ETV Bharat / entertainment

Watch: ದೇಸಿ ಗರ್ಲ್ ಸಾಂಗ್​ಗೆ ಐಶ್ವರ್ಯಾ ಅಭಿಷೇಕ್ ಡ್ಯಾನ್ಸ್,​ ಬ್ಯೂಟಿಫುಲ್​ ವಿಡಿಯೋ ವೈರಲ್​ - AISHWARYA ABHISHEK DANCE

ಪವರ್​ಫುಲ್​ ಸೆಲೆಬ್ರಿಟಿ ಕಪಲ್​ ಐಶ್ವರ್ಯಾ ಅಭಿಷೇಕ್ ದೇಸಿ ಗರ್ಲ್ ಸಾಂಗ್​ಗೆ ಮಸ್ತ್​ ಡ್ಯಾನ್ಸ್​ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ.

Abhishek Aishwarya
ತಾರಾ ದಂಪತಿ ಅಭಿಷೇಕ್ ಐಶ್ವರ್ಯಾ (Photo: ANI)
author img

By ETV Bharat Entertainment Team

Published : Dec 11, 2024, 3:58 PM IST

ಐಶ್ವರ್ಯಾ ರೈ ಬಚ್ಚನ್​​ ಹಾಗೂ ಅಭಿಷೇಕ್ ಬಚ್ಚನ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ತಾರಾ ದಂಪತಿ. ಫ್ಯಾನ್ಸ್​ ಪ್ರೀತಿ ಗಳಿಸಿರೋ ಬಾಲಿವುಡ್​​ನ ಪವರ್​ಫುಲ್​ ಕಪಲ್​ ಟ್ರೋಲಿಗರ ಪ್ರಮುಖ ವಿಷಯವಾಗಿದ್ದಾರೆ. ಇವರಿಬ್ಬರ ಡಿವೋರ್ಸ್​ ರೂಮರ್ಸ್​​ ಬಹಳ ದಿನಗಳಿಂದ ಸದ್ದು ಮಾಡುತ್ತಿದೆ. ಆದರೆ ಅದು ವದಂತಿಯಷ್ಟೇ ಅನ್ನೋದು ನಿಮ್ಮ ಗಮನದಲ್ಲಿರಲಿ. ಹೀಗೆ ವಿಚ್ಛೇದನ ವದಂತಿ ಹೆಚ್ಚುತ್ತಿರುವಾಗ ನೆಟ್ಟಿಗರು ಜೋಡಿಯ ಹಳೇ ಫೋಟೋ ವಿಡಿಯೋಗಳನ್ನು ಆನ್​ಲೈನ್​​​ನಲ್ಲಿ ಅಗೆದು ತೆಗೆಯುತ್ತಿದ್ದಾರೆ. ಅದರಂತೆ ಇದೀಗ ತಾರಾ ದಂಪತಿಯ ಥ್ರೋಬ್ಯಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್​ ಆಗಿವೆ.

ವೈರಲ್​ ವಿಡಿಯೋದಲ್ಲಿ ಅಭಿ - ಐಶ್​​​ ಡ್ಯಾನ್ಸ್​: ವೈರಲ್​ ವಿಡಿಯೋದಲ್ಲಿ ಅಭಿ ಅಂಡ್​​ ಐಶ್​ ಇಬ್ಬರೂ ದೇಸಿ ಗರ್ಲ್ ಸಾಂಗ್​ಗೆ ಡ್ಯಾನ್ಸ್​​ ಮಾಡಿರೋದನ್ನು ಕಾಣಬಹುದು. ವಿಡಿಯೋ ವಿವಾಹ ಸಮಾರಂಭವೊಂದರದ್ದಾಗಿದೆ ಎಂದು ತೋರುತ್ತಿದೆ. ವೇದಿಕೆ ಮೇಲೆ ಐಶ್ವರ್ಯಾ ಮತ್ತು ಅಭಿಷೇಕ್​​ ಇದ್ದು, ಇಬ್ಬರ ಮಧ್ಯದಲ್ಲಿ ಮಗಳು ಆರಾಧ್ಯಳನ್ನೂ ಕಾಣಬಹುದು. ಈ ಕುಟುಂಬಕ್ಕೆ ಆಪ್ತರು ಸಾಥ್​ ನೀಡಿದ್ದಾರೆ. ಇದೊಂದು ಆತ್ಮೀಯ ಕ್ಷಣವಾಗಿದ್ದು, ಎಲ್ಲರೂ ಕುಣಿದು ಸಂಭ್ರಮಿಸಿದ್ದಾರೆ.

ವೈಟ್​ ಶೈನಿಂಗ್​​ ಔಟ್​ಫಿಟ್​​ನಲ್ಲಿ​ ಕಂಗೊಳಿಸಿದ ಜೋಡಿ: ಐಶ್ವರ್ಯಾ ಮತ್ತು ಅಭಿಷೇಕ್ ವೈಟ್​ ಶೈನಿಂಗ್​​ ಔಟ್​ಫಿಟ್​ನಲ್ಲಿ ಕಂಗೊಳಿಸಿದ್ದಾರೆ. ಮತ್ತೊಂದೆಡೆ, ಆರಾಧ್ಯ ರೆಡ್​​ ಗೌನ್‌ನಲ್ಲಿ ಸಖತ್​ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾಳೆ. ಮೂವರೂ ದೇಸಿ ಗರ್ಲ್ ಸಾಂಗ್​​​ಗೆ ಸಖತ್ತಾಗೇ ಸ್ಟೆಪ್​ ಹಾಕಿದ್ದಾರೆ. ಡ್ಯಾನ್ಸ್​ ಬಳಿಕ ಐಶ್​​ ತಮ್ಮ ಮುದ್ದು ಮಗಳನ್ನು ಅಪ್ಪಿಕೊಂಡು ಮುದ್ದಾಡಿದ್ದಾರೆ. ಇದೊಂದು ಕ್ಯೂಟ್​​ ಫಾಮಿಲಿ ಟೈಮ್​ ಎನ್ನಬಹುದು. ಸದ್ಯ ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಉಲ್ಭಣಗೊಂಡಿರುವ ನಡುವೆಯೇ ಈ ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಅಂದಹಾಗೆ, ಇದು ಕೆಲ ಸಮಯದ ಹಿಂದಿನ ವಿಡಿಯೋ.

ಈ ವರ್ಷದ ಜೂನ್​ನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಅದ್ಧೂರಿ ವಿವಾಹ ಸಮಾರಂಭದಲ್ಲಿ ಇಬ್ಬರೂ ಮಾಧ್ಯಮಗಳೆದುರು ಪ್ರತ್ಯೇಕವಾಗಿ ಕಾಣಿಸಿಕೊಂಡ ಹಿನ್ನೆಲೆ ಊಹಾಪೋಹಗಳು ತೀವ್ರಗೊಂಡಿದ್ದವು. ಇದಲ್ಲದೇ, ಐಶ್ವರ್ಯಾ ಅವರು ಇತ್ತೀಚೆಗಷ್ಟೇ ಮಗಳು ಆರಾಧ್ಯ ಬರ್ತ್​​ಡೇ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದರು. ಫೋಟೋಗಳಲ್ಲಿ ಅಭಿಷೇಕ್ ಸೇರಿದಂತೆ ಬಚ್ಚನ್ ಕುಟುಂಬದ ಯಾವುದೇ ಸದಸ್ಯರು ಕಾಣಿಸಿಕೊಂಡಿರಲಿಲ್ಲ. ಬಳಿಕ, ಅಭಿಷೇಕ್​​ ಅವರಿದ್ದಾರೆ ಎನ್ನಲಾದ ಫೋಟೋಗಳು ವೈರಲ್​ ಆಯ್ತಾದರೂ ಟ್ರೋಲಿಗರು ಮಾತ್ರ ಸುಮ್ಮನೆ ಕೂರಲಿಲ್ಲ. ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನುವ ವದಂತಿಗಳು ಮತ್ತಷ್ಟು ಹೆಚ್ಚಾಯಿತು.

ಇದನ್ನೂ ಓದಿ: 'ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ' ಎಂದ 'U I' ಸೆನ್ಸಾರ್​ನಲ್ಲಿ ಪಾಸ್​: ಪರೀಕ್ಷೆಗೆ ಸಜ್ಜಾದ ಬುದ್ಧಿವಂತ, ಕಿಚ್ಚ

ಅದಾಗ್ಯೂ, ಕೆಲವೇ ದಿನಗಳ ಹಿಂದಷ್ಟೇ ದಂಪತಿ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ದಂಪತಿ ಫೋಟೋ ಶೇರ್ ಮಾಡಲಿಲ್ಲವಾದ್ರೂ, ಚಿತ್ರರಂಗದ ಇತರರು ಹಂಚಿಕೊಂಡ ಫೋಟೋ ವ್ಯಾಪಕವಾಗಿ ವೈರಲ್​ ಆಯ್ತು. ಅಭಿಷೇಕ್​, ಐಶ್ವರ್ಯಾ ಜೋಡಿ ನಟಿಯ ತಾಯಿ ಬೃಂದಾ ರೈ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇಷ್ಟೆಲ್ಲ ಆದರೂ ವಿಚ್ಛೇದನ ವದಂತಿಗಳು ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: ಐಶ್​-ಅಭಿ ಡಿವೋರ್ಸ್​​ ರೂಮರ್ಸ್​​ ನಡುವೆ ತಮ್ಮ ಕುಟುಂಬದಲ್ಲಿನ ಪ್ರೇಮ ವಿವಾಹಗಳ ಬಗ್ಗೆ ಮಾತನಾಡಿದ ಅಮಿತಾಭ್​​ ಬಚ್ಚನ್

ಐಶ್ವರ್ಯಾ ಮತ್ತು ಅಭಿಷೇಕ್ 2007ರಲ್ಲಿ ದಾಂಪತ್ಯ ಜೀವನ ಆರಂಭಿಸಿದರು. 2011ರಲ್ಲಿ ಮಗಳು ಆರಾಧ್ಯಳನ್ನು ಸ್ವಾಗತಿಸಿದರು. ವಿವಾಹವಾಗಿ 17 ವರ್ಷಗಳಾಗಿದ್ದು, ಈ ಜೋಡಿ ಸದಾ ಕಾಲ ಖುಷಿಯಾಗಿರಲಿ ಎಂಬುದು ಅಭಿಮಾನಿಗಳ ಹಾರೈಕೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.