ETV Bharat / entertainment

'ಅಪ್ಪು ಸರ್ ನನಗೆ ಧೈರ್ಯ ತುಂಬಿದ್ದರು': ಪುನೀತ್​ ರಾಜ್​ಕುಮಾರ್​ ಸ್ಮರಿಸಿದ ಹರ್ಷಿಕಾ ಪೂಣಚ್ಚ - Harshika on Appu - HARSHIKA ON APPU

2010ರ ಅಕ್ಟೋಬರ್​ 14ರಂದು ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದ 'ಜಾಕಿ' ಸಿನಿಮಾದಲ್ಲಿ ನಟಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದರು. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​​ ಹಾಗೂ ಭಾವನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಆ ಸಂದರ್ಭ ಅಪ್ಪು ತುಂಬಿದ್ದ ಧೈರ್ಯವನ್ನು ಹರ್ಷಿಕಾ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Harshika Poonacha, Harshika Poonacha
ಹರ್ಷಿಕಾ ಪೂಣಚ್ಚ, ಪುನೀತ್​ ರಾಜ್​ಕುಮಾರ್ (ETV Bharat)
author img

By ETV Bharat Karnataka Team

Published : Aug 6, 2024, 1:21 PM IST

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಪುನೀತ್​ ರಾಜ್​ಕುಮಾರ್​ ನಮ್ಮೆಲ್ಲರನ್ನು ಅಗಲಿ ದಿನಗಳು ಉರುಳಿವೆ. ಆದರೆ ಅವರ ನೆನಪು ಮಾತ್ರ ಸದಾ ಜೀವಂತ. ಅವರ ಸಿನಿಮಾ ಮತ್ತು ಸಾಮಾಜಿಕ ಸೇವೆ ಹೆಚ್ಚಿನ ಸಂಖ್ಯೆಯ ಜನರಲ್ಲಿ ಅಚ್ಚಳಿಯದೇ ಉಳಿದಿದೆ. ಅಪ್ಪು ಹೆಸರಲ್ಲಿ ಮಾನವೀಯ ಕಾರ್ಯಗಳು ಮತ್ತು ಅವರ ಸ್ಮರಣೆ ಮುಂದುವರೆದಿದೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಅವರು ಪುನೀತ್​​ ರಾಜ್​ಕುಮಾರ್​​​ ಕುರಿತಾದ ವಿಶೇಷ ಪೋಸ್ಟ್ ಶೇರ್ ಮಾಡೋ ಮೂಲಕ ಗಮನ ಸೆಳೆದಿದ್ದಾರೆ. ​

'ಜಾಕಿ', 2010ರ ಅಕ್ಟೋಬರ್​ 14ರಂದು ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ಸಿನಿಮಾ. ಬಹುತೇಕ ಉತ್ತಮ ಪ್ರತಿಕ್ರಿಯೆ ಗಳಿಸಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆ ವಿಚಾರದಲ್ಲೂ ಯಶ ಕಂಡಿತ್ತು. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​​ ಹಾಗೂ ಭಾವನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ, ಸುಮಿತ್ರಾ, ರಂಗಾಯಣ ರಘು, ಪೆಟ್ರೋಲ್​ ಪ್ರಸನ್ನ, ವಿಕಾಸ್​​​ ಸೇರಿದಂತೆ ಹಲವರು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದರು. ಪಾರ್ವತಮ್ಮ ರಾಜ್​ಕುಮಾರ್​ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದರು.

ಪುನೀತ್​ ರಾಜ್​​​ಕುಮಾರ್​ ವೃತ್ತಿಜೀವನದಲ್ಲಿ ಈ ಚಿತ್ರ ಮಹತ್ವದ ಪಾತ್ರ ವಹಿಸಿದೆ. ಕನ್ನಡದಲ್ಲಿ ಇದು ಯಶಸ್ವಿ ಚಿತ್ರಗಳಲ್ಲೊಂದು. ಹರ್ಷಿಕಾ ಪೂಣಚ್ಚ ಅವರ ಆರಂಭದ ದಿನಗಳಲ್ಲಿ ಸಿಕ್ಕ ಸಿನಿಮಾ. ಸದ್ಯ ನಟಿ ತಮ್ಮ ಅನುಭವ, ಅಪ್ಪು ಕೊಟ್ಟ ಸಾಥ್ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪುನೀತ್​​ ಅವರ ಜೊತೆಗಿನ ಒಂದು ಫೋಟೋ ಕೂಡಾ ಶೇರ್ ಮಾಡಿದ್ದಾರೆ.

ಹರ್ಷಿಕಾ ಪೂಣಚ್ಚ ಪೋಸ್ಟ್: ''ಚಿತ್ರೀಕರಣದ ಮೊದಲ ದಿನ ನನಗಾದ ಅನುಭವ, ಭಯ, ಹತಾಶೆಯನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಅದರಲ್ಲೂ, ಒಂದೇ ಒಂದು ಡೈಲಾಗ್​ ಇಲ್ಲದೇ ದೃಶ್ಯವೊಂದನ್ನು ನಿಭಾಯಿಸಬೇಕಾದ ಕ್ಷಣ. ಅದೊಂದು ಕಠಿಣ ಪರಿಸ್ಥಿತಿ. ಕಣ್ಣೀರಿಟ್ಟಿದ್ದೆ. ಆದ್ರೆ ಅಪ್ಪು ಸರ್​​ ನನ್ನ ಸಂಕಟ ಗಮನಿಸಿ ಸಮಾಧಾನ ಹೇಳಲು ಬಂದಿದ್ದರು. ನನ್ನ ಪಾತ್ರ ಮಹತ್ವದ್ದು, ಸಾಕಷ್ಟು ಡೈಲಾಗ್ಸ್​ ಸಿಗಲಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದರು. ಚಿಂತಿಸಬೇಡಿ ಎಂದು ಸಮಾಧಾನ ಹೇಳಿದ್ದರು. 15 ವರ್ಷ ವಯಸ್ಸಿನವಳಾಗಿದ್ದಾಗ, ಅವರೊಂದಿಗೆ ಕೆಲಸ ಮಾಡಿದ್ದು ನನಗೆ ಬಹಳ ಸಂತೋಷ ಕೊಟ್ಟಿತ್ತು. ಜಾಕಿ ಚಿತ್ರದ ಚಿತ್ರೀಕರಣದ ಸಮಯ ಸ್ಮರಣೀಯ. ಅವರ ವಿನಮ್ರತೆ, ಸಮರ್ಪಣೆ, ಪ್ಯಾಶನ್​​​, ಹಾಗೆಯೇ ಅವರು ತಮ್ಮ ಜೀವನ ನಡೆಸಿದ ರೀತಿಯನ್ನು ಅನುಸರಿಸಲು ಬಯಸುತ್ತೇನೆ'' ಎಮದು ಬರೆದುಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಪೋಸ್ಟ್​​ನಲ್ಲಿ ಸಿನಿಮಾ ಸೆಟ್​ನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ತುಮಕೂರು: ಗೌರವ ಡಾಕ್ಟರೇಟ್ ಪದವಿ ತಿರಸ್ಕರಿಸಿದ ಕಿಚ್ಚ ಸುದೀಪ್ - Kiccha Sudeep Rejected Doctorate

ಈ ವರ್ಷದ ಮಾರ್ಚ್​​ ಮಧ್ಯದಲ್ಲಿ ಜಾಕಿ ಚಿತ್ರ ಮರುಬಿಡುಗಡೆಗೊಂಡಿತ್ತು. 14 ವರ್ಷಗಳ ಗ್ಯಾಪ್​ ಬಳಿಕ 175 ಥಿಯೇಟರ್​ಗಳಲ್ಲಿ ಮಾರ್ಚ್​ 15ಕ್ಕೆ ರೀರಿಲೀಸ್​ ಆದ ಈ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಸಂಪಾದಿಸಿತ್ತು.

ಇದನ್ನೂ ಓದಿ: ಬಂತು 'ಮಾರ್ಟಿನ್​​' ಟ್ರೇಲರ್! ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿದ ಧ್ರುವ ಸರ್ಜಾ​​​ - Martin Trailer

ETV Bharat Logo

Copyright © 2025 Ushodaya Enterprises Pvt. Ltd., All Rights Reserved.