ETV Bharat / entertainment

"ಲವ್ & ವಾರ್": ಬನ್ಸಾಲಿ ಮುಂದಿನ ಸಿನಿಮಾದಲ್ಲಿ ಆಲಿಯಾ, ರಣ್​ಬೀರ್, ವಿಕ್ಕಿ ಕೌಶಲ್ - ಸಂಜಯ್ ಲೀಲಾ ಬನ್ಸಾಲಿ

'Love & War': ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಸಿನಿಮಾ "ಲವ್ & ವಾರ್''ನಲ್ಲಿ ರಣ್​ಬೀರ್​ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಲ್​​ ಕಾಣಿಸಿಕೊಳ್ಳಲಿದ್ದಾರೆ.

'Love & War'
"ಲವ್ & ವಾರ್"
author img

By ETV Bharat Karnataka Team

Published : Jan 25, 2024, 6:17 PM IST

Updated : Jan 25, 2024, 6:45 PM IST

ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್​​ ಬುಧವಾರದಂದು ಘೋಷಣೆಯಾಗಿದೆ. ತಮ್ಮ ಮುಂದಿನ ಸಿನಿಮಾಗೆ "ಲವ್ & ವಾರ್" (Love & War) ಎಂದು ಶೀರ್ಷಿಕೆ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಜನಪ್ರಿಯ ಕಲಾವಿದರಾದ ಆಲಿಯಾ ಭಟ್, ರಣ್​ಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಬಣ್ಣ ಹಚ್ಚಲಿದ್ದಾರೆ. ಬಹುಬೇಡಿಕೆ ನಟರ ಬಹುನಿರೀಕ್ಷಿತ ಸಿನಿಮಾ 2025ರ ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ಬನ್ಸಾಲಿ ಪ್ರೊಡಕ್ಷನ್ಸ್ ಎಕ್ಸ್ ಪೋಸ್ಟ್: "ಲವ್ & ವಾರ್" ನಿರ್ಮಾಣ ಮಾಡುತ್ತಿರುವ ಬನ್ಸಾಲಿ ಪ್ರೊಡಕ್ಷನ್ಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಸಿನಿಮಾ ಅಪ್​ಡೇಟ್ಸ್ ಶೇರ್ ಮಾಡಿದೆ. "ಸಂಜಯ್​ ಲೀಲಾ ಬನ್ಸಾಲಿ ಅವರ ಮುಂದಿನ ಸಿನಿಮಾ "ಲವ್ & ವಾರ್". ರಣ್​ಬೀರ್​ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಲ್​​ ನಟನೆಯ ಚಿತ್ರ 2025ರ ಕ್ರಿಸ್ಮಸ್​ಗೆ ಬಿಡುಗಡೆ ಆಗಲಿದೆ'' ಎಂದು ಬನ್ಸಾಲಿ ಬ್ಯಾನರ್​​ ತನ್ನ ಪೋಸ್ಟ್​​ನಲ್ಲಿ ಬರೆದುಕೊಂಡಿದೆ.

ಬಾಲಿವುಡ್​ ಬಹುಬೇಡಿಕೆ ನಟ ರಣ್​ಬೀರ್​ ಕಪೂರ್​ ಅವರ ಚೊಚ್ಚಲ ಚಿತ್ರ "ಸಾವರಿಯಾ" (2007)ಗೆ ಸಂಜಯ್ ಲೀಲಾ ಬನ್ಸಾಲಿ ಆ್ಯಕ್ಷನ್​ ಕಟ್​ ಹೇಳಿದ್ದರು. ಎರಡನೇ ಬಾರಿ ರಣ್​ಬೀರ್​ ಮತ್ತು ಬನ್ಸಾಲಿ ಸಿನಿಮಾವೊಂದಕ್ಕೆ ಒಂದಾಗಿದ್ದಾರೆ. 2022ರ "ಗಂಗೂಬಾಯಿ ಕಥಿಯಾವಾಡಿ" ಮೂಲಕ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಆಲಿಯಾ ಭಟ್​​ ಕೂಡ ಮತ್ತೊಮ್ಮೆ ಬನ್ಸಾಲಿ ಜೊತೆ ಕೈ ಜೋಡಿಸಿದ್ದಾರೆ. ಗಂಗೂಬಾಯಿ ಕಥಿಯಾವಾಡಿಗೆ ಬನ್ಸಾಲಿ ಆ್ಯಕ್ಷನ್​ ಕಟ್​ ಹೇಳಿದ್ದರು. ರಾಲಿಯಾ ದಂಪತಿ ಬನ್ಸಾಲಿ ಜೊತೆ ಎರಡನೇ ಬಾರಿ ಕೈ ಜೋಡಿಸಿದ್ದರೆ, ವಿಕ್ಕಿ ಕೌಶಲ್​ ಅವರಿಗೆ ಇದು ಮೊದಲ ಪ್ರಾಜೆಕ್ಸ್.

ಇದನ್ನೂ ಓದಿ: 'ಶೈತಾನ್' ಟೀಸರ್ ರಿಲೀಸ್​​: ಸೂಪರ್ ನ್ಯಾಚುರಲ್ ಥ್ರಿಲ್ಲರ್ ಸಿನಿಮಾ ವೀಕ್ಷಿಸುವ ಕಾತುರ

ಇನ್ನೂ ಆಲಿಯಾ ಭಟ್​ ಈ ಹಿಂದೆ ಪತಿ ರಣ್​​ಬೀರ್ ಕಪೂರ್ ಜೊತೆ "ಬ್ರಹ್ಮಾಸ್ತ್ರ: ಭಾಗ ಒಂದು - ಶಿವ" ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಮತ್ತು ವಿಕ್ಕಿ ಕೌಶಲ್​ ಅವರೊಂದಿಗೆ "ರಾಝಿ" ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. "ಸಂಜು" (2018) ಚಿತ್ರದಲ್ಲಿ ರಣ್​​ಬೀರ್ ಮತ್ತು ವಿಕ್ಕಿ ಜೊತೆಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: 'ಫೈಟರ್' ರಿಲೀಸ್​: ಹೃತಿಕ್​-ದೀಪಿಕಾ ಚಿತ್ರಕ್ಕೆ ಬಂತು ಸಕಾರಾತ್ಮಕ ವಿಮರ್ಶೆ

ಸಿನಿಮಾ ಬಗ್ಗೆ ಉತ್ಸಾಹ ವ್ಯಕ್ತಪಡಿಸಿರೋ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್​​, "ಸಿನಿಮಾ ಕನಸು ನನಸಾಗಿದೆ. ಲವ್​ ಅಂಡ್​​​ ವಾರ್​​'' ಎಂದು ಬರೆದುಕೊಂಡಿದ್ದಾರೆ. ಆಲಿಯಾ ಕೂಡ ಇದೇ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಬನ್ಸಾಲಿ ಅವರು ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ತಮ್ಮ ಚೊಚ್ಚಲ ವೆಬ್ ಸರಣಿ "ಹೀರಾಮಂಡಿ"ಯ ಪ್ರೀಮಿಯರ್​​​ಗಾಗಿ ಎದುರು ನೋಡುತ್ತಿದ್ದಾರೆ.

Last Updated : Jan 25, 2024, 6:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.