ETV Bharat / entertainment

ಅಲ್ಲು ಅರ್ಜುನ್ ವ್ಯಾಲೆಂಟೈನ್ ಡೇ ಸೆಲೆಬ್ರೇಶನ್​ ಫೋಟೋಗಳು - ಪುಷ್ಪ 2

ಪ್ರೇಮಿಗಳ ದಿನಾಚರಣೆಯ ಫೋಟೋಗಳನ್ನು ನಟ ಅಲ್ಲು ಅರ್ಜುನ್​​ ಶೇರ್ ಮಾಡಿದ್ದಾರೆ.

Allu Arjun Valentine's Day
ಅಲ್ಲು ಅರ್ಜುನ್ ವ್ಯಾಲೆಂಟೈನ್ ಡೇ
author img

By ETV Bharat Karnataka Team

Published : Feb 14, 2024, 8:05 PM IST

ಹೆಚ್ಚಿನ ಸಂಖ್ಯೆಯ ಜನರು ಪ್ರೇಮಿಗಳ ದಿನವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಸಹ ಇದರಿಂದ ಹೊರತಲ್ಲ.ತಮ್ಮ ಪ್ರೀತಿಪಾತ್ರರೊಂದಿಗಿನ ಪ್ರೀತಿಯ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪುಷ್ಪ ಸಿನಿಮಾ ಸ್ಟಾರ್ ಅಲ್ಲು ಅರ್ಜುನ್ ಸಹ ಪ್ರೇಮಿಗಳ ದಿನಾಚರಣೆಯ ಒಂದು ನೋಟವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೊಂದು ಸ್ವೀಟ್ ಆ್ಯಂಡ್​ ಸಿಂಪಲ್​​ ಸೆಲೆಬ್ರೇಶನ್​. ಕಂಪ್ಲೀಟ್​ ಫ್ಯಾಮಿಲಿ ಸೆಲೆಬ್ರೇಶನ್​ ಎಂದೇ ಹೇಳಬಹುದು.

Allu Arjun Valentine's Day
ಅಲ್ಲು ಅರ್ಜುನ್ ವ್ಯಾಲೆಂಟೈನ್ ಡೇ

ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ನಲ್ಲಿ ಫ್ಯಾಮಿಲಿ ಜೊತೆ ಕೇಕ್​ ಕತ್ತರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ, ವೈಟ್​ ಕೇಕ್​​. ರೆಡ್​ ಹಾರ್ಟ್ ಸಿಂಬಲ್​ಗಳಿವೆ. ಹ್ಯಾಪಿ ವ್ಯಾಲೆಂಟೈನ್ ಡೇ, ಐ ಲವ್ ಯೂ ಎಂದು ಬರೆಯಲಾಗಿದೆ. ಮತ್ತೊಂದು ಫೋಟೋದದಲ್ಲಿ, ಕೇಕ್​ ಮೇಲೆ ಫೆಬ್ರವರಿ ತಿಂಗಳ ಕ್ಯಾಲೆಂಡರ್ ಇದ್ದು, '14' ಮೇಲೆ ಹಾರ್ಟ್ ಸಿಂಬಲ್​​ನಿಂದ ಮಾರ್ಕ್ ಮಾಡಲಾಗಿದೆ. ಅಲ್ಲು ಅರ್ಜುನ್​​ ಪತ್ನಿ ಸ್ನೇಹಾ ರೆಡ್ಡಿ ಕೂಡ ತಮ್ಮ ಮಕ್ಕಳನ್ನು ಒಳಗೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲು ಅರ್ಜುನ್​ ಮತ್ತು ಸ್ನೇಹಾ ರೆಡ್ಡಿ ಲವ್​ ಸ್ಟೋರಿ 13 ವರ್ಷಗಳ ಹಿಂದೆ ಪ್ರಾರಂಭವಾಯಿತು. ಅಲ್ಲು ಅರ್ಜುನ್‌ ವಿಷಯದಲ್ಲಿ ಇದು ಲವ್​ ಅಟ್ ಫಸ್ಟ್ ಸೈಟ್. ದಶಕದ ಹಿಂದೆ ಅಮೆರಿಕದಲ್ಲಿ ಗೆಳೆಯರೊಬ್ಬರ ಮದುವೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭ ಸ್ನೇಹಾ ರೆಡ್ಡಿ ಅವರನ್ನು ಭೇಟಿಯಾದರು. ಸ್ನೇಹ ಪ್ರೀತಿಗೆ ತಿರುಗಿ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದರು. ಸದ್ಯ ಇಬ್ಬರು ಮುದ್ದಾದ ಮಕ್ಕಳ ಪೋಷಕರಿವರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 'ಲಾಪತಾ ಲೇಡೀಸ್' ಸ್ಕ್ರೀನಿಂಗ್​​: ಮುಂದಿನ ಸಿನಿಮಾಗಳ ಬಗ್ಗೆ ಅಮೀರ್​ ಖಾನ್​​ ಹೇಳಿದ್ದಿಷ್ಟು

ಸಿನಿಮಾ ವಿಚಾರ ಗಮನಿಸಿದ್ರೆ, ಅಲ್ಲು ಅರ್ಜುನ್ ಅವರು ಪ್ರಸ್ತುತ 'ಪುಷ್ಪ: ದಿ ರೂಲ್'ನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 2021ರ ಬ್ಲಾಕ್​ಬಸ್ಟರ್ ಹಿಟ್ ಸಿನಿಮಾ 'ಪುಷ್ಪ: ದಿ ರೈಸ್‌'ನ ಸೀಕ್ವೆಲ್​​ ಇದು. 2024ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಸುಕುಮಾರ್ ನಿರ್ದೇಶನದ ಈ ಚಿತ್ರ ಆಗಸ್ಟ್ 15 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಅಲ್ಲು ಅರ್ಜುನ್ ಜೊತೆ, ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರವನ್ನು ಮತ್ತು ಫಹಾದ್ ಫಾಸಿಲ್ ಭನ್ವರ್ ಸಿಂಗ್ ಶೇಖಾವತ್, ಐಪಿಎಸ್ ಪಾತ್ರವನ್ನು ಮುಂದುವರಿಸಲಿದ್ದಾರೆ. ಪುಷ್ಪ 2 ಬಾಕ್ಸ್ ಆಫೀಸ್‌ನಲ್ಲಿ ಅಜಯ್ ದೇವಗನ್ ಅವರ ಸಿಂಗಮ್ ಎಗೈನ್​ ಚಿತ್ರದೊಂದಿಗೆ ಪೈಪೋಟಿ ನಡೆಸಲಿದೆ.

ಇದನ್ನೂ ಓದಿ: ಪ್ರೇಮಿಗಳ ದಿನದಂದು ಪ್ರೀತಿಪಾತ್ರರಿಗೆ ರಶ್ಮಿಕಾ ಮಂದಣ್ಣ​ ಸ್ಪೆಷಲ್​ ವಿಶ್​

'ಪುಷ್ಪಾ: ದಿ ರೂಲ್' ಹೊರತುಪಡಿಸಿ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರದಲ್ಲೂ ನಟಿಸಲು ಸಜ್ಜಾಗಿದ್ದಾರೆ. ಟೀ-ಸೀರೀಸ್ ಫಿಲ್ಮ್ಸ್ ಅಡಿಯಲ್ಲಿ ಭೂಷಣ್ ಕುಮಾರ್ ನಿರ್ಮಿಸಲಿದ್ದಾರೆ. ಅಲ್ಲದೇ, ಕೊರಟಾಲ ಶಿವ ಅವರೊಂದಿಗಿನ ಪ್ರಾಜೆಕ್ಟ್ ಅನ್ನೂ ಹೊಂದಿದ್ದಾರೆ. ವಿಕ್ಕಿ ಕೌಶಲ್ ಮುಖ್ಯಭೂಮಿಕೆಯ 'ಇಮ್ಮಾರ್ಟಲ್ ಅಶ್ವತ್ಥಾಮ' ಈ ಹಿಂದೆ ಘೋಷಣೆಯಾಗಿತ್ತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಪಾಲ್ಗೊಳ್ಳುವಿಕೆಯ ಬಗ್ಗೆಯೂ ಮಾತುಕತೆಗಳು ನಡೆಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.