ETV Bharat / entertainment

ಕೇನ್ಸ್​​ ಫೆಸ್ಟಿವಲ್​ನಲ್ಲಿ ಮಿಂಚು ಹರಿಸಲು ಸಜ್ಜಾದ ಐಶ್ವರ್ಯಾ ರೈ, ಅದಿತಿ ರಾವ್ ಹೈದರಿ - Cannes 2024 - CANNES 2024

ಮೇ 14ರಂದು ಕೇನ್ಸ್ ಚಲನಚಿತ್ರೋತ್ಸವ ಪ್ರಾರಂಭವಾಗಲಿದೆ. ಭಾರತದ ಜನಪ್ರಿಯ ತಾರೆಯರಾದ ಐಶ್ವರ್ಯಾ ರೈ ಬಚ್ಚನ್ ಹಾಗೂ ಅದಿತಿ ರಾವ್ ಹೈದರಿ ರೆಡ್​​ ಕಾರ್ಪೆಟ್​​​ ಮೇಲೆ ಹೆಜ್ಜೆ ಹಾಕಲಿದ್ದಾರೆ.

Aishwarya Rai, Aditi Rao Hydari
ಅದಿತಿ ರಾವ್ ಹೈದರಿ, ಐಶ್ವರ್ಯಾ ರೈ ಬಚ್ಚನ್ (ANI)
author img

By ETV Bharat Karnataka Team

Published : May 9, 2024, 9:40 AM IST

ಬಹುಭಾಷಾ ತಾರೆಯರಾದ ಐಶ್ವರ್ಯಾ ರೈ ಬಚ್ಚನ್, ಅದಿತಿ ರಾವ್ ಹೈದರಿ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮಿಂಚು ಹರಿಸಲು ಸಿದ್ಧರಾಗಿದ್ದಾರೆ. ಜಾಗತಿಕ ಸೌಂದರ್ಯ ಬ್ರ್ಯಾಂಡ್ ಅನ್ನು ಪ್ರತಿನಿಧಿಸುವ ಈ ಇಬ್ಬರು ನಟಿಮಣಿಯರು ಫ್ರೆಂಚ್ ರಿವೇರಿಯಾದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕುವರು. ಈವೆಂಟ್‌ನ 77ನೇ ಆವೃತ್ತಿಯ ರೆಡ್ ಕಾರ್ಪೆಟ್‌ನಲ್ಲಿ ಸೇರಲಿರುವ ಹಲವಾರು ಸೆಲೆಬ್ರಿಟಿಗಳಲ್ಲಿ ಇವರೂ ಸೇರಿದ್ದಾರೆ.

ಅದಿತಿ 2022ರಲ್ಲಿ ಮೊದಲ ಬಾರಿಗೆ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಐಶ್​​ ಆಗಾಗ್ಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಜಗತ್ತಿನ ಗಮನ ಸೆಳೆದಿದ್ದಾರೆ.

"ಮಹಿಳೆಯರು ತಮ್ಮ ವಿಶಿಷ್ಟತೆಯನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಬೇಕು, ಸ್ವೀಕರಿಸಬೇಕೆಂದು ನಾನು ಬಲವಾಗಿ ಪ್ರತಿಪಾದಿಸುತ್ತೇನೆ" ಎಂದು ಇತ್ತೀಚೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಂಡಿ ಸಿನಿಮಾದಲ್ಲಿ ಕಾಣಿಸಿಕೊಂಡ ಅದಿತಿ ರಾವ್​​ ಹೈದರಿ ತಿಳಿಸಿದ್ದರು. ಪ್ರತಿಷ್ಟಿತ ಕಾರ್ಯಕ್ರಮದ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಾ, "ಮಹಿಳಾ ಸಬಲೀಕರಣವನ್ನು ನಿರಂತರವಾಗಿ ಉತ್ತೇಜಿಸುವ ಬ್ರ್ಯಾಂಡ್‌ನೊಂದಿಗೆ ಸಹಕರಿಸುತ್ತಿರುವುದು ನಿಜಕ್ಕೂ ಗೌರವದ ವಿಚಾರ" ಎಂದು ಹೇಳಿದರು.

ಇದನ್ನೂ ಓದಿ: ಸಲ್ಮಾನ್ ಮನೆ ಹೊರಗೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ - Salman House Firing Case

ಏನಿದು ಕೇನ್ಸ್‌ ಫೆಸ್ಟಿವಲ್?: ಕೇನ್ಸ್ ಫಿಲ್ಮ್ ಫೆಸ್ಟಿವಲ್ ದಕ್ಷಿಣ ಫ್ರಾನ್ಸ್‌ನಲ್ಲಿ ಸಿನಿಮಾವನ್ನು ಆಚರಿಸಲು ಗಣ್ಯರನ್ನು ಒಟ್ಟು ಸೇರಿಸುತ್ತದೆ. ಡೆಮಿ ಮೂರ್, ಮೆರಿಲ್ ಸ್ಟ್ರೀಪ್ ಮತ್ತು ಜಾರ್ಜ್ ಲ್ಯೂಕಾಸ್ ಸೇರಿದಂತೆ ಹಾಲಿವುಡ್ ಸ್ಟಾರ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಮೇ 14 ರಂದು ಕೇನ್ಸ್ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಮೇ 25ರವರೆಗೆ ಕಾರ್ಯಕ್ರಮ ನಡೆಯುತ್ತದೆ.

ಇದನ್ನೂ ಓದಿ: ಟಿ-20 ವಿಶ್ವಕಪ್​​​​ ಪ್ರಚಾರಕ್ಕೆ ಅಶ್ವತ್ಥಾಮನ ಪಾತ್ರದಲ್ಲಿ ಬಂದ ಅಮಿತಾಭ್​​ ಬಚ್ಚನ್: ರೋಮಾಂಚಕ ವಿಡಿಯೋ ನೋಡಿ - Amitabh Bachchan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.