ETV Bharat / entertainment

ಚಿತ್ರ ಬಿಡುಗಡೆಗೆ ಮುನ್ನ ರಿಲೀಸ್​ ಆಯ್ತು 'ಬಡೇ ಮಿಯಾ ಚೋಟೆ ಮಿಯಾ' ಸಿನಿಮಾದ ಹಾಡು - ಬಡೇ ಮಿಯಾ ಚೋಟೆ ಮಿಯಾ ಸಿನಿಮಾ

'ಬಡೇ ಮಿಯಾ ಚೋಟೆ ಮಿಯಾ' ಚಿತ್ರದ ಟೈಟಲ್​ ಟ್ರ್ಯಾಕ್​ ಅನ್ನು ಖ್ಯಾತ ಸಂಗೀತ ಸಂಯೋಜಕರಾದ ಅನಿರುದ್ಧ​​ ರವಿಚಂದ್ರನ್​ ಮತ್ತು ವಿಶಾಲ್​ ಮಿಶ್ರಾ ಹಾಡಿದ್ದಾರೆ

http://10.10.50.80:6060//finalout3/odisha-nle/thumbnail/19-February-2024/20784324_1064_20784324_1708314623126.png

author img

By ETV Bharat Karnataka Team

Published : Feb 19, 2024, 12:01 PM IST

ಹೈದರಾಬಾದ್​: ಟೈಗರ್​ ಶ್ರಾಫ್​​ ಮತ್ತು ಅಕ್ಷಯ್​​ ಕುಮಾರ್​ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಬಡೇ ಮಿಯಾ ಚೋಟೆ ಮಿಯಾ' ತೆರೆಗೆ ಬರಲು ಸಜ್ಜಾಗಿದೆ. ಸಂಪೂರ್ಣ ಆ್ಯಕ್ಷನ್​ ಭರಿತ ಈ ಚಿತ್ರ ಸಿನಿ ಪ್ರಿಯರಿಗೆ ರಸದೌತಣ ಬಡಿಸಲಿದೆ. ಅಲಿ ಅಬ್ಬಾಸ್​​​ ಜಾವರ್​ ಚಿತ್ರವನ್ನು ನಿರ್ದೇಶಿಸಿದ್ದು, ಜಾಕಿ ಭಗ್ನಾನಿ ನಿರ್ಮಾಣ ಮಾಡಿದ್ದಾರೆ. ಚಿತ್ರ ಬಿಡುಗಡೆಗೆ ಮುನ್ನ ಚಿತ್ರತಂಡ ಟೈಟಲ್​ ಟ್ರಾಕ್​ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಎಲ್ಲರ ಗಮನ ಸೆಳೆದಿದೆ.

  • " class="align-text-top noRightClick twitterSection" data="">

'ಬಡೇ ಮಿಯಾ ಚೋಟೆ ಮಿಯಾ'ದ ಈ ಚಿತ್ರದ ಟೈಟಲ್​ ಸಾಂಗ್​ ಎಲ್ಲರನ್ನೂ ಮಂತ್ರ ಮುಗ್ದಗೊಳಿಸಿದೆ. ಚಿತ್ರದ ಟೈಟಲ್​ ಟ್ರಾಕ್​ ಅನ್ನು ಖ್ಯಾತ ಸಂಗೀತ ಸಂಯೋಜಕರಾದ ಅನಿರುದ್ಧ​ ರವಿಚಂದ್ರನ್​ ಮತ್ತು ವಿಶಾಲ್​ ಮಿಶ್ರಾ ಹಾಡಿದ್ದಾರೆ. ಚಿತ್ರ ಬಿಡುಗಡೆ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಅನ್ನು ನಟ ಅಕ್ಷಯ್​​ ಕುಮಾರ್​ ಹಂಚಿಕೊಂಡಿದ್ದಾರೆ. ನೃತ್ಯಗಾರರ ಹಿನ್ನೆಲೆಯಲ್ಲಿ ನಟ ಅಕ್ಷಯ್​ ಮತ್ತು ಟೈಗರ್​ ಶ್ರಾಪ್​ ಇಬ್ಬರು ಹೆಜ್ಜೆ ಹಾಕಿದ್ದಾರೆ.

ಚಿತ್ರದ ಹಾಡಿಗೆ ಇರ್ಷಾದ್​ ಕಮಿಲ್​ ಸಾಹಿತ್ಯವಿದೆ. ಟೈಗರ್​ ಶ್ರಾಪ್​ ಅವರ ಕಟ್ಟು ಮಸ್ತಾದ ದೇಹದ ಇಮೇಜ್​ನೊಂದಿಗೆ ಹಾಡಿನ ವಿಡಿಯೋ ಆರಂಭವಾಗುತ್ತದೆ. ಹಾಡಿನಲ್ಲಿ ಟೈಗರ್​ ಶ್ರಾಫ್​ ಸಿಕ್ಸ್​ ಪ್ಯಾಕ್​ ದೇಹ ಮತ್ತು ಅಕ್ಷಯ್​ ಕುಮಾರ್​ ಮೀಸೆ ಕಾಣಬಹುದಾಗಿದೆ.

'ಬಡೇ ಮಿಯಾ ಚೋಟೆ ಮಿಯಾ' ಟ್ರೈಲರ್​​ನಲ್ಲಿ ಇದೊಂದು ದೇಶಭಕ್ತಿ ಹೊಂದಿರುವ ಚಿತ್ರವಾಗಿದೆ ಎಂಬ ಸುಳಿವನ್ನು ತಂಡ ನೀಡಿದೆ. ಭಾರತೀಯ ಸೇನೆ ಮೇಲೆ ಉಗ್ರರ ದಾಳಿಯೊಂದಿಗೆ ಟ್ರೈಲರ್​ ಆರಂಭವಾಗುತ್ತದೆ. ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ ಇಬ್ಬರೂ ಯೋಧರ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಉಗ್ರರ ಸದೆ ಬಡಿಯುವ ಅವರು ಎಚ್ಚರದಿಂದ ಇರಿ, ನಾವು ಭಾರತೀಯರು ಎಂಬ ಎಚ್ಚರಿಕೆ ನೀಡುವ ಮೂಲಕ ನಡುಕ ಹುಟ್ಟಿಸುವುದನ್ನು ಕಾಣಬಹುದು. ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​ ಕೂಡ ಕಾಣಿಸಿಕೊಂಡಿದ್ದಾರೆ. ಉದ್ದ ಕೂದಲ, ಮುಖಕ್ಕೆ ಮಸ್ಕ್​​ ಮತ್ತು ಕಪ್ಪು ಲೆದರ್​ ಬಟ್ಟೆಯಲ್ಲಿ ಅವರು ಕಂಡಿದ್ದಾರೆ

ಈ ಹಿಂದೆ ಅಮಿತಾಬ್​​ ಬಚ್ಚನ್​ ಮತ್ತು ಗೋವಿಂದ ಸಾರಥ್ಯದಲ್ಲಿ 'ಬಡೇ ಮಿಯಾ ಚೋಟೆ ಮಿಯಾ' ಚಿತ್ರವನ್ನು ಡೇವಿಡ್​ ಧವನ್​ ನಿರ್ದೇಶಿಸಿದ್ದರು. 1998ರಲ್ಲಿ ಬಿಡುಗಡೆಯಾದ ಈ ಚಿತ್ರದ ಹೆಸರಿನೊಂದಿಗೆ 2023ರಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿರುವುದಾಗಿ ಅಲಿ ಅಬ್ಬಾಸ್​​​ ಜಾಫರ್​ ಘೋಷಿಸಿದ್ದರು. ಪೂಜಾ ಎಂಟರ್​ಟೈನಮೆಂಟ್​ ಮತ್ತು ಎಎಜೆಡ್​​ ಫಿಲ್ಮ್ಸ್​​ ನಿರ್ಮಾಣದ ಹೊಣೆ ಹೊತ್ತಿದ್ದು, 2024ರ ಬ್ಲಾಕ್​ ಬಸ್ಟರ್​ ಸಿನಿಮಾ ಆಗಲಿದೆ ಎಂಬ ಲೆಕ್ಕಾಚಾರ ನಡೆಸಲಾಗಿದೆ.

ಅಕ್ಷಯ್ ಕುಮಾರ್, ಟೈಗರ್ ಶ್ರಾಫ್​ ಹೊರತಾಗಿ 'ಬಡೇ ಮಿಯಾ ಚೋಟೆ ಮಿಯಾ' ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಸೋನಾಕ್ಷಿ ಸಿನ್ಹಾ ಮತ್ತು ಮಾನುಷಿ ಚಿಲ್ಲರ್ ಕಾಣಿಸಿಕೊಂಡಿದ್ದಾರೆ. ಇದೇ ಈದ್​​ಗೆ ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ: BAFTA ಫಿಲ್ಮ್ ಅವಾರ್ಡ್ಸ್ 2024: ಶ್ವೇತ ವರ್ಣದ ಸಾರಿಯಲ್ಲಿ ಭರ್ಜರಿ ಮಿಂಚಿದ ದೀಪಿಕಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.