ETV Bharat / entertainment

ಸಹನಟರ ಬ್ರೊಮ್ಯಾನ್ಸ್: ಸ್ಟಂಟ್​ ಫೋಟೋ ಹಂಚಿಕೊಂಡ ಅಕ್ಷಯ್​ ಕುಮಾರ್​-ಟೈಗರ್​ ಶ್ರಾಫ್ - ಟೈಗರ್​ ಶ್ರಾಫ್

ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ವಿಭಿನ್ನ ಫೋಟೋ ಶೇರ್ ಮಾಡುವ ಮೂಲಕ ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್ ಅಭಿಮಾನಿಗಳಿಗೆ ವಿಶ್​​ ಮಾಡಿದ್ದಾರೆ.

Akshay Kumar and Tiger Shroff
ಅಕ್ಷಯ್​ ಕುಮಾರ್​-ಟೈಗರ್​ ಶ್ರಾಫ್
author img

By ETV Bharat Karnataka Team

Published : Feb 14, 2024, 4:42 PM IST

ಇಂದು ಪ್ರೇಮಿಗಳ ದಿನ. ಬಹುತೇಕ ಸೆಲೆಬ್ರಿಟಿಗಳು ಬಹಳ ವಿಶೇಷವಾಗಿ ವ್ಯಾಲೆಂಟೈನ್ಸ್ ಡೇ ವಿಶಸ್ ತಿಳಿಸಿದ್ದಾರೆ. ಆದ್ರೆ ಬಾಲಿವುಡ್​ ಕಲಾವಿದರಾದ ಅಕ್ಷಯ್​ ಕುಮಾರ್​ ಹಾಗೂ ಟೈಗರ್​ ಶ್ರಾಫ್ ಸ್ಟಂಟ್​ ಫೋಟೋ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಅಕ್ಕಿ ಮತ್ತು ಶ್ರಾಫ್​, ತಮ್ಮ ಅವಿನಾಭಾವ ಸ್ನೇಹ ಸಂಬಂಧವನ್ನು ಪ್ರದರ್ಶಿಸುವ ಮೂಲಕ ಪ್ರೇಮಿಗಳ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಗಳಲ್ಲಿ 'ಬಡೇ ಮಿಯಾನ್ ಛೋಟೆ ಮಿಯಾನ್‌' ಸಹ-ನಟರು ವಿಶೇಷ ವ್ಯಾಲೆಂಟೈನ್ಸ್ ಡೇ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ಬ್ರೊಮ್ಯಾನ್ಸ್ ಓವರ್ ರೊಮಾನ್ಸ್' ಎಂದು ಬರೆದುಕೊಂಡಿದ್ದಾರೆ.

ಮೊದಲ ಫೋಟೋ ಈ ತಾರೆಯರ ನಿಕಟ ಸ್ನೇಹ ಸಂಬಂಧವನ್ನು ಪ್ರದರ್ಶಿಸಿದೆ. ಇಬ್ಬರೂ ಪರಸ್ಪರ ಕೈ(ಹಸ್ತ)ಯನ್ನು ಬಿಗಿಯಾಗಿ ಹಿಡಿದಿದ್ದಾರೆ. ಎರಡನೇ ಚಿತ್ರದಲ್ಲಿ, ಅಕ್ಷಯ್ ಕುಮಾರ್ ಸಮುದ್ರತೀರದಲ್ಲಿ ಟೈಗರ್ ಶ್ರಾಫ್ ಅವರನ್ನು ಎತ್ತಿ ಹಿಡಿದಿರುವುದನ್ನು ಕಾಣಬಹುದು. ಫೋಟೋಗಳನ್ನು ಹಂಚಿಕೊಂಡಿರುವ ಅಕ್ಷಯ್, ಟೈಗರ್, "ಈ ಪ್ರೇಮಿಗಳ ದಿನದಂದು ಬ್ರೊಮ್ಯಾನ್ಸ್ ಓವರ್ ರೊಮ್ಯಾನ್ಸ್" ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಟೈಗರ್ ಶ್ರಾಫ್ ಅವರು ಬಡೇ ಮಿಯಾನ್ ಛೋಟೆ ಮಿಯಾನ್ ಶೂಟಿಂಗ್​ ಸೆಟ್‌ನಿಂದ 'ಖಿಲಾಡಿ' ಅಕ್ಷಯ್ ಕುಮಾರ್ ಅವರನ್ನೊಳಗೊಂಡ ತೆರೆಮರೆಯ ಫೋಟೋವನ್ನು ಹಂಚಿಕೊಂಡಿದ್ದರು. ಹೆಲಿಕಾಪ್ಟರ್‌ನ ಹಿನ್ನೆಲೆಯಲ್ಲಿ ಇಬ್ಬರೂ ಗನ್ ಹಿಡಿದು ನಿಂತಿದ್ದರು. ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಧರಿಸಿರುವುದನ್ನು ನೋಡಿದ್ರೆ ಆ್ಯಕ್ಷನ್​​ ಸೀನ್​ಗಳ ತೀವ್ರತೆ ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ. ಫೋಟೋ ಹಂಚಿಕೊಂಡ ಶ್ರಾಫ್​, "ಖಿಲಾಡಿ + ಬಾಘಿ = 2 ಮ್ಯಾನ್ ಆರ್ಮಿ #ಬಡೇ ಮಿಯಾನ್ ಛೋಟೆ ಮಿಯಾನ್‌" ಎಂದು ಕ್ಯಾಪ್ಷನ್​​ ಕೊಟ್ಟಿದ್ದರು.

ಇದನ್ನೂ ಓದಿ: ಪ್ರೇಮಿಗಳ ದಿನದಂದು ಪ್ರೀತಿಪಾತ್ರರಿಗೆ ರಶ್ಮಿಕಾ ಮಂದಣ್ಣ​ ಸ್ಪೆಷಲ್​ ವಿಶ್​

ಇತ್ತೀಚೆಗಷ್ಟೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸೇರಿದಂತೆ ಅನೇಕ ಲೊಕೇಶನ್​ಗಳಲ್ಲಿ ಈ ಪ್ಯಾನ್-ಇಂಡಿಯಾ ಚಿತ್ರದ ಚಿತ್ರೀಕರಣವಾಗಿದೆ. 2024ರ ಈದ್ ಸಂದರ್ಭ ಸಿನಿಮಾ ತೆರೆಗಪ್ಪಳಿಸಲಿದೆ. ಅದ್ಭುತ ಸಿನಿಮೀಯ ಅನುಭವ ನೀಡುವ ಭರವಸೆಯನ್ನು ಈಗಾಗಲೇ ಚಿತ್ರತಂಡ ನೀಡಿದೆ.

ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ವಿಶೇಷವಾಗಿ ಶುಭ ಕೋರಿದ ನಾಗ ಚೈತನ್ಯ- ಸಾಯಿ ಪಲ್ಲವಿ: ವಿಡಿಯೋ ನೋಡಿ

ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಜೊತೆಗೆ, ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಕೂಡ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ಸೋನಾಕ್ಷಿ ಸಿನ್ಹಾ, ಮಾನುಷಿ ಛಿಲ್ಲರ್ ಮತ್ತು ಅಲಯಾ ಎಫ್ ಅವರಂತಹ ಖ್ಯಾತ ನಟಿಮಣಿಯರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಬಿಗ್​ ಫೈಟ್​​ ಎದುರಿಸಲು ಸಜ್ಜಾಗಿದೆ. ಯಾಕೆ? ಅಂತೀರಾ, ಅಜಯ್ ದೇವಗನ್ ಅವರ 'ಮೈದಾನ್‌' ಕೂಡ ಅದೇ ಸಂದರ್ಭ ತೆರೆಗಪ್ಪಳಿಸಲಿದೆ. ಈ ಎರಡೂ ಕೂಡ ಬಹುಬೇಡಿಕೆಯ ಕಲಾವಿದರ ಬಹುನಿರೀಕ್ಷಿತ ಚಿತ್ರಗಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.