ETV Bharat / entertainment

ಅಶ್ವಿನಿ ದತ್ ಪಾದ ಸ್ಪರ್ಶಿಸಿದ ಅಮಿತಾಭ್​​​​: ಬಚ್ಚನ್​​ ಬಗ್ಗೆ ನಿರ್ಮಾಪಕರು ಹೇಳಿದ್ದೇನು? - Aswini Dutt - ASWINI DUTT

'ಕಲ್ಕಿ 2898 ಎಡಿ' ಪ್ರೀ ರಿಲೀಸ್​​ ಈವೆಂಟ್​ನಲ್ಲಿ ಭಾರತೀಯ ಚಿತ್ರರಂಗದ ಹೆಸರಾಂತ ನಟ ಅಮಿತಾಭ್​ ಬಚ್ಚನ್​​​, ನಿರ್ಮಾಪಕ ಅಶ್ವಿನಿ ದತ್ ಪಾದ ಸ್ಪರ್ಶಿಸಿರುವ ವಿಡಿಯೋ ವೈರಲ್​​ ಆಗಿದೆ. ಇದೀಗ ನಿರ್ಮಾಪಕರು ಈ ಬಗ್ಗೆ ಮಾತನಾಡಿದ್ದಾರೆ.

Aswini Dutt, Amitabh Bachchan
ಅಶ್ವಿನಿ ದತ್, ಅಮಿತಾಭ್ ಬಚ್ಚನ್​ (ANI)
author img

By ETV Bharat Karnataka Team

Published : Jun 21, 2024, 10:14 AM IST

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಬುಧವಾರ ಸಂಜೆ ಸಿನಿಮಾದ ಪ್ರೀ ರಿಲೀಸ್​​ ಈವೆಂಟ್​ ಅದ್ಧೂರಿಯಾಗಿ ಜರುಗಿದ್ದು, ಇಡೀ ಚಿತ್ರತಂಡ ಭಾಗಿಯಾಗಿತ್ತು. ಈವೆಂಟ್​ನ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡಿವೆ. ಅಮಿತಾಭ್​​​​ ಬಚ್ಚನ್​​ ಅವರು ಅಶ್ವಿನಿ ದತ್ ಪಾದ ಸ್ಪರ್ಶಿಸಿರುವ ವಿಡಿಯೋ ವ್ಯಾಪಕವಾಗಿ ನೆಟ್ಟಿಗರ ಗಮನ ಸೆಳೆದಿದೆ.

'ಕಲ್ಕಿ 2898 ಎಡಿ' ಪ್ರೀ ರಿಲೀಸ್​​ ಈವೆಂಟ್​ನಲ್ಲಿ ಬಿಗ್​​ ಬಿ ಪಾದಗಳನ್ನು ಸ್ಪರ್ಶಿಸುತ್ತಿದ್ದಂತೆ ಒಂದು ಕ್ಷಣಕ್ಕೆ ನಿರ್ಮಾಪಕ ಚಲಸಾನಿ ಅಶ್ವಿನಿ ದತ್ ಮೂಕವಿಸ್ಮಿತರಾದರು. ಕೂಡಲೇ ನಿರ್ಮಾಪಕರು ಕೂಡ ಪಾದ ಸ್ಪರ್ಶಿಸಲು ಮುಂದಾದರು. ಈ ವಿಡಿಯೋ ಆನ್​ಲೈನ್​​ನಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ನಿರ್ಮಾಪಕರು ಗುರುವಾರ ತಡರಾತ್ರಿ ಸೋಷಿಯಲ್​ ಮೀಡಿಯಾ ಮೂಲಕ ಬಿಗ್​ ಬಿಗೆ ತಮ್ಮ ಗೌರವ ಅರ್ಪಿಸಿದ್ದಾರೆ.

ಅಶ್ವಿನಿ ದತ್ ಎಕ್ಸ್​​ ಪೋಸ್ಟ್: "ಅಂತಹ ಕ್ಷಣಗಳು ಅನಿರೀಕ್ಷಿತ ಮತ್ತು ಆಘಾತಕಾರಿ. ನನ್ನ ಮೇಲಿನ ಅಚಲ ಪ್ರೀತಿಯನ್ನು ಅವರು ಈ ಮೂಲಕ ತೋರ್ಪಡಿಸಿದ್ದಾರೆ. ಅಮಿತಾಭ್ ಜಿ ಅವರ ವಿನಮ್ರ ಭಾವವನ್ನು ಅತ್ಯುತ್ತಮ ಉದಾತ್ತತೆಯೊಂದಿಗೆ ಪ್ರತಿಯಾಗಿ ನೀಡಲು ಇಷ್ಟಪಡುತ್ತೇನೆ. ಅವರೊಬ್ಬ ಭಾರತೀಯ ಚಿತ್ರರಂಗದ ಪರಾಕ್ರಮಿ ಯೋಧ'' ಎಂಬರ್ಥದಲ್ಲಿ ಗುಣಗಾನ ಮಾಡಿದ್ದಾರೆ.

ಅಮಿತಾಭ್ ಅವರನ್ನು ಶತಮಾನಗಳ ದಂತಕಥೆ ಎಂದು ವರ್ಣಿಸುವ ಮೂಲಕ ತಮ್ಮ ಈ ಪೋಸ್ಟ್ ಅನ್ನು ಪೂರ್ಣಗೊಳಿಸಿದ್ದಾರೆ. "ಅವರ ಅಲೌಕಿಕ ಸ್ಪರ್ಶಕ್ಕೆ ನನ್ನ ಗೌರವ" ಎಂಬುದಾಗಿಯೂ ತಿಳಿಸಿದ್ದಾರೆ. ಕಲ್ಕಿ 2898 ಎಡಿಯ ಪ್ರೀ-ರಿಲೀಸ್ ಈವೆಂಟ್ ಬುಧವಾರ ಸಂಜೆ ಮುಂಬೈನಲ್ಲಿ ನಡೆಯಿತು. ಸಿನಿಮಾ ದಂತಕಥೆ ಬಚ್ಚನ್​ ಜಿ ವೇದಿಕೆಯ ಮೇಲೆ ಅಶ್ವಿನಿ ದತ್ ಅವರ ಪಾದ ಸ್ಪರ್ಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಜೊತೆಗೆ ವೇದಿಕೆಯಲ್ಲಿ, "ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ವೈಜಯಂತಿ ಫಿಲ್ಮ್ಸ್ ಹೊಂದಿದ್ದಾರೆ. ಅವರಿಗಿಂತ ಹೆಚ್ಚು ಸರಳ, ವಿನಮ್ರ ವ್ಯಕ್ತಿಯನ್ನು ನಾನೆಂದಿಗೂ ಭೇಟಿ ಮಾಡಿಲ್ಲ" ಎಂದು ಅಶ್ವಿನಿ ದತ್​ ಬಗ್ಗೆ ಗುಣಗಾನ ಮಾಡಿದರು.

ಇದನ್ನೂ ಓದಿ: ಬಿಟೌನ್​ಗೆ ಹೊರಟ 'ವೀರಸಿಂಹ ರೆಡ್ಡಿ' ಡೈರೆಕ್ಟರ್: ಸನ್ನಿ ಡಿಯೋಲ್​ಗೆ ಗೋಪಿಚಂದ್​ ಆ್ಯಕ್ಷನ್​​​ ಕಟ್ - Sunny deols new project

"ಅವರು ಯಾವಾಗಲೂ ಸೆಟ್‌ನಲ್ಲಿ ಕಾಣುವ ಮೊದಲ ವ್ಯಕ್ತಿ. ನಿಮ್ಮನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿರುತ್ತಾರೆ. ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ಬೇರೆ ಯಾರೂ ಈ ರೀತಿ ಯೋಚಿಸುವುದಿಲ್ಲ" ಎಂದು ಅಮಿತಾಭ್​​, ಅಶ್ವಿನಿ ಅವರ ಪಾದಸ್ಪರ್ಶಿಸುವ ಮೊದಲು ತಿಳಿಸಿದರು. 1974ರಲ್ಲಿ ಸ್ಥಾಪನೆಗೊಂಡ ಟಾಲಿವುಡ್‌ನ ಅತಿದೊಡ್ಡ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ವೈಜಯಂತಿ ಮೂವೀಸ್ ಅನ್ನು ಅಶ್ವಿನಿ ದತ್​​ ನಡೆಸುತ್ತಿದ್ದರು. ಅವರಿಗೆ ಸ್ವಪ್ನಾ, ಪ್ರಿಯಾಂಕಾ ಮತ್ತು ಶ್ರವಂತಿ ಎಂಬ ಮೂವರು ಪುತ್ರಿಯರಿದ್ದಾರೆ. ಪ್ರಿಯಾಂಕಾ, ಕಲ್ಕಿ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಟೀ-ಶರ್ಟ್ ದಿನ: ಜನಪ್ರಿಯತೆಗೆ ಕಾರಣಗಳೇನು? - International T Shirt Day

ETV Bharat Logo

Copyright © 2024 Ushodaya Enterprises Pvt. Ltd., All Rights Reserved.