ETV Bharat / entertainment

ಪುಷ್ಪ ಸೀಕ್ವೆಲ್​​: ವಿಶ್ವದಾದ್ಯಂತ 270 ಕೋಟಿ ಗಳಿಸುವ ಮೊದಲ ನಟರಾಗಲಿದ್ದಾರೆ ಅಲ್ಲು ಅರ್ಜುನ್ - PUSHPA 2 COLLECTION

ಅಲ್ಲು ಅರ್ಜುನ್‌ ನಟನೆಯ ಬಹುನಿರೀಕ್ಷಿತ ಚಿತ್ರವು 270 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ​ ಮೂಲಕ ಬ್ಲಾಕ್​​​ಬಸ್ಟರ್ ಹಿಟ್ ಆಗೋದು ಬಹುತೇಕ ಸ್ಪಷ್ಟವಾಗಿದೆ. ಕನ್ನಡತಿ ರಶ್ಮಿಕಾ ಮಂದಣ್ಣ ವೃತ್ತಿಜೀವನದಲ್ಲೂ ಇದು ಮೊದಲ ದಾಖಲೆ.

Pushpa 2 poster
ಅಲ್ಲು ಅರ್ಜುನ್‌ ಪುಷ್ಪ ಸೀಕ್ವೆಲ್ ಪೋಸ್ಟರ್ (Photo: Film Poster)
author img

By ETV Bharat Entertainment Team

Published : Dec 5, 2024, 11:44 AM IST

ಅಪಾರ ಸಂಖ್ಯೆಯ ಅಭಿಮಾನಿಗಳು, ಪ್ರೇಕ್ಷಕರ ಹೃದಯದಲ್ಲಿ ಭದ್ರ ಸ್ಥಾನ ಹೊಂದಿರುವ ಸೌತ್​ ಸೂಪರ್​​ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಮೂಲಕ ಮತ್ತೊಮ್ಮೆ ಜಾಗತಿಕ ಬಾಕ್ಸ್ ಆಫೀಸ್​​​ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸಿನಿಮಾ ಸುತ್ತಲಿನ ಸದ್ದು ಸಾಮಾನ್ಯ ಮಟ್ಟದಲ್ಲಂತೂ ಇಲ್ಲ. ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗಪ್ಪಳಿಸಿರುವ ಪುಷ್ಪರಾಜನ ಕಥೆ ಭಾರತೀಯ ಚಿತ್ರರಂಗದ ದಾಖಲೆಗಳನ್ನು ಪುಡಿಗಟ್ಟಿ, ಹೊಸ ಅಲೆ ಸೃಷ್ಟಿಸುವ ಭರವಸೆ ನೀಡಿದೆ. ಜಾಗತಿಕವಾಗಿ 12,500 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಿರುವ ಪುಷ್ಪ 2 ಬಾಕ್ಸ್ ಆಫೀಸ್ ರೇಸ್‌ನಲ್ಲಿ ಗೇಮ್ ಚೇಂಜರ್ ಆಗೋದು ಸ್ಪಷ್ಟವಾಗಿದೆ. ಮೊದಲ ದಿನದ ಕಲೆಕ್ಷನ್​ ಅಂಕಿ-ಅಂಶ ನಾಳೆ ಮುಂಜಾನೆ ಹೊರಬೀಳಲಿದೆ.

ವಿಶ್ವದಾದ್ಯಂತ 250 ಕೋಟಿ ರೂ. ದಾಟಿದ ಮೊದಲ ಚಿತ್ರ: ಬಹುನಿರೀಕ್ಷಿತ ಚಿತ್ರ ಪುಷ್ಪ ಸೀಕ್ವೆಲ್​​ ತನ್ನ ಮೊದಲ ದಿನ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುವ ನಿರೀಕ್ಷೆಯಿದೆ. ಸುಕುಮಾರ್​ ನಿರ್ದೇಶನದ ಈ ಸಿನಿಮಾ ವಿಶ್ವದಾದ್ಯಂತ ಬರೋಬ್ಬರಿ 270 ಕೋಟಿ ರೂಪಾಯಿ ಗಳಿಸಲಿದೆ ಎಂದು ಇಂಡಸ್ಟ್ರಿ ಮೂಲಗಳು ಭವಿಷ್ಯ ನುಡಿದಿವೆ. ಇತಿಹಾಸದಲ್ಲೇ ಇದೇ ಮೊದಲೆನ್ನಬಹುದು. ಭವಿಷ್ಯ ಸಾಬೀತಾದರೆ, ಅಲ್ಲು ಅರ್ಜುನ್ ಈ ಸಾಧನೆಗೈದ ಮೊದಲ ನಟರಾಗಿ ಹೊರಹೊಮ್ಮಲಿದ್ದಾರೆ. ಮೊದಲ ಭಾಗದ ಯಶಸ್ಸಿನಿಂದ ನಿರ್ಮಿಸಲಾದ ಸೀಕ್ವೆಲ್​​ ಈಗಾಗಲೇ ಭಾರತದಾದ್ಯಂತದ ಬಹು ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸಿದೆ.

ಆರ್​ಆರ್​ಆರ್​ ದಾಖಲೆ ಬ್ರೇಕ್: 270 ಕೋಟಿ ರೂಪಾಯಿ ಸಂಪಾದಿಸಲಿದೆ ಎಂಬ ಭವಿಷ್ಯ ಸಾಬೀತಾದರೆ, ಭಾರತೀಯ ಚಿತ್ರರಂಗದ ಬ್ಲಾಕ್​ಬಸ್ಟರ್ 'ಆರ್​ಆರ್​ಆರ್​​' ಚಿತ್ರದ ಮೊದಲ ದಿನದ ಕಲೆಕ್ಷನ್​ ದಾಖಲೆಯನ್ನು ಸಹ ಪುಷ್ಪರಾಜ್​​ ಬ್ರೇಕ್​ ಮಾಡಲಿದ್ದಾನೆ. ವಿಶ್ವದಾದ್ಯಂತ ಮೊದಲ ದಿನ 257 ಕೋಟಿ ರೂ.ನ ವ್ಯವಹಾರ ನಡೆಸಿದ್ದ ಆರ್​ಆರ್​ಆರ್​​ ಭಾರತೀಯ ಚಿತ್ರರಂಗದಲ್ಲೇ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​​ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಪುಷ್ಪ 2 - ಮೊದಲ ದಿನದ ಕಲೆಕ್ಷನ್‌ (ಅಂದಾಜು/ಸಾಧ್ಯತೆ) ವಿವರ ಇಲ್ಲಿದೆ:

  • ಆಂಧ್ರ ಪ್ರದೇಶ/ತೆಲಂಗಾಣ: 90 ಕೋಟಿ ರೂಪಾಯಿ.
  • ಕರ್ನಾಟಕ: 15 ಕೋಟಿ ಕೋಟಿ ರೂಪಾಯಿ.
  • ತಮಿಳುನಾಡು: 8 ಕೋಟಿ ರೂಪಾಯಿ.
  • ಕೇರಳ: 7 ಕೋಟಿ ರೂಪಾಯಿ.
  • ಭಾರತದ ಉಳಿದ ಭಾಗ: 80 ಕೋಟಿ ರೂಪಾಯಿ.
  • ಭಾರತದ ಒಟ್ಟು ಕಲೆಕ್ಷನ್​​: 200 ಕೋಟಿ ರೂಪಾಯಿ.
  • ವಿದೇಶದಲ್ಲಿನ ವ್ಯವಹಾರ: 70 ಕೋಟಿ ರೂಪಾಯಿ.
  • ವಿಶ್ವದಾದ್ಯಂತದ ಒಟ್ಟು ಕಲೆಕ್ಷನ್​ ಸಾಧ್ಯತೆ: 270 ಕೋಟಿ ರೂಪಾಯಿ.

ಇದನ್ನೂ ಓದಿ: ಪುಷ್ಪ-2 ಚಿತ್ರದ ಬೆನಿಫಿಟ್ ಶೋದಲ್ಲಿ ಅಲ್ಲು ಅರ್ಜುನ್​: ಕಾಲ್ತುಳಿತದಲ್ಲಿ ಮಹಿಳೆ ಸಾವು

ಈ ಅಂದಾಜು ಅಂಕಿ ಅಂಶಗಳು ಈವರೆಗಿನ ದಾಖಲೆಗಳನ್ನು ಬ್ರೇಕ್​ ಮಾಡಿ ಹೊಸ ದಾಖಲೆ ಸೃಷ್ಟಿಸಲು ಸಜ್ಜಾಗಿದೆ ಎಂಬುದನ್ನು ಸೂಚಿಸುತ್ತದೆ. ಅಂತಾರಾಷ್ಟ್ರೀಯ ಗಲ್ಲಾಪೆಟ್ಟಿಗೆ ಸೇರಿ ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡ ನೀಡುವ ವಿಶ್ವಾಸವಿದೆ.

ಶುಕ್ರವಾರದ ಬದಲಿಗೆ ಗುರುವಾರ ತೆರೆಕಂಡಿದ್ದೇಕೆ? ಸಿನಿಮಾಗಳು ಶುಕ್ರವಾರ ತೆರೆಕಾಣೋದು ಈ ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ. ಆದ್ರೆ ಪುಷ್ಪ 2 ಸಿನಿಮಾ ಸಾರ್ವಜನಿಕ ರಜೆಯಿಲ್ಲದಿದ್ದರೂ ಕೂಡಾ ಒಂದು ದಿನ ಮುಂಚಿತವಾಗಿ ತೆರೆಕಂಡಿದೆ. ಇದು ಚಿತ್ರತಂಡದ ಸ್ಟ್ರಾಟಜಿಕ್​ ರಿಲೀಸ್​ ಆಗಿದೆ. ಸಾಂಪ್ರದಾಯಿಕ ಶುಕ್ರವಾರದ ಬಿಡುಗಡೆಗಿಂತ ಭಿನ್ನವಾಗಿ, ಗುರುವಾರದಂದು ಚಿತ್ರಮಂದಿರ ಪ್ರವೇಶಿಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸಲು ಮುಂದಾಗಿದೆ. ಈ ದಿನವನ್ನು ಆಯ್ಕೆ ಮಾಡುವ ಮೂಲಕ, ಇತರೆ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗಳನ್ನು ವಿರೋಧಿಸದೇ, ಚಿತ್ರವು ಸೋಲೋ ಓಪನಿಂಗ್ ಅನ್ನು ಆನಂದಿಸುತ್ತದೆ ಎಂದು ಚಿತ್ರ ತಯಾರಕರು ಖಚಿತಪಡಿಸಿದ್ದಾರೆ. ಈ ಕ್ರಮ, ಎಲ್ಲಾ ಪ್ರೇಕ್ಷಕರು ಒಂದೇ ಚಿತ್ರದ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡಲಿದ್ದು, ಮೊದಲ ದಿನದ ಕಲೆಕ್ಷನ್​ ಕೂಡಾ ಉತ್ತಮವಾಗಿರಲಿದೆ.

ಇಂದು ಮುಂಜಾನೆ (ಡಿಸೆಂಬರ್ 5) ಚಿತ್ರದ ಅಧಿಕೃತ ಬಿಡುಗಡೆ ಆಗಿದ್ದು, ಅದಕ್ಕೂ ಮುನ್ನ ಅಂದರೆ ಬುಧವಾರ ತಡರಾತ್ರಿ ಪ್ರೀಮಿಯರ್ ಶೋಗಳು ನಡೆದವು. ಇದು ಅದ್ಧೂರಿ ಓಪನಿಂಗ್​ಗೆ ದಾರಿಯಾಯಿತು. ಬಿಡುಗಡೆಯಾದ ಮೊದಲ ಕೆಲ ಗಂಟೆಗಳಲ್ಲಿ 'ಪುಷ್ಪ 2' ಎಲ್ಲಾ ಭಾಷೆ ಸೇರಿ 28.94 ಕೋಟಿ ರೂ. ಗಳಿಸಿದೆ. ಈ ಅಂಕಿಅಂಶ ಕ್ಷಣಕ್ಷಣಕ್ಕೂ ಏರುತ್ತಿದೆ.

ಇದನ್ನೂ ಓದಿ: ಹಸೆಮಣೆ ಏರಿದ ನಾಗ ಚೈತನ್ಯ ಶೋಭಿತಾ ಧೂಳಿಪಾಲ: ಸುಂದರ ಫೋಟೋಗಳನ್ನೊಮ್ಮೆ ನೋಡಿ ಬಿಡಿ!

ಸುಕುಮಾರ್ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮೀಡಿಯಾ ನಿರ್ಮಿಸಿದೆ. ಮೊದಲ ಭಾಗದಲ್ಲಿ ಅಲ್ಲು ಅರ್ಜುನ್ ನಿರ್ವಹಿಸಿದ ಪುಷ್ಪ ರಾಜ್ ಕಥೆಯನ್ನು ಮುಂದುವರಿಸಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಮತ್ತು ಫಹಾದ್ ಫಾಸಿಲ್ ಭನ್ವರ್ ಸಿಂಗ್ ಶೇಖಾವತ್ ಆಗಿ ಮುಂದುವರಿದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.