ಹೈದರಾಬಾದ್: ನಟಿ ಪರಿಣಿತಿ ಚೋಪ್ರಾ ಮತ್ತು ದಿಲ್ಜೀತ್ ದೊಸಾಂಜೆ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಅಮರ್ ಸಿಂಗ್ ಚಮ್ಕಿಲಾ' ಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆಯ ಕಾತರತೆಯನ್ನು ಅಭಿಮಾನಿಗಳಲ್ಲಿ ಹೆಚ್ಚಿಸುವ ಸಲುವಾಗಿ ಚಿತ್ರತಂಡ ಇದೀಗ ಸಿನಿಮಾದ ಹೊಚ್ಚ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದೆ. ನರಮ್ ಕಾಲ್ಜಿ ಎಂಬ ಹಾಡು ಇದೀಗ ಬಿಡುಗಡೆಯಾಗಿದ್ದು, ಈ ಹಾಡಿಗೆ ಅಲ್ಕಾ ಯಾಗ್ನಿಕ್, ರಿಚಾ ಶರ್ಮಾ, ಪೂಜಾ ತಿವಾರಿ ಮತ್ತು ಯಶಿಕಾ ಸಿಕ್ಕಾ ಧ್ವನಿಯಾಗಿದ್ದಾರೆ.
- " class="align-text-top noRightClick twitterSection" data="">
ಎರಡು ನಿಮಿಷ 52 ಸೆಕೆಂಡ್ನ ಹಾಡು ಇದಾಗಿದೆ. ಮಹಿಳೆಯರ ಸ್ವಾತಂತ್ರ್ಯ ಮತ್ತು ಸ್ಥಿತಿಗಳ ಕುರಿತು ತಿಳಿಸುವ ಕುರಿತ ಹಾಡು ಇದಾಗಿದೆ. ಸಮಾಜದ ಕಟ್ಟುಪಾಡು ಮತ್ತು ಸಂಪ್ರದಾಯಗಳ ಕುರಿತು ಹಾಡಿನಲ್ಲಿ ತಿಳಿಸಲಾಗಿದೆ. ಈ ಹಾಡನ್ನು ಇರ್ಷಾದ್ ಕಮಿಲ್ ಬರೆದಿದ್ದು, ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡಿನಲ್ಲಿ ಕೇಳಿ ಬರುವ ಕೊಳಲಿನ ನಾದ ಪರಸ್ ನಾಥ್ ಅವರದ್ದಾಗಿದೆ.
ಈ ಹಾಡಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಚಿತ್ರತಂಡ, ಸಿನಿಮಾದ 'ನರಮ್ ಕಾಲ್ಜಿ' ಹಾಡು ಬಿಡುಗಡೆಯಾಗಿದೆ ಎಂದಿದೆ. ಅಮರ್ ಸಿಂಗ್ ಚಾಮ್ಕಿಲ್ ಚಿತ್ರವನ್ನು ಇಮ್ತಿಯಾಜ್ ಆಲಿ ನಿರ್ದೇಶಿಸಿದ್ದಾರೆ. ಪಂಜಾಬಿನ ಹಾಡುಗಾರ 'ಅಮರ್ ಸಿಂಗ್ ಚಮ್ಕಿಲಾ' ಅವರ ಕಥೆಯನ್ನು ಈ ಚಿತ್ರಕಥೆ ಹಿಂದಿದೆ. 1989ರಲ್ಲಿ ಭಾರತೀಯ ಸಂಗೀತದಲ್ಲಿ ಅತ್ಯಂತ ಗಮನ ಸೆಳೆದ ಹಾಡುಗಾರ ಇವರಾಗಿದ್ದಾರೆ. ಅತ್ಯಂತ ನಿರ್ಭಿತಿಯ ಸಾಹಿತ್ಯಗಳು ಹಲವರ ಕಣ್ಣನ್ನು ಕೆಂಪಾಗಿಸಿದ್ದವು ಕೂಡ. ಅಷ್ಟೇ ಅಲ್ಲದೇ ಇವರ ಹಾಡುಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತಿತ್ತು. 27 ವರ್ಷಕ್ಕೆ ಚಾಮ್ಕಿಲ್ ತಮ್ಮ ಹೆಂಡತಿ ಮತ್ತು ಇಬ್ಬರು ಬ್ಯಾಂಡ್ ಸದಸ್ಯರ ಜೊತೆ ದುರಂತ ಅಂತ್ಯ ಕಂಡರು. ಚಿತ್ರಕ್ಕೆ ಮೋಹಿತ್ ಚೌಧರಿ, ಸೆಲೆಕ್ಟ್ ಮೀಡಿಯಾ ಹೋಲ್ಡಿಂಗ್ ಎಲ್ಎಲ್ಪಿ, ಸರೆಗಮ ಮತ್ತು ವಿಂಡೋ ಸೀಟ್ ಫಿಲ್ಮ್ ಬಂಡಾವಳ ಹೂಡಿದೆ. ಈ ಚಿತ್ರ ಏಪ್ರಿಲ್ 12ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಕಾಣಲಿದೆ.
ಪಂಜಾಬಿ ಗಾಯಕರಾಗಿದ್ದ ಅಮರ್ ಸಿಂಗ್ ಚಮ್ಕಿಲಾ ಮತ್ತು ಅಮರ್ಜೋತ್ ಜಲಂಧರ್ನ ಮೆಹಸಂಪುರ ಗ್ರಾಮಕ್ಕೆ 1999 ಮಾರ್ಚ್ 8ರಂದು ತಮ್ಮ ಗಾಯನ ಬ್ಯಾಂಡ್ನೊಂದಿಗೆ ಪ್ರದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ, ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಹತ್ಯೆಯ ರಹಸ್ಯ ಇಂದಿಗೂ ಬಗೆಹರಿದಿಲ್ಲ.
ಇದನ್ನೂ ಓದಿ: 2023ರಲ್ಲಿ ಸಖತ್ ಸದ್ದು ಮಾಡಿದ ಸಿನಿಮಾ ಯಾವುದು ಗೊತ್ತಾ?