಧಿಗಳ ಜೊತೆ ಜೊತೆಗೆ ಕನ್ನಡಿಗರಲ್ಲಿತ್ತು. ಕಳೆದ ಎಪಿಸೋಡ್​ನಲ್ಲಿ ಭವ್ಯಾ ಅವರು ಎಲಿಮಿನೇಟ್​ ಆಗಿ ಮನೆಯಿಂದ ಹೊರಬರುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು.

ಎಲಿಮಿನೇಷನ್​ ಪ್ರೊಸೆಸ್​ನಲ್ಲಿ ಒಬ್ಬೊಬ್ಬರೇ ಸೇಫ್​ ಆಗುತ್ತಾ ಬಂದು ಕೊನೆಯಲ್ಲಿ ಧನರಾಜ್​ ಆಚಾರ್​​ ಮತ್ತು ಭವ್ಯಾ ಗೌಡ ಉಳಿದುಕೊಂಡಿದ್ದರು. ಇನ್ನೇನು ಒಬ್ಬರ ಆಟ ಮುಗಿಯಿತು ಎಂದೇ ಭಾವಿಸಿದ್ದರು. ಆದ್ರೆ ಬಿಗ್ ಬಾಸ್​​ ಸರ್​​ಪ್ರೈಸ್​​ ನೀಡಿದ್ದಾರೆ.

ಮನೆಯ ಮುಖ್ಯದ್ವಾರದವರೆಗೂ ಬಂದಿರುತ್ತಾರೆ. ಮನೆಯ ಇತರೆ ಎಲ್ಲಾ ಸ್ಪರ್ಧಿಗಳು ಭವ್ಯಾ ಗೌಡ ಅವರು ಮನೆಯಿಂದ ಹೊರ ಹೋಗುತ್ತಾರೆ ಎಂದು ಅಂದುಕೊಂಡಿರುತ್ತಾರೆ. ಮೋಕ್ಷಿತಾ ಮತ್ತು ಗೌತಮಿ ಇಬ್ಬರೂ ದೂರ ನಿಂತು ನೋಡುತ್ತಿರುತ್ತಾರೆ. ಈ ಕಠಿಣ ಸಂದರ್ಭ ಬಿಗ್​ ಬಾಸ್​​ ಈ ವಾರ ನಾಮಿನೇಷನ್​​ ಇಲ್ಲ ಎಂದು ತಿಳಿಸಿದ್ದಾರೆ. ಈ ಮನೆಯಲ್ಲಿ ನಿಮ್ಮ ಆಟ ಮುಂದುವರಿಯಲಿದೆ ಎಂದು ತಿಳಿಸಿದಾಗ ಆಶ್ಚರ್ಯದ ಜೊತೆ ಸಂತಸವೂ ಆಗಿದೆ. ಈ ವಿಷಯ ಮನೆಯೊಳಗೆ ಹೆಚ್ಚು ಸಮಯ ಸ್ಪರ್ಧಿಗಳ ನಡುವೆ ಚರ್ಚೆಯಾಗಿದೆ.

ಇದನ್ನೂ ಓದಿ: Watch: ಮುಂಬೈನಲ್ಲಿ ಯಶ್​​ - ಕಿಯಾರಾ ಅಡ್ವಾಣಿ; 'ಟಾಕ್ಸಿಕ್'​​​ಗೆ ಬಾಲಿವುಡ್​ ನಟಿ?

ಇನ್ನು, ಏಳನೇ ವಾರದ ಆಟ ಮುಂದುವರಿದಿದೆ. 'ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ವಿಂಗಡಣೆ!' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್​ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಹನುಮಂತು ಮುಗ್ಧ ಅಲ್ಲ': ಕಿಚ್ಚನ ಬಿಗ್​​ಬಾಸ್​​​ನಲ್ಲಿ ಚರ್ಚೆ ಜೋರು; ನೀವೇನಂತೀರಾ

ಈಗ ಆಟದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಲು ನಿಮ್ಮೆಲ್ಲರನ್ನು ಜೋಡಿಗಳಾಗಿ ಬಿಗ್​ ಬಾಸ್​ ವಿಂಗಡಿಸಿದ್ದಾರೆ ಎಂದು ಬಿಗ್​ ಬಾಸ್​ ತಿಳಿಸುತ್ತಿದ್ದಂತೆ, ಸ್ಕ್ರೀನ್​​ ಮೇಲೆ ಜೋಡಿಗಳ ಹೆಸರು ಬಂದಿದೆ. ಅದರಂತೆ ಹನುಮಂತು - ಗೌತಮಿ, ಧರ್ಮ - ಐಶ್ವರ್ಯಾ, ಮಂಜು - ಭವ್ಯಾ, ಸುರೆಶ್​ - ಅನುಷಾ, ಧನರಾಜ್​ - ಮೋಕ್ಷಿತಾ ಹೀಗೆ ಸ್ಪರ್ಧಿಗಳೀಗ ಜೋಡಿ ಟಾಸ್ಕ್​ನಲ್ಲಿ ಭಾಗಿಯಾಗಬೇಕಿದೆ. ಚಟುವಟಿಕೆಯೊಂದರಲ್ಲಿ, ಮನೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳದ ಸ್ಪರ್ಧಿ ಯಾರು? ಎಂಬ ಪ್ರಶ್ನೆ ಕೇಳಲಾಗಿದ್ದು, ಹನುಮಂತು ಹೆಸರು ಬಂದಿದೆ. ತಮಾಷೆಯಾಗೇ ಮನೆ ಮಂದಿ ಮಾತುಕತೆ ನಡೆಸಿದ್ದಾರೆ. ಆಟ ಬಹಳ ಮಜವಾಗಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.