ಮೈಸೂರು: ಇಂದು ಶ್ರಾವಣ ಮಾಸದ ಹುಣ್ಣಿಮೆ. ಕನ್ನಡ ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ಪುತ್ರಿಯೊಂದಿಗೆ ಆಗಮಿಸಿದ ಅವರು ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ದಿವಂಗತ ನಟ ಪುನೀತ್ ರಾಜ್ಕುಮಾರ್ ಪ್ರತೀ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ದಕ್ಷಿಣ ಕಾಶಿ ಖ್ಯಾತಿಯ ನಂಜುಂಡೇಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು. ಇಂದು ಪತ್ನಿ ಅಶ್ವಿನಿ ದೇವಾಲಯದಲ್ಲಿ ಕುಳಿತು ಕೆಲಹೊತ್ತು ಧ್ಯಾನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಅವರ ಕುಟುಂಬಸ್ಥರು ಜೊತೆಗಿದ್ದರು.
ನಂಜುಡೇಶ್ವರ ದರ್ಶನ ಪಡೆದ ಶಾಸಕ ಜಿ.ಟಿ.ದೇವೇಗೌಡ: ಶಾಸಕ ಜಿ.ಟಿ.ದೇವೇಗೌಡ ದಂಪತಿ ನಂಜುಂಡೇಶ್ವರನ ದರ್ಶನ ಪಡೆದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬಿಜೆಪಿ, ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಯಶ್ವಸಿಯಾಗಿದೆ. ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಮುಂದೆ ನ್ಯಾಯಾಲಯದಲ್ಲಿ ಪ್ರಕರಣ ತೀರ್ಮಾನವಾಗಲಿದ್ದು, ಕಾದು ನೋಡಬೇಕು. ಮುಂದೆಯೂ ಬಿಜೆಪಿ, ಜೆಡಿಎಸ್ ಒಟ್ಟಾಗಿ ಹೋಗಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಟ್ರೇಲರ್ ಅನಾವರಣಕ್ಕೆ ದಿನ ನಿಗದಿ - Rakshit Shetty movie
ನಂಜನಗೂಡಿನಲ್ಲಿ ಭಕ್ತಸಾಗರ: ಹುಣ್ಣಿಮೆಯಂದು ನಂಜುಂಡೇಶ್ವರನ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಕಪಿಲಾ ನದಿಯಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.