ಬಾಲಿವುಡ್ನ ಬಹುಬೇಡಿಕೆ ತಾರೆಯರಾದ ಆಲಿಯಾ ಭಟ್ ಹಾಗೂ ಶಾರ್ವರಿ ವಾಘ್ ಅವರಿಂದು ಮುಂಬೈನ ಕಲೀನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಯಶ್ ರಾಜ್ ಫಿಲ್ಮ್ಸ್‌ನ ಬಹುನಿರೀಕ್ಷಿತ ಸ್ಪೈ ಯೂನಿವರ್ಸ್ ಸಿನಿಮಾದ ಶೂಟಿಂಗ್ ಸಲುವಾಗಿ ಕಾಶ್ಮೀರಕ್ಕೆ ತೆರಳಿದರು. ಕಾಶ್ಮೀರದಲ್ಲಿ 'ಆಲ್ಫಾ' ಶೂಟಿಂಗ್ ನಡೆಲಿದೆ. ತಾರೆಯರು ತಮ್ಮ ಪ್ರಯಾಣಕ್ಕಾಗಿ ಸೊಗಸಾದ ಮತ್ತು ಆರಾಮದಾಯಕವಾದ ಉಡುಪನ್ನು ಆಯ್ಕೆ ಮಾಡಿಕೊಂಡಿದ್ದರು.
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಬ್ಲ್ಯಾಕ್ ಬ್ಯಾಗಿ ಪ್ಯಾಂಟ್‌ಸೂಟ್ ಧರಿಸಿದ್ದರು. ಸಿಂಪಲ್ ಫ್ಯಾಶನ್ ಲುಕ್‌ನಲ್ಲಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ಬಗೆಯ ಉಡುಗೆಗಳು ವಿಮಾನ ಪ್ರಯಾಣಕ್ಕೆ ಸೂಕ್ತ ಆಯ್ಕೆಯಾಗಿದೆ. ಸ್ಟಾರ್ ಹೀರೋಯಿನ್ ಜೊತೆ ಮಗಳು ರಾಹಾ ಕೂಡಾ ಇದ್ದಳು. ರಾಹಾ ಎಂದಿನಂತೆ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ತಾಯಿಗೆ ಮ್ಯಾಚ್ ಆಗುವಂತೆ ಬನ್ ಹೇರ್ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದಾಳೆ.
ಆಲ್ಫಾ ಚಿತ್ರದಲ್ಲಿ ಆಲಿಯಾ ಭಟ್ ಜೊತೆ ನಟಿ ಶಾರ್ವರಿ ವಾಘ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಶಾರ್ವರಿ ಕೂಡಾ ಶೂಟಿಂಗ್ ಸಲುವಾಗಿ ಕಾಶ್ಮೀರಕ್ಕೆ ತೆರಳಿದ್ದು, ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡರು. ತಮ್ಮ ಪ್ರಯಾಣಕ್ಕಾಗಿ ಬ್ರೌನ್ ಟ್ಯಾಂಕ್ ಟಾಪ್, ಟ್ಯಾನ್ ಪ್ಯಾಂಟ್ ಧರಿಸಿದ್ದು, ಕೂಲ್ ಆಗಿ ಕಾಣಿಸಿಕೊಂಡರು. ನಟಿಯರು ಇಂದು ಶ್ರೀನಗರಕ್ಕೆ ತಲುಪುವ ನಿರೀಕ್ಷೆಯಿದೆ. ಆಗಸ್ಟ್ 27 ರಂದು ಅಂದರೆ ನಾಳೆ ಪಹಲ್ಗಾಮ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಶ್ರೀನಗರ ಮೂಲದ ಲೈನ್ ಪ್ರೊಡ್ಯೂಸರ್ ಖಾವರ್ ಜಮ್ಶೀದ್ ಪ್ರಕಾರ, ಶೂಟಿಂಗ್ ಪ್ಲ್ಯಾನ್ ಫೈನಲ್ ಮಾಡಲು ಚಿತ್ರದ ಸಿಬ್ಬಂದಿ ಇಂದು ಪಹಲ್ಗಾಮ್‌ನಲ್ಲಿ ಲೊಕೇಶನ್ಗಳನ್ನು ಪರಿಶೀಲಿಸಿದೆ.
"ತಂಡ ಶೂಟಿಂಗ್ ಸ್ಥಳಗಳನ್ನು ಅಂತಿಮಗೊಳಿಸುತ್ತಿದೆ. ಯಾವುದೇ ಅಡೆತಡೆ ಇಲ್ಲದೇ ಶೂಟಿಂಗ್ ನಡೆಸಲು ವ್ಯವಸ್ಥೆ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದೆ. ಪಹಲ್ಗಾಮ್ನ ಸುಂದರ ಶೂಟಿಂಗ್ ಸೆಟ್ ಜೊತೆಗೆ ಸಿನಿಮಾದ ಡೈನಾಮಿಕ್ ಆ್ಯಕ್ಷನ್ ಸೀಕ್ವೆನ್ಸ್ ಅನ್ನು ಹೇಗೆ ಚಿತ್ರೀಕರಿಸಲಿದ್ದಾರೆ ಎಂಬುದರ ಬಗ್ಗೆ ನಾವು ಸಖತ್ ಥ್ರಿಲ್ ಆಗಿದ್ದೇವೆ'' ಎಂದು ತಿಳಿಸಿದರು.
ಆಗಸ್ಟ್ 27 ರಿಂದ ಪ್ರಾರಂಭವಾಗುವ ಶೂಟಿಂಗ್ ಸರಿಸುಮಾರು 10 ದಿನಗಳ ಕಾಲ ನಡೆಯಲಿದೆ. ಕಾಶ್ಮೀರದ ಅತ್ಯಂತ ಎತ್ತರದ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸೆಪ್ಟೆಂಬರ್ ಮೊದಲ ವಾರ ಚಿತ್ರೀಕರಣ ಮುಗಿಯುವ ನಿರೀಕ್ಷೆಯಿದೆ. ಯಶಸ್ವಿ ಚಿತ್ರೀಕರಣಕ್ಕಾಗಿ ಸೂಕ್ತ ಸಿದ್ಧತೆಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದ ಖಾವರ್ ಜಮ್ಶೀದ್, ಪಾತ್ರವರ್ಗ ಮತ್ತು ಸಿಬ್ಬಂದಿಗೆ ಅನುಮತಿ, ವಸತಿ ವ್ಯವಸ್ಥೆಗಳನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದರು.
ಇದನ್ನೂ ಓದಿ: 'ಭೀಮ' ಸಕ್ಸಸ್ ಬೆನ್ನಲ್ಲೇ ದುನಿಯಾ ವಿಜಯ್ ಹೊಸ ಸಿನಿಮಾ ಘೋಷಣೆ - Duniya Vijay VK30
ಯಶ್ ರಾಜ್ ಫಿಲ್ಸ್ನ ಸ್ಪೈ ಯೂನಿವರ್ಸ್‌ನಲ್ಲಿ ಇದು ಮೊದಲ ಮಹಿಳಾ ಮುಕ್ಯಭೂಮಿಕೆಯ ಸಿನಿಮಾ. ಸೂಪರ್ ಏಜೆಂಟ್‌ಗಳಾಗಿ ಇಬ್ಬರೂ ರೋಮಾಂಚಕ ಸಿನಿ ಅನುಭವ ನೀಡಲಿದ್ದಾರೆ ಎಂಬ ಭರವಸೆ ಇದೆ. ಶಿವ್ ರವೈಲ್ ನಿರ್ದೇಶನದ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ. ಅಬ್ಬಾಸ್ ಹೈರಪುರ್ವಾಲಾ ಬರೆದಿರುವ ಈ ಚಿತ್ರ ಬರುವ ವರ್ಷ ಬಿಡುಗಡೆಯಾಗಲಿದೆ.