ETV Bharat / entertainment

ಶ್ರೀಮುರಳಿಯ 'ಬಘೀರ' ವೀಕ್ಷಿಸಿಲ್ವೇ? ಹಾಗಾದ್ರೆ ಈ ಒಟಿಟಿಯಲ್ಲಿ ನೋಡಿ: ಈವರೆಗಿನ ಕಲೆಕ್ಷನ್​ ಮಾಹಿತಿ ನಿಮಗಾಗಿ

ಕನ್ನಡ ಚಿತ್ರರಂಗದ ಹಿಟ್ ಬಘೀರ​ ಸಿನಿಮಾದ ಒಟಿಟಿ ಮತ್ತು ದಿನನಿತ್ಯದ ಕಲೆಕ್ಷನ್​ ಮಾಹಿತಿ ಇಲ್ಲಿದೆ.

Sri Murali, Rukmini Vasanth
ಶ್ರೀಮುರುಳಿ, ರುಕ್ಮಿಣಿ ವಸಂತ್​ (Photo: ETV Bharat)
author img

By ETV Bharat Entertainment Team

Published : 3 hours ago

ಕನ್ನಡ ಚಿತ್ರರಂಗದಲ್ಲಿ ಈ ಸಾಲಿನ ಬಹುನಿರೀಕ್ಷೆಯ ಸಿನಿಮಾವಾಗಿ ಗುರುತಿಸಿಕೊಂಡಿದ್ದ 'ಬಘೀರ' ಸಿನಿಮಾ ಚಿತ್ರಮಂದಿರ ಪ್ರವೇಶಿಸಿ 21 ದಿನಗಳಾಗಿವೆ. ಡಾ. ಸೂರಿ ನಿರ್ದೇಶನದ ಈ ಚಿತ್ರ ಅದ್ಯಾವಾಗ ಒಟಿಟಿ ವೇದಿಕೆ ಪ್ರವೇಶಿಸಲಿದೆ ಎಂದು ಸಿನಿಪ್ರಿಯರು ಕಾತರರಾಗಿದ್ದರು. ಫೈನಲಿ ಹಿಟ್​ ಚಿತ್ರದ ಹಿಂದಿರುವ ಹೊಂಬಾಳೆ ಫಿಲ್ಮ್ಸ್​​​ ಒಟಿಟಿ ವಿಚಾರವನ್ನು ಅನೌನ್ಸ್​ ಮಾಡಿದೆ.

ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಘೀರ ಕಳೆದ ಅಕ್ಟೋಬರ್​ 31ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಗುರುವಾರ ಬಿಡುಗಡೆಯಾದ ಈ ಚಿತ್ರವನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದರು. ಸಿನಿಮಾ ಹಾಲ್​ಗಳೆದುರು ಸಂಭ್ರಮಾಚರಣೆ ಜೋರಾಗಿತ್ತು. ಬಾಕ್ಸ್​ ಆಫೀಸ್​ ಅಂಕಿ ಅಂಶ ಉತ್ತಮವಾಗಿದ್ದು, ತೆರೆಕಂಡ ಕೆಲವೇ ದಿನಗಳಲ್ಲಿ ಚಿತ್ರತಂಡ ಸಕ್ಸಸ್​ ಮೀಟ್​ ಅನ್ನೂ ಆಯೋಜಿಸಿತ್ತು. ಇದೀಗ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ.

ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸದವರು ಒಟಿಟಿಗೆ ಯಾವಾಗ ಬರಲಿದೆ ಎಂದು ಕಾತರರಾಗಿದ್ದರು. ಸೋಷಿಯಲ್​ ಮೀಡಿಯಾಗಳಲ್ಲಿ ಈ ಬೇಡಿಕೆ ಇಟ್ಟಿದ್ದರು. ಫೈನಲಿ, ಚಿತ್ರ ಬಿಡುಗಡೆಯಾದ ಮೂರೇ ವಾರಕ್ಕೆ ಒಟಿಟಿ ತಲುಪಿದ್ದು, ನೆಟ್ಟಿಗರು ಸಂತಸಗೊಂಡಿದ್ದಾರೆ. ಹಿಟ್​ ಚಿತ್ರಗಳ ಸರದಾರ, ಕನ್ನಡ ಚಿತ್ರರಂಗದ ಕೀರ್ತಿ ಹೊಂಬಾಳೆ ಫಿಲ್ಮ್ಸ್ ಇಂದು ಅಧಿಕೃತವಾಗಿ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. 'ನೆಟ್​ಫ್ಲಿಕ್ಸ್​​'ನಲ್ಲಿ ಸಿನಿಮಾ ಪ್ರಸಾರ ಪ್ರಾರಂಭಿಸಿದೆ. ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಬಘೀರ ಒಟಿಟಿ ವೇದಿಕೆಯಲ್ಲಿ ಕನ್ನಡ, ತೆಲುಗು ಸೇರಿ ತಮಿಳು ಮತ್ತು ಮಲಯಾಳಂನಲ್ಲೂ ಲಭ್ಯವಿದೆ ಎಂದು ತಿಳಿಸಿದ್ದಾರೆ.

ಬಘೀರ ಕಲೆಕ್ಷನ್​: ಉಗ್ರಂ ಖ್ಯಾತಿಯ ರೋರಿಂಗ್​​ ಸ್ಟಾರ್​​ ಶ್ರೀಮುರಳಿ ಮತ್ತು ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಇದೇ ಮೊದಲ ಬಾರಿಗೆ ಸ್ಕ್ರೀನ್​ ಶೇರ್ ಮಾಡಿರುವ ಬಘೀರ ಅಕ್ಟೋಬರ್​ 31ಕ್ಕೆ ಬಿಡುಗಡೆ ಆಗಿ 21 ದಿನಗಳನ್ನು ಪೂರೈಸಿದೆ. ವಿಶ್ವದಾದ್ಯಂತ 25 ಕೊಟಿ ರೂ. ಕಲೆಕ್ಷನ್​ ಮಾಡಿರುವುದಾಗಿ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. 29 ಕೋಟಿ ರೂ. ಸಂಗ್ರಹವಾಗಿರುವುದಾಗಿ ಕೆಲ ವರದಿಗಳು ತಿಳಿಸಿದ್ದು, ಅಭಿಮಾನಿಗಳು ಹೊಂಬಾಳೆ ಫಿಲ್ಮ್ಸ್​ನಿಂದ ಅಧಿಕೃತ ಮಾಹಿತಿ ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ನನ್ನ 3 ವರ್ಷಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ: 'ಬಘೀರ' ಸಂಭ್ರಮಾಚರಣೆಯಲ್ಲಿ ಶ್ರೀಮುರುಳಿ ಮನದಾಳ

  • ಭಾರತದಲ್ಲಿ ಒಟ್ಟು ಕಲೆಕ್ಷನ್​: 24.77 ಕೋಟಿ ರೂಪಾಯಿ
  • ನೆಟ್​​ ಕಲೆಕ್ಷನ್​​: 21.02 ಕೋಟಿ ರೂಪಾಯಿ.

ಬಘೀರ ಕನ್ನಡ ಆವೃತ್ತಿಯ ಕಲೆಕ್ಷನ್​:

ದಿನಕಲೆಕ್ಷನ್
12.55 ಕೋಟಿ ರೂ.
22.9 ಕೋಟಿ ರೂ.
33.2 ಕೋಟಿ ರೂ.
42.85 ಕೋಟಿ ರೂ.
50.97 ಕೋಟಿ ರೂ.
60.9 ಕೋಟಿ ರೂ.
70.7 ಕೋಟಿ ರೂ.
80.6 ಕೋಟಿ ರೂ.
90.6 ಕೋಟಿ ರೂ.
101.05 ಕೋಟಿ ರೂ.
111.15 ಕೋಟಿ ರೂ.
120.3 ಕೋಟಿ ರೂ.
130.25 ಕೋಟಿ ರೂ.
140.2 ಕೋಟಿ ರೂ.
150.22 ಕೋಟಿ ರೂ.
160.1 ಕೋಟಿ ರೂ.
170.18 ಕೋಟಿ ರೂ.
180.28 ಕೋಟಿ ರೂ.
190.11 ಕೋಟಿ ರೂ.
200.03 ಕೋಟಿ ರೂ.
210.04 ಕೋಟಿ ರೂ.
ಒಟ್ಟು19.18 ಕೋಟಿ ರೂ.

ಬಘೀರ ತೆಲುಗು ಆವೃತ್ತಿಯ ಕಲೆಕ್ಷನ್​:

ದಿನಕಲೆಕ್ಷನ್
10.5 ಕೋಟಿ ರೂ.
20.4 ಕೋಟಿ ರೂ.
30.3 ಕೋಟಿ ರೂ.
40.2 ಕೋಟಿ ರೂ.
50.13 ಕೋಟಿ ರೂ.
60.15 ಕೋಟಿ ರೂ.
70.1 ಕೋಟಿ ರೂ.
80.05 ಕೋಟಿ ರೂ.
90.01 ಕೋಟಿ ರೂ.
ಒಟ್ಟು 1.84 ಕೋಟಿ ರೂ.

ಇದನ್ನೂ ಓದಿ: ಭೈರತಿ ರಣಗಲ್​​​ನನ್ನು ಹೃದಯಕ್ಕೆ ತೆಗೆದುಕೊಂಡ್ರಿ, ಮಫ್ತಿ 2 ಬರಲಿದೆ: ಅಭಿಮಾನಿಗಳಿಗೆ ಶಿವಣ್ಣನ ವಿಶೇಷ ಧನ್ಯವಾದ

ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ಕಥೆಗೆ ಡಾ.ಸೂರಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ನಿರ್ದೇಶನದ ಜೊತೆಗೆ ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಈ ಜನಪ್ರಿಯ ನಿರ್ದೇಶಕರು ಹೊತ್ತುಕೊಂಡಿದ್ದರು. ಎ.ಜೆ ಶೆಟ್ಟಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ಚೇತನ್ ಡಿಸೋಜಾ ಅವರ ಆ್ಯಕ್ಷನ್ಸ್ ಈ ಸಿನಿಮಾಗಿದೆ. ಹೊಂಬಾಳೆ ಫಿಲ್ಮ್ಸ್ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.