ಬಾಲಿವುಡ್ ಸ್ಟಾರ್ಗಳಾದ ಅಕ್ಷಯ್ ಕುಮಾರ್ ಹಾಗೂ ಟೈಗರ್ವ ಶ್ರಾಫ್ ಜೊತೆಯಾಗಿ ನಟಿಸಿರುವ ಬಹು ನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಬಡೇ ಮಿಯಾನ್ ಚೋಟೆ ಮಿಯಾನ್ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸಿನಿಮಾ ಈದ್ ತೆರೆಗೆ ಬರಲಿದೆ. ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಸ್ಟಾರ್ ನಟರಿಬ್ಬರು ಸಿಕ್ಕ ಸಣ್ಣ ಸಣ್ಣ ಅವಕಾಶಗಳನ್ನೂ ವೈವಿಧ್ಯಮಯವಾಗಿ ಸಿನಿಮಾದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದೀಗ ಇಂದು ಏಪ್ರಿಲ್ 1, ಮೂರ್ಖರ ದಿನ. ಈ ದಿನವನ್ನೂ ಸಿನಿಮಾದ ಪ್ರಚಾರಕ್ಕೆ ಬಳಸಿಕೊಂಡಿರುವ ಟೈಗರ್ ಶ್ರಾಫ್, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಕ್ಷಯ್ ಕುಮಾರ್ ಅವರನ್ನು ಗೇಲಿ ಮಾಡುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ದೊಡ್ಡ ತಂಪು ಪಾನೀಯ ಬಾಟಲಿಯನ್ನು ಶೇಕ್ ಮಾಡುವುದರೊಂದಿಗೆ ಇನ್ಸ್ಟಾಗ್ರಾಂ ವಿಡಿಯೋ ಪ್ರಾರಂಭಗೊಳ್ಳುತ್ತದೆ. ನಂತರ ಹಿತ್ತಲಿನಲ್ಲಿ ಗೆಳೆಯರ ಜೊತೆಗೆ ಆಟವಾಡಲು ಹೋಗುತ್ತಾರೆ. ಆಗ ಅಲ್ಲಿಗೆ ಓಡಿಕೊಂಡು ಬಂದ ಅಕ್ಷಯ್ ಕುಮಾರ್ ಅವರಿಗೆ ಟೈಗರ್ ಶ್ರಾಫ್ ಕುರ್ಚಿ ಮೇಲೆ ಇಟ್ಟಿರುವ ತಂಪು ಪಾನೀಯದ ಬಾಟಲಿ ತರುವಂತೆ ಹಾಗೂ ಮುಚ್ಚಳವನ್ನು ತೆರೆಯುವಂತೆ ಹೇಳುತ್ತಾರೆ. ಟೈಗರ್ ಶ್ರಾಫ್ ಕೋರಿಕೆಯಂತೆ ಅಕ್ಷಯ್ ಬಾಟಲಿಯ ಮುಚ್ಚಳ ತೆರೆಯುತ್ತಾರೆ. ಮುಚ್ಚಳ ತೆರಯುತ್ತಿದ್ದಂತೆ ಅದರಲ್ಲಿರುವ ಫಿಜ್ನಿಂದಾಗಿ ತಂಪು ಪಾನೀಯ ಅಕ್ಷಯ್ ಅವರ ಮುಖ ಹಾಗೂ ಮೈಮೇಲೆಲ್ಲ ಚೆಲ್ಲುತ್ತದೆ. ವಿಡಿಯೋ ಹಂಚಿಕೊಂಡಿರುವ ಟೈಗರ್ ಶ್ರಾಫ್, "ಏಪ್ರಿಲ್ (ಹೂವಿನ ಇಮೋಜಿ) ಬಡೆ ಮಿಯಾನ್ (ನಗುವ ಇಮೋಜಿ)" ಎಂದು ಶೀರ್ಷಿಕೆ ಬರೆದುಕೊಂಡು ಅಕ್ಷಯ್ ಕುಮಾರ್ ಅವರಿಗೆ ಏಪ್ರಿಲ್ ಫೂಲ್ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಿನಿಮಾದ ಬಗ್ಗೆ ನೋಡುವುದಾದರೆ, ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಅವರ ಬಡೆ ಮಿಯಾನ್ ಚೋಟೆ ಮಿಯಾನ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಅಲಿ ಅಬ್ಬಾಸ್ ಜಾಫರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರು ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಆಯಲಾ ಎಫ್ ಕೂಡ ತಾರಾಗಣದಲ್ಲಿದ್ದಾರೆ. ಸಿನಿಮಾ ಏಪ್ರಿಲ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪೂಜಾ ಎಂಟರ್ಟೈನ್ಮೆಂಟ್ ಮತ್ತು ಎಎಜೆಡ್ ಫಿಲ್ಮ್ ಬ್ಯಾನರ್ ಅಡಿ ನಿರ್ಮಾಣ ಮಾಡಲಾಗಿದೆ. 2024ರ ಅತಿದೊಡ್ಡ ಬ್ಲಾಕ್ಬಸ್ಟರ್ ಸಿನಿಮಾ ಆಗುವ ನಿರೀಕ್ಷೆಯಲ್ಲಿರುವ ಬಡೇ ಮಿಯಾನ್ ಚೋಟೆ ಮಿಯಾನ್ ಹಿಂದಿ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 'ರಣ್ಬೀರ್ ಕಪೂರ್ ಸಂಸ್ಕಾರವಂತ': ಚರ್ಚೆಗೆ ಕಾರಣವಾಯ್ತು ತಾಯಿ ನೀತು ಹೇಳಿಕೆ - Ranbir Kapoor