ETV Bharat / entertainment

ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಅವಕಾಶ ಕಡಿಮೆಯಾಗಿವೆಯೇ? - fewer Opportunities for Heroines

ಕನ್ನಡ ಚಿತ್ರರಂಗದಲ್ಲಿ ನಟಿಮಣಿಯರಿಗೆ ಅವಕಾಶಗಳು ಕಡಿಮೆ ಆಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

fewer Opportunities for kannada Heroines
ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಅವಕಾಶ ಕಡಿಮೆಯಾಗಿವೆಯೇ?
author img

By ETV Bharat Karnataka Team

Published : Apr 5, 2024, 2:31 PM IST

Updated : Apr 5, 2024, 5:42 PM IST

ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗಳಿಗೆ ಕೊರತೆ ಇದೆಯೇ? ಇದ್ದವರಿಗೆ ಅವಕಾಶ ಯಾಕೆ ಕೊಡುತ್ತಿಲ್ಲ? ಬೇರೆ ಭಾಷೆಯ ಕಲಾವಿದರನ್ನು ಯಾಕೆ ಕರೆದುಕೊಂಡು ಬರುತ್ತಾರೆ? ಅದು ತಪ್ಪಲ್ಲ, ಆದರೆ, ಇಲ್ಲಿವರಿಗೆ ಮೊದಲ ಆದ್ಯತೆ ಕೊಡಬೇಕಲ್ಲವೇ? ನಮ್ಮ ಚಿತ್ರರಂಗದಲ್ಲಿ ಹೆಣ್ಮಕ್ಕಳು ಯಾವುದರಲ್ಲಿ ಕಡಿಮೆ ಇದ್ದಾರೆ ಹೇಳಿ? ನಟಿಸುತ್ತೇವೆ. ಸ್ವತಃ ನಾವೇ ಡಬ್ಬಿಂಗ್‍ ಮಾಡುತ್ತೇವೆ. ಪ್ರಚಾರಕ್ಕೆ ಹೋಗುತ್ತೇವೆ. ಇನ್ನೇನು ಬೇಕು? ನನಗೆ ಅರ್ಥವಾಗುತ್ತಿಲ್ಲ ಎಂದು ನಟಿ ಅದ್ವಿತಿ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು, ಇತ್ತೀಚೆಗಷ್ಟೇ ತಮ್ಮ ಬೇಸರವನ್ನು ಹೀಗೆ ಹೊರಹಾಕಿದ್ದಾರೆ ನಟಿ ಅದ್ವಿತಿ ಶೆಟ್ಟಿ. ಅದಕ್ಕೆ ಕಾರಣವೂ ಇದೆ. ಅವರು ಚಿತ್ರರಂಗಕ್ಕೆ ಬಂದು ಒಂದಿಷ್ಟು ವರ್ಷಗಳಾಗಿವೆ. ಬೆರಳಣಿಕೆಯ ಚಿತ್ರಗಳಲ್ಲಿ ಅದ್ವಿತಿ ನಾಯಕಿಯಾಗಿ ನಟಿಸಿದ್ದಾರೆ. ಸರಿ ಮುಂದೇನು? ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಹೊಸ ಅವಕಾಶಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಅವಕಾಶಗಳು ಸಿಕ್ಕರೂ ದೊಡ್ಡ ಹೀರೋಗಳ ಅಥವಾ ದೊಡ್ಡ ಬಜೆಟ್‍ನ ಚಿತ್ರಗಳು ಸಿಗುವುದು ಕಷ್ಟ. ಹೀಗಿರುವಾಗ ಮುಂದೇನು? ಎಂಬ ಪ್ರಶ್ನೆ ಕಾಡುತ್ತಿದೆ.

ಇದು ಅದ್ವಿತಿ ಅವರೊಬ್ಬರ ಪ್ರಶ್ನೆಯಲ್ಲ. ಕನ್ನಡ ಚಿತ್ರರಂಗದಲ್ಲಿ ಕೆಲ ನಿರ್ದೇಶಕರಿಗಷ್ಟೇ ಅಲ್ಲದೇ, ನಟಿಯರಿಗೂ ಅವಕಾಶಗಳು ಸಿಗುತ್ತಿಲ್ಲ. ಬೆರಳಣಿಕೆಯಷ್ಟು ನಟಿಯರು ಒಂದಿಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮಿಕ್ಕಂತೆ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್‍ ಸೇರಿದಂತೆ ಹಲವರು ಬಹುಭಾಷೆಗಳ ಪಾಲಾಗಿದ್ದಾರೆ. ಉಳಿದವರು ಮುಂದೇನು ಎಂದು ಗೊತ್ತಿಲ್ಲದೆ ಒದ್ದಾಡುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಾಯಕಿಯರ, ನಾಯಕಿ ಪ್ರಧಾನ ಚಿತ್ರಗಳ ಪರಂಪರೆ ದೊಡ್ಡದಿದೆ. ಆದ್ರೀಗ ನಾಯಕಿ ಪ್ರಧಾನ ಚಿತ್ರ ಎಂಬ ಕೆಟಗರಿ ಹೆಸರಿಗೆ ಮಾತ್ರ ಇದೆ. ಈ ಸಾಲಿನಲ್ಲಿ ವರ್ಷಕ್ಕೆ ಒಂದೋ, ಎರಡೋ ಚಿತ್ರಗಳು ಬರುವುದು ಬಿಟ್ಟರೆ, ನಾಯಕಿ ಪ್ರಧಾನ ಚಿತ್ರಗಳೆಂದರೆ ಮರೆತೇ ಹೋಗುವಂತಿದೆ. ಇನ್ನೂ, ನಾಯಕಿ ಪ್ರಧಾನ ಚಿತ್ರವಲ್ಲದಿದ್ದರೂ, ಒಂದು ಚಿತ್ರದಲ್ಲಿ ನಾಯಕಿಯರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಚಿತ್ರರಂಗದಲ್ಲಿ ಏಕಕಾಲಕ್ಕೆ 8-10 ಸಕ್ರಿಯ ನಾಯಕಿಯರಿರುತ್ತಿದ್ದರು. ಅವರೆಲ್ಲ 10-15 ವರ್ಷಗಳ ಕಾಲ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಿದ್ದರು. ಎಲ್ಲಾ ಜನಪ್ರಿಯ ನಟರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದರು. ಆದ್ರೀಗ ನಟಿಯರು 10 ಚಿತ್ರಗಳಲ್ಲಿ ನಟಿಸುವುದೇ ದೊಡ್ಡದು ಎನ್ನುವಂತಾಗಿದೆ. ನಾಯಕಿಯರ ಸಿನಿ ಕೆರಿಯರ್ 5 ವರ್ಷಕ್ಕಿಳಿದಿದೆ.

fewer Opportunities for kannada Heroines
ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಅವಕಾಶ ಕಡಿಮೆಯಾಗಿವೆಯೇ?

ಬಹುಶಃ ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಲ್ಲಿ ನಾಯಕಿಯಾಗಿ ಒಂದು ದಶಕ ಕಳೆಯುವುದರ ಜೊತೆಗೆ ಹಲವು ಚಿತ್ರಗಳಲ್ಲಿ ಜನಪ್ರಿಯ ನಾಯಕರ ಜೊತೆಗೆ ನಟಿಸಿದ ಏಕೈಕ ನಟಿ ಎಂದರೆ ಅದು ರಚಿತಾ ರಾಮ್‍ ಒಬ್ಬರೇ ಇರಬೇಕು. ರಚಿತಾ ರಾಮ್ ಚಿತ್ರರಂಗದಲ್ಲಿ ಒಂದು ದಶಕ ಕಳೆದಿದ್ದು, ಒಂದಿಷ್ಟು ಚಿತ್ರಗಳಲ್ಲಿ ನಟಿಸಿದರೆನ್ನುವುದು ಖುಷಿಯ ವಿಚಾರವೇ. ಆದರೆ, ಅಲ್ಲೂ ಅವರಿಗೆ ಅಭಿನಯಿಸುವುದಕ್ಕೆ ಎಷ್ಟು ಪಾತ್ರಗಳು ಸಿಕ್ಕಿದವು, ಎಷ್ಟರಲ್ಲಿ ಅವರು ಗುರುತಿಸಿಕೊಂಡರು ಎಂಬ ಬಗ್ಗೆ ದೊಡ್ಡ ಲಿಸ್ಟ್ ಕೊಡಿ ಅಂದ್ರೆ ಉತ್ತರಿಸುವುದು ಕೊಂಚ ಕಷ್ಟವೇ.

ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್‍ ದೊಡ್ಡ ಯಶಸ್ಸು ಕಂಡ ಸಿನಿಮಾ. ಆ ಚಿತ್ರದಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿ, ಸುದೀಪ್‍ ಜೊತೆಗೆ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿರುವುದು ಬಿಟ್ಟರೆ ಕನ್ನಡದ ಬೇರೆ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಕಾಂತಾರ‌ ನಂತರ ಸಪ್ತಮಿ ಗೌಡ ಮುಂದಿನ ಸೆನ್ಸೇಷನ್‍ ಎಂದೇ ಹೇಳಲಾಯ್ತು. ಆ ಚಿತ್ರದ ನಂತರ ಸಪ್ತಮಿ, ಅಭಿಷೇಕ್‍ ಅಂಬರೀಶ್‍ ಅಭಿನಯದ ಕಾಳಿ ಮತ್ತು ಯುವ ರಾಜ್​ಕುಮಾರ್ ಅಭಿನಯದ ಯುವ ಚಿತ್ರಗಳನ್ನು ಒಪ್ಪಿಕೊಂಡರು. ಈ ಪೈಕಿ ಕಾಳಿ ನಿಂತಿರುವ ಸುದ್ದಿ ಬಂದಿದೆ. ಯುವ ಬಿಡುಗಡೆಯಾಗಿದೆ. ಮುಂದೆ? ಗೊತ್ತಿಲ್ಲ. ಮತ್ತೊಂದೆಡೆ ರಾಬರ್ಟ್ ಚಿತ್ರದ ಯಶಸ್ಸಿನ ನಂತರವೂ ಆಶಾ ಭಟ್‍ ಮತ್ತೊಂದು ಚಿತ್ರದಲ್ಲಿ ನಟಿಸಲಿಲ್ಲ.

ಕಾಟೇರ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಮಾಲಾಶ್ರೀ ಮಗಳು ಆರಾಧನಾ ಬಗ್ಗೆ ಚಿತ್ರತಂಡದವರೆಲ್ಲರೂ ಒಳ್ಳೆಯ ಮಾತುಗಳನ್ನಾಡಿದರು. ಚಿತ್ರ ಸಹ ಯಶಸ್ವಿಯಾಯ್ತು. ಅದಾಗಿ ಮೂರು ತಿಂಗಳಾಗಿವೆ. ಆದ್ರೆ ಆರಾಧನಾ ಇನ್ನೂ ಯಾಕೆ ಹೊಸ ಚಿತ್ರ ಒಪ್ಪಿಲ್ಲವೋ ಗೊತ್ತಿಲ್ಲ. ಇನ್ನೂ ನೆನಪಿರಲಿ ಖ್ಯಾತಿಯ ಪ್ರೇಮ್‍ ಮಗಳ ಮೊದಲ ಚಿತ್ರವೂ ಯಶಸ್ವಿಯಾಯಿತು. ಆದರೂ ಟಗರು ಪಲ್ಯ ನಂತರ ಅಮೃತಾ ಪ್ರೇಮ್‍ ಇನ್ನೊಂದು ಚಿತ್ರವನ್ನು ಒಪ್ಪಿರುವ ಸುದ್ದಿಯಾಗಿಲ್ಲ. ಅವರಿಗೆ ಅವಕಾಶಗಳೇ ಸಿಗುತ್ತಿಲ್ಲವೋ ಅಥವಾ ದೊಡ್ಡ ಬ್ಯಾನರ್, ದೊಡ್ಡ ಹೀರೋ ಅಂತ ಕಾಯುತ್ತಿದ್ದಾರೋ ಗೊತ್ತಿಲ್ಲ. ಸಣ್ಣಪುಟ್ಟ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಗುರುತಿಸಿಕೊಂಡು, ನಂತರ ಸ್ಟ್ರಗಲ್‍ ಮಾಡುವವರದ್ದು ಬೇರೆ ಮಾತು. ದೊಡ್ಡ ಬ್ಯಾನರ್​ನಿಂದಲೇ ಚಿತ್ರರಂಗಕ್ಕೆ ಪರಿಚಿತರಾಗಿ, ಚಿತ್ರ ಯಶಸ್ವಿಯಾದರೂ ನಾಯಕಿಯರ ಮುಂದಿನ ಚಿತ್ರಗಳ ಬಗ್ಗೆಯೂ ಮಾಹಿತಿ ಇಲ್ಲ.

ಸದ್ಯ ಕನ್ನಡ ಚಿತ್ರರಂಗದಲ್ಲಿ ಯಾರೆಲ್ಲಾ ಬ್ಯುಸಿಯಾಗಿದ್ದಾರೆ ಎಂದು ನೋಡಿದರೆ ರೀಷ್ಮಾ ನಾಣಯ್ಯ, ಧನ್ಯಾ ರಾಮ್‍ಕುಮಾರ್, ಸಂಜನಾ ಆನಂದ್‍, ರುಕ್ಮಿಣಿ ವಸಂತ್‍ ಎಂದು ಕೆಲ ನಟಿಯರ ಹೆಸರುಗಳು ಕೇಳಿ ಬರುತ್ತವೆ. ಇವರೆಲ್ಲಾ ಎರಡ್ಮೂರು ಚಿತ್ರಗಳಲ್ಲಿ ನಾಯಕಿಯರಾಗಿ ಅಭಿನಯಿಸುತ್ತಿದ್ದು, ಆ ಚಿತ್ರಗಳು ಬಿಡುಗಡೆಯಾಗಬೇಕಿವೆ. ಮಿಕ್ಕಂತೆ ಹೊಸ ಚಿತ್ರಗಳು ಬಿಡುಗಡೆ ಆಗುತ್ತಿವೆಯಲ್ಲ, ನಾಲ್ಕು ನಾಯಕಿಯರ ಹೆಸರೇಳಿ ಎಂದು ಕೇಳಿದರೆ ಉತ್ತರಿಸುವುದು ಕೊಂಚ ಕಷ್ಟವೇ. ಎಷ್ಟೋ ಹೊಸಬರು ಬಂದಷ್ಟೇ ವೇಗವಾಗಿ ಸುಮ್ಮನಾಗುತ್ತಾರೆ.

ಇದನ್ನೂ ಓದಿ: 'ದಿ ಗರ್ಲ್​​ಫ್ರೆಂಡ್​​​' ಪೋಸ್ಟರ್: ಒಂದಲ್ಲ, ಎರಡು ಲುಕ್ ಅನಾವರಣಗೊಳಿಸಿ ರಶ್ಮಿಕಾಗೆ ಸ್ಪೆಷಲ್ ವಿಶ್ - The Girlfriend

ಒಂದು ಕಾಲಕ್ಕೆ ಪರಭಾಷೆಯಲ್ಲಿ ಒಂದು ಚಿತ್ರ ಹಿಟ್‍ ಆದರೆ, ಅದನ್ನು ರೀಮೇಕ್‍ ಮಾಡುವುದಕ್ಕೆ, ಅಲ್ಲಿನ ನಾಯಕಿಯರನ್ನು ಇಲ್ಲಿ ಪರಿಚಯಿಸುವುದಕ್ಕೆ ಪೈಪೋಟಿಯೇ ನಡೆಯುತ್ತಿತ್ತು. ಈಗ ರೀಮೇಕೂ ಇಲ್ಲ, ಪರಭಾಷಾ ನಾಯಕಿಯರೂ ಇಲ್ಲ. ಪರಭಾಷೆಯಲ್ಲಿ ದೊಡ್ಡ ಹೆಸರು ಮಾಡಿದ ನಟಿಯರು ಕನ್ನಡ ಚಿತ್ರರಂಗಕ್ಕೆ ಬಂದು ಬಹಳ ಸಮಯವೇ ಆಗಿದೆ. ಆದರೆ, ಅವರಿಂದ ಕನ್ನಡತಿಯರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಚಿತ್ರರಂಗದವರೇ ಹೇಳುತ್ತಾರೆ.

ಇದನ್ನೂ ಓದಿ: ಚಿತ್ರೀಕರಣದ ವೇಳೆ ಅಪಘಾತಕ್ಕೊಳಗಾಗಿದ್ದ ನಟ ಅಜಿತ್ ಕಾರು: ವಿಡಿಯೋ ವೈರಲ್ - Ajith Car Accident

ಹಾಗಿರುವಾಗ, ಕನ್ನಡತಿಯರಿಗೇಕೆ ಅವಕಾಶಗಳು ಸಿಗುತ್ತಿಲ್ಲ? ಕನ್ನಡತಿಯರು ಮಾಯವಾಗುತ್ತಿರುವುದೆಲ್ಲಿ? ಇದಕ್ಕೂ ಹೀರೋಗಳು ಸಿನಿಮಾ ಕಡಿಮೆ ಮಾಡಿರುವುದೇ ಕಾರಣ ಎಂಬ ಅಭಿಪ್ರಾಯ ಚಿತ್ರರಂಗದಲ್ಲಿ ವ್ಯಕ್ತವಾಗುತ್ತದೆ. ಒಬ್ಬ ನಟಿ ಒಂದು ಚಿತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಂತೆಯೇ, ಕ್ರಮೇಣ ಬೇರೆ ಹೀರೋಗಳ ಚಿತ್ರಗಳಲ್ಲಿ ನಟಿಸುವುದಕ್ಕೆ ಅವಕಾಶಗಳು ಸಿಗುತ್ತಿತ್ತು. ಆದರೆ, ಈಗ ಎಲ್ಲಾ ಹೀರೋಗಳು ಎರಡ್ಮೂರು ವರ್ಷಕ್ಕೊಂದು ಚಿತ್ರ ಮಾಡುತ್ತಿರುವುದರಿಂದ, ಮುಂದೇನು ಎಂದು ಅವರಿಗೆ ಗೊತ್ತಿಲ್ಲದಿರುವುದರಿಂದ ಅದರ ಪರಿಣಾಮ ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರಿಗಷ್ಟೇ ಅಲ್ಲ, ನಾಯಕಿಯರ ಮೇಲೂ ಆಗುತ್ತಿದೆ. ಒಂದು ಚಿತ್ರದಲ್ಲಿ ಗುರುತಿಸಿಕೊಂಡ ಮೇಲೆ, ಸಹಜವಾಗಿ ಎಲ್ಲರೂ ಇನ್ನೊಬ್ಬ ಜನಪ್ರಿಯ ಹೀರೋನ, ದೊಡ್ಡ ಬ್ಯಾನರ್​ನ ಅಥವಾ ದೊಡ್ಡ ಬಜೆಟ್‍ ಚಿತ್ರದಲ್ಲಿ ನಟಿಸಬೇಕು ಎಂದು ಆಸೆಪಡುತ್ತಾರೆ. ಹೊಸಬರ ಚಿತ್ರಗಳಲ್ಲಿ ನಟಿಸಿದರೆ ಅವು ಬಿಡುಗಡೆಯಾಗುತ್ತವೆ, ಆದರೂ ಜನ ನೋಡುತ್ತಾರೆ ಎಂದು ಹೇಳುವುದು ಕಷ್ಟ. ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಅವಕಾಶ ಕಡಿಮೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

Last Updated : Apr 5, 2024, 5:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.