ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ನಡುವಿನ ಬ್ರೇಕಪ್ ಸುದ್ದಿ ಸದ್ದು ಮಾಡುತ್ತಿರುವ ನಡುವೆಯೇ ಇದೀಗ ಅರ್ಜುನ್ ಕಪೂರ್ ಅವರ 'ಭೂತ ಹಾಗೂ ಭವಿಷ್ಯದ' ಕುರಿತ ಸೋಶಿಯಲ್ ಮೀಡಿಯಾ ಸ್ಟೋರಿ ಅಚ್ಚರಿ ಮೂಡಿಸಿದೆ. ಮಲೈಕಾ ಅರೋರಾ ಅವರ ಪ್ರತಿನಿಧಿ ವೆಬ್ಲಾಯ್ಡ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಬ್ರೇಕಪ್ ವದಂತಿಗಳಿಗೆ ತಳ್ಳಿ ಹಾಕಿದ ಒಂದು ದಿನದ ಬೆನ್ನಲ್ಲೇ ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವಂತೆ ಸ್ಟೋರಿ ಹಾಕಿದ್ದಾರೆ.
ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿರುವ ಅರ್ಜುನ್ ಕಪೂರ್, "ನಮಗೆ ಜೀವನದಲ್ಲಿ ಎರಡು ಆಯ್ಕೆಗಳಿವೆ. ನಾವು ನಮ್ಮ ಭೂತಕಾಲದ ಜೊತೆಗೆ ಅಂಟಿಕೊಳ್ಳಬಹುದು ಅಥವಾ ಭವಿಷ್ಯದ ಸಾಧ್ಯತೆಗಳ ಪರಿಶೋಧಕರಾಗಬಹುದು." ಎಂದು ಬರೆದಕೊಂಡಿದ್ದಾರೆ. ಈ ಪೋಸ್ಟ್ ಇದೀಗ ನೆಟ್ಟಿಗರಲ್ಲಿ ಮತ್ತೆ ಕುತೂಹಲ ಕೆರಳಿಸುವಂತೆ ಮಾಡಿದೆ. 2018ರಲ್ಲಿ ಮಲೈಕಾ ಅವರ 45ನೇ ಹುಟ್ಟುಹಬ್ಬದಂದು ಇಬ್ಬರೂ ತಾವು ರಿಲೇಶನ್ಶಿಪ್ನಲ್ಲಿ ಇರುವುದಾಗಿ ದೃಢಪಡಿಸಿಕೊಂಡಿದ್ದರು.
ಬ್ರೇಕಪ್ ವದಂತಿ ಹಬ್ಬತ್ತಿದ್ದಂತೆ, ಈ ಬಗ್ಗೆ ಪ್ರಶ್ನಿಸಿದಾಗ ಮಲೈಕಾ ಅವರ ಪ್ರತಿನಿಧಿ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, "ಇಲ್ಲ, ಎಲ್ಲವೂ ವದಂತಿ ಎಂದು ದೃಢಪಡಿಸಿದ್ದರು. ಮಲೈಕಾ ಅವರು ಈ ಹಿಂದೆ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಮಾತ್ರವಲ್ಲದೇ ಅವರಿಬ್ಬರಿಗೆ ಅರ್ಹಾನ್ ಖಾನ್ ಎಂಬ ಮಗನೂ ಇದ್ದಾನೆ.
ಮಲೈಕಾ ಹಾಗೂ ಅರ್ಜುನ್ ಅವರು ಬೇರೆ ಬೇರೆಯಾಗಲು ನಿರ್ಧರಿಸಿದ್ದಾರೆ. ಆದರೂ ಇನ್ನೂ ಒಬ್ಬರನ್ನೊಬ್ಬರು ಹೆಚ್ಚು ಗೌರವಿಸುತ್ತಾರೆ. ಇಂತಹ ಸೂಕ್ಷ್ಮ ಸಮಯದಲ್ಲಿ ಗೌಪ್ಯತೆಯನ್ನು ನಿರೀಕ್ಷಿಸುತ್ತಾರೆ. ಇಬ್ಬರೂ ತಮ್ಮ ಗೌರವಯುತ ರಿಲೇಶನ್ಶಿಪ್ ಅನ್ನು ಇದೀಗ ಸೌಹಾರ್ದಯುತವಾಗಿ ಕೊನೆಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಸಿನಿಮಾಗಳನ್ನು ನೋಡುವುದಾದರೆ, ಅರ್ಜುನ್ ಕಪೂರ್ ಅವರು, ಅಜಯ್ ದೇವಗನ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಹಾಗೂ ರಣವೀರ್ ಸಿಂಗ್ ತಾರಾಗಣದಲ್ಲಿರುವ ರೋಹಿತ್ ಶೆಟ್ಟಿ ನಿರ್ದೇಶನದ ಮುಂಬರುವ ಚಿತ್ರ ಸಿಂಗಮ್ ಎಗೇನ್ನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಅರ್ಜುನ್ ಜೊತೆ ಬ್ರೇಕ್ಅಪ್ ವದಂತಿ: ಪ್ರೀತಿ, ಬೆಂಬಲದ ಬಗ್ಗೆ ಮಾತನಾಡಿದ ಮಲೈಕಾ ಅರೋರಾ - Malaika Arjun