ETV Bharat / entertainment

ಅಶ್ವಿನಿ ಪುನೀತ್​ ರಾಜ್​ಕುಮಾರ್​ 'RCB' ವಿಡಿಯೋ ಅರ್ಥ ಆಯ್ತಾ? - Ashwini Puneeth Rajkumar

ರಿಷಬ್​ ಶೆಟ್ಟಿ ಬೆನ್ನಲ್ಲೇ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ 'ಆರ್​​ಸಿಬಿ' ವಿಡಿಯೋ ಹೊರಬಿದ್ದಿದೆ. ಇದು ''ರಾಯಲ್ ಚಾಲೆಂಜರ್ಸ್​ ಬೆಂಗಳೂರು'' ಎಂಬ ಬದಲಾವಣೆಯ ಸುಳಿವು ಬಿಟ್ಟುಕೊಟ್ಟಿದ್ದು, ನಿಮಗೇನು​ ಅರ್ಥವಾಯ್ತು ಎಂಬುದನ್ನು ಹೇಳಿ ನೋಡೋಣ.

Ashwini Puneeth Rajkumar
ಅಶ್ವಿನಿ ಪುನೀತ್​ ರಾಜ್​ಕುಮಾರ್
author img

By ETV Bharat Karnataka Team

Published : Mar 14, 2024, 11:16 AM IST

'ಇಂಡಿಯನ್ ಪ್ರೀಮಿಯರ್ ಲೀಗ್' (ಐಪಿಎಲ್) ಸೀಸನ್ 17 ಇದೇ ಮಾರ್ಚ್ 22ರಿಂದ ಆರಂಭ ಆಗಲಿದೆ. ಎಲ್ಲಾ ತಂಡಗಳು ಭರ್ಜರಿ ಸಿದ್ಧತೆ ನಡೆಸಿವೆ. ಎಂದಿನಂತೆ ಆರ್​ಸಿಬಿ ಅಭಿಮಾನಿಗಳು ಸಖತ್​ ಜೋಶ್​ನಲ್ಲಿದ್ದಾರೆ. 'ಈ ಬಾರಿ ಕಪ್​ ನಮ್ದೆ' ಅನ್ನೋ​ ಡೈಲಾಗ್​​ ಅನ್ನು ಆರ್​ಸಿಬಿ ಫ್ಯಾನ್ಸ್ ಹೇಳುತ್ತಿದ್ದಾರೆ. ಈ ಐಪಿಎಲ್​ಗೆ ಬಿರುಸಿನ ತಯಾರಿ ನಡೆಯುತ್ತಿದ್ದು, ಅಭಿಮಾನಿಗಳು ವೀಕ್ಷಿಸಲು ಕಾತುರರಾಗಿದ್ದಾರೆ. ಐಪಿಎಲ್​ ಅಬ್ಬರಕ್ಕೆ ಕೆಲ ದಿನಗಳಷ್ಟೇ ಬಾಕಿ ಇದ್ದು, ಇದೀಗ ಬೆಂಗಳೂರು ತಂಡ ಹೊಸ ಹೆಸರಿನೊಂದಿಗೆ ಬರುತ್ತಿದೆ.

ನಿನ್ನೆಯಷ್ಟೇ ಕನ್ನಡ ಚಿತ್ರರಂಗದ ಜನಪ್ರಿಯ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ 'ಕಾಂತಾರ'ದ ಶಿವನ ಅವತಾರದಲ್ಲಿ ಆರ್​ಸಿಬಿ ಕೋಣಗಳೊಂದಿಗೆ ಬಂದು ನಿಮಗೆ ಅರ್ಥ ಆಯ್ತಾ? ಎಂದು ಪ್ರಶ್ನಿಸಿದ್ದರು. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪತ್ನಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ನಮ್ಮ ಬೆಂಗಳೂರು ತಂಡದ ಜೊತೆ ಕೈ ಜೋಡಿಸಿದ್ದಾರೆ.

ಹೌದು, ಈ ಹಿಂದೆ ಕರ್ನಾಟಕದ ರಾಜರತ್ನ ಪುನೀತ್ ರಾಜ್‍ಕುಮಾರ್ ಬೆಂಗಳೂರು ತಂಡದ ಬ್ರ್ಯಾಂಡ್​ ಅಂಬಾಸಿಡರ್ ಆಗಿದ್ದರು. ಆದರೆ ಅಪ್ಪು ಅಗಲಿಕೆ ಹಿನ್ನೆಲೆ, ಇದೀಗ ಆ ಸ್ಥಾನದಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಬಂದಿದ್ದಾರೆ. ಅದು ಕೂಡ ಬಹಳ ವಿಶೇಷವಾಗಿಯೇ ವಿಡಿಯೋ ತಯಾರಾಗಿದೆ. ಡಾ. ರಾಜ್​ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಇರುವ ವಿಡಿಯೋದಲ್ಲಿ, ಅಶ್ವಿನಿ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಳ್ಳುವ ಮೂಲಕ ''ಆರ್ ಸಿ ಬಿ'' ಹೊಸ ಹೆಸರಿನ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾಗೆ ಖ್ಯಾತ ನಿರ್ದೇಶಕ ರಾಜಮೌಳಿ ನೀಡಿದ ಸಲಹೆ ಏನ್​ ಗೊತ್ತಾ?

ಈ ಬಾರಿ ಆರ್​ಸಿಬಿ ತಂಡವು ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್ ಬದಲಿಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹೆಸರಿನಲ್ಲಿ ಕಣಕ್ಕಿಳಿಯಲಿದೆ ಎಂದು ವರದಿಗಳು ತಿಳಿಸಿವೆ. ಮಾರ್ಚ್ 19 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಅನ್​ಬಾಕ್ಸ್​ ಕಾರ್ಯಕ್ರಮದಲ್ಲಿ ಆರ್​ಸಿಬಿ ತಂಡದ ಹೆಸರು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಎಂದು ಅನೌನ್ಸ್ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಸೆಲೆಬ್ರಿಟಿಗಳಿಂದ ಸ್ಪೆಷಲ್​ ವಿಡಿಯೋ ಅಥವಾ ಪ್ರೋಮೋ ಅನಾವರಣಗೊಳ್ಳುತ್ತಿದೆ.

ಇದನ್ನೂ ಓದಿ: 'RCB' ಕೋಣಗಳೊಂದಿಗೆ 'ಕಾಂತಾರ' ಶಿವ! ರಿಷಬ್​​ ಶೆಟ್ಟಿ ಹೇಳಿದ್ದು ಅರ್ಥವಾಯ್ತಾ?

ನಿನ್ನೆ ಕಾಂತಾರ ಖ್ಯಾತಿಯ ನಟ-ನಿರ್ದೇಶಕ ರಿಷಬ್​ ಶೆಟ್ಟಿ ಅವರ ವಿಡಿಯೋ ಅನಾವರಣಗೊಂಡಿತ್ತು. ಮೂರು ಕೋಣಗಳೊಂದಿಗೆ 'ಕಾಂತಾರ'ದ ಶಿವನ ಅವತಾರದಲ್ಲಿ ಸೂಪರ್​ ಸ್ಟಾರ್ ಬಂದಿದ್ದು, ಒಂದೊಂದು ಕೋಣಗಳ ಮೇಲೂ ರಾಯಲ್, ಚಾಲೆಂಜರ್ಸ್, ಬ್ಯಾಂಗಲೂರ್ ಎಂದು ಬರೆಯಲಾಗಿತ್ತು. ಬ್ಯಾಂಗಲೂರ್ ಎಂದು ಬರೆದಿರುವ ಕೋಣವನ್ನು ಕಂಡ ನಟ​, ಭಟ್ರೆ ಇದು ಚೆನ್ನಾಗಿಲ್ಲ. ತೆಗೆದುಕೊಂಡು ಹೋಗಿ ಎಂದು ಹೇಳಿದ್ದರು. ರಾಯಲ್, ಚಾಲೆಂಜರ್ಸ್ ಹೆಸರಿನ ಕೋಣಗಳಷ್ಟೇ ಉಳಿದುಕೊಂಡವು. ಆ ಸಂದರ್ಭ ರಿಷಬ್​, ಅರ್ಥ ಆಯ್ತಾ? ಎಂದು ಪ್ರಶ್ನಿಸಿದ್ದರು. ಇದೀಗ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಕೂಡ 'RCB' ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಅರ್ಥ ಆಯ್ತಾ? ಎಂದು ಕೇಳಿದ್ದಾರೆ. ಇದು ''ರಾಯಲ್ ಚಾಲೆಂಜರ್ಸ್​ ಬೆಂಗಳೂರು'' ಎಂಬ ಸುಳಿವು ಬಿಟ್ಟುಕೊಟ್ಟಿದ್ದು, ನಿಮಗೇನ್​ ಅರ್ಥವಾಯ್ತು ಎಂಬುದನ್ನು ಹೇಳಿ ನೋಡೋಣ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.