ETV Bharat / entertainment

ಲಂಡನ್​​​ನಿಂದ ಅನುಷ್ಕಾ - ವಿರಾಟ್​ ಹೊಸ ಫೋಟೋ ವೈರಲ್​​: ಫ್ಯಾನ್ಸ್​​ ಮೆಚ್ಚುಗೆ - Virat Anushka - VIRAT ANUSHKA

ಲಂಡನ್​​​ನಲ್ಲಿ ಗುಣಮಟ್ಟದ ಸಮಯ ಕಳೆಯುತ್ತಿರುವ ವಿರುಷ್ಕಾ ದಂಪತಿಯ ಲೇಟೆಸ್ಟ್ ಫೋಟೋ ವೈರಲ್​ ಆಗಿದೆ.

Virat Kohli and Anushka Sharma
ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ (IANS)
author img

By ETV Bharat Karnataka Team

Published : Jul 24, 2024, 6:22 PM IST

ಬಾಲಿವುಡ್ ಅಭಿನೇತ್ರಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಸದ್ಯ ತಮ್ಮಿಬ್ಬರು ಮುದ್ದಾದ ಮಕ್ಕಳೊಂದಿಗೆ ಲಂಡನ್‌ನಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋ, ವಿಡಿಯೋಗಳು ಸಖತ್​ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗಳು ವಮಿಕಾಗೆ 3 ವರ್ಷ ಮತ್ತು ಮಗ ಅಕಾಯ್​​ ಇದೇ ಸಾಲಿನ ಫೆಬ್ರವರಿಯಲ್ಲಿ ಜನಿಸಿದ್ದಾನೆ. ಸದ್ಯ ಕೊಹ್ಲಿ ಫ್ಯಾಮಿಲಿ ಲಂಡನ್​ನಲ್ಲಿ ಗುಣಮಟ್ಟದ ಸಮಯ ಕಳೆಯುತ್ತಿದ್ದು, ಅಪರೂಪಕ್ಕೆ ಅವರ ಫೋಟೋ - ವಿಡಿಯೋಗಳು ವೈರಲ್​ ಆಗುತ್ತಿವೆ.

ಬಾಲಿವುಡ್ ಮತ್ತು ಕ್ರಿಕೆಟ್‌ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವಿರುಷ್ಕಾ ದಂಪತಿ, ನಿರಂತರ ಜನಪ್ರಿಯತೆ, ಸದ್ದುಗದ್ದಲ, ಪ್ರಜ್ವಲಿಸುವಿಕೆಯಿಂದ ಕೊಂಚ ದೂರ ಸರಿದು, ಸಾಗರೋತ್ತರ ಪ್ರದೇಶದಲ್ಲಿ ಶಾಂತ ಜೀವನ ಸಾಗಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಪ್ರೀತಿ, ಅಚಲ ಬೆಂಬಲದಿಂದ ಹೆಸರುವಾಸಿಯಾಗಿದ್ದರು. ಪ್ರಸ್ತುತ ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟಿದ್ದು, ಲಂಡನ್​ನಲ್ಲಿ ಉತ್ತಮ ಸಮಯ ಕಳೆಯುತ್ತಿದ್ದಾರೆ.

ಎಕ್ಸ್​, ಇನ್​ಸ್ಟಾಗ್ರಾಮ್​​ನಂತಹ ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​ಫಾರ್ಮ್​​​​ಗಳಲ್ಲಿ ವಿರುಷ್ಕಾ ಜೋಡಿಯ ಕ್ಯಾಂಡಿಡ್​​​​ ಫೋಟೋ-ವಿಡಿಯೋಗಳು ವೈರಲ್​​ ಆಗಿದ್ದು, ನೆಟ್ಟಿಗರ ಗಮನ ಸೆಳೆದಿವೆ. ಇದಕ್ಕೂ ಮುನ್ನ ವಿಡಿಯೋವೊಂದು ವ್ಯಾಪಕವಾಗಿ ವೈರಲ್​​ ಆಗಿತ್ತು.

ಈ ವೈರಲ್ ಫೋಟೋಗಳಲ್ಲಿ, ಜನಪ್ರಿಯ ದಂಪತಿ ಕ್ಯಾಶುವಲ್​​ ವೇರ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಮರಾಗಳಿಗೆ ಪೋಸ್ ಕೊಡುವಾಗ, ಇಬ್ಬರೂ ಮನದುಂಬಿ ನಗು ಬೀರಿದ್ದಾರೆ. ಆರೆಂಜ್​​​, ಯೆಲ್ಲೋ ಫ್ಲೋರಲ್ ಮ್ಯಾಕ್ಸಿ ಡ್ರೆಸ್‌ನಲ್ಲಿ ಅನುಷ್ಕಾ ಬೆರಗುಗೊಳಿಸುವ ನೋಟ ಬೀರಿದ್ದಾರೆ. ವಿರಾಟ್ ಕ್ಯಾಶುವಲ್​​ ವೇರ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಗಡ್ಡ ಬಿಟ್ಟಿರುವ ಕ್ರಿಕೆಟಿಗ ಕ್ಯಾಪ್ ಮತ್ತು ಗ್ಲಾಸ್‌ ಧರಿಸಿದ್ದರು. ಈ ಇಬ್ಬರ ಸುಂದರ ಎರಡು ಫೋಟೋಗಳು ವ್ಯಾಪಕವಾಗಿ ವೈರಲ್​ ಆಗಿದೆ. ಇಂಟರ್ನೆಟ್ ಬಳಕೆದಾರರು ದಂಪತಿಯನ್ನು 'ರಾಜ ರಾಣಿ' ಎಂದು ಉಲ್ಲೇಖಿಸಿದ್ದಾರೆ. ಅಭಿಮಾನಿಗಳು ಅವರ ಸರಳತೆ ಮತ್ತು ಅನುಷ್ಕಾರ ಸೌಂದರ್ಯವನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: ರೂಮರ್​ ಲವ್​ ಬರ್ಡ್ಸ್​​​ ಅಗಸ್ತ್ಯ ನಂದಾ - ಸುಹಾನಾ ಖಾನ್ ಜೊತೆ ಜೂ.ಬಚ್ಚನ್​​​: ವಿಡಿಯೋ - Abhishek Suhana Agastya

ಇತ್ತೀಚಿನ ದಿನಗಳಲ್ಲಿ ಅನುಷ್ಕಾ ಮತ್ತು ವಿರಾಟ್ ತಮ್ಮ ಮಕ್ಕಳಾದ ವಮಿಕಾ ಮತ್ತು ಅಕಾಯ್ ಜೊತೆ ಪ್ರವಾಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಿಡಿಯೋವೊಂದು ವೈರಲ್​​ ಆಗಿತ್ತು. ಅವರ ಅನುಮತಿಯಿಲ್ಲದೇ ಕೊಂಚ ದೂರದಿಂದ ಸೆರೆಹಿಡಿದಿದ್ದ ವಿಡಿಯೋದಲ್ಲಿ, ಫ್ಲವರ್​ ಶಾಪ್​​ ಬಳಿ ಈ ಜೋಡಿ ಕಾಣಿಸಿಕೊಂಡಿತ್ತು. ಮಗ ಅಕಾಯ್​ನನ್ನು ಕೊಹ್ಲಿ ಹಿಡಿದಿದ್ದರು.

ಇದನ್ನೂ ಓದಿ: ಅಜಿತ್ ನಟನೆಯ 2 ಸಿನಿಮಾ ನಿರ್ದೇಶಿಸಲಿದ್ದಾರೆ ಪ್ರಶಾಂತ್​ ನೀಲ್​: ಹೊಂಬಾಳೆ ಫಿಲ್ಮ್ಸ್​​​ನಿಂದ ನಿರ್ಮಾಣ - Prashanth Neel Ajith movie

ಈ ಪಾಪ್ಯುಲರ್​​ ಕಪಲ್​​ ಇನ್ಮುಂದೆ ಲಂಡನ್‌ನಲ್ಲಿ ನೆಲೆಸುತ್ತಾರೆಂಬ ಊಹಾಪೋಹಗಳು ಹಬ್ಬಿವೆ. ಅನುಷ್ಕಾ ಅಥವಾ ವಿರಾಟ್ ಈ ಊಹಾಪೋಹಗಳನ್ನು ದೃಢಪಡಿಸದಿದ್ದರೂ, ಅವರು ಈ ಫೇಮಸ್​ ಸಿಟಿಯಲ್ಲಿ ದೀರ್ಘಕಾಲ ಉಳಿಯಲಿದ್ದಾರೆ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.