ETV Bharat / entertainment

ನಟಿ ವರಲಕ್ಷ್ಮಿ ಮದುವೆ ಸಂಭ್ರಮ: ಸಂಗೀತ ಕಾರ್ಯಕ್ರಮದಲ್ಲಿ ತ್ರಿಶಾ ಕೃಷ್ಣನ್ ಮಿಂಚಿಂಗ್​; ಫೋಟೋಗನ್ನು ನೋಡಿ - Varalaxmi Sarathkumar - VARALAXMI SARATHKUMAR

ನಟಿ ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ನಿಕೋಲಾಯ್ ಸಚ್‌ದೇವ್ ಮದುವೆಗೆ ಕ್ಷಣಗಣನೆ ಆರಂಭವಾಗಿದ್ದು, ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳ ಫೋಟೋಗಳು ಆನ್​ಲೈನ್​​ನಲ್ಲಿ ಸಖತ್​ ಸದ್ದು ಮಾಡುತ್ತಿವೆ.

Trisha Krishnan Instagram story
ವರಲಕ್ಷ್ಮಿ ಪ್ರೀ ವೆಡ್ಡಿಂಗ್​​ ಪ್ರೋಗ್ರಾಮ್​ನಲ್ಲಿ ತ್ರಿಶಾ ಕೃಷ್ಣನ್ ಸೇರಿ ಹಲವರು (Trisha Krishnan Instagram)
author img

By ETV Bharat Karnataka Team

Published : Jul 2, 2024, 4:30 PM IST

ಚಿತ್ರರಂಗದಲ್ಲಿ ನಟಿ ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ನಿಕೋಲಾಯ್ ಸಚ್‌ದೇವ್ ಮದುವೆ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿವೆ. ಸಂಗೀತ ಕಾರ್ಯಕ್ರಮಗಳಲ್ಲಿ ಆತ್ಮೀಯ ಸ್ನೇಹಿತೆ ನಟಿ ತ್ರಿಶಾ ಕೃಷ್ಣನ್ ಸೇರಿದಂತೆ ಸೆಲೆಬ್ರಿಟಿಗಳೊಂದಿಗಿನ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿವೆ.

Trisha Krishnan Instagram story
ತ್ರಿಶಾ ಕೃಷ್ಣನ್ ಇನ್​ಸ್ಟಾಗ್ರಾಮ್​​ ಸ್ಟೋರಿ (Trisha Krishnan Instagram)

ಚೆನ್ನೈನಲ್ಲಿ ಕಲರ್​ಫುಲ್ ಮೆಹೆಂದಿ ಈವೆಂಟ್​ನೊಂದಿಗೆ ಮದುವೆ ಸಮಾರಂಭ ಆರಂಭವಾಗಿದೆ. ಸಮಾರಂಭದ ಸುಂದರ ಫೋಟೋಗಳು ಆನ್​ಲೈನ್​ನಲ್ಲಿ ಕಾಣಿಸಿಕೊಂಡಿವೆ. ಮಧುಮಗಳು ಗ್ರೀನಿಶ್​​ ಯೆಲ್ಲೋ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ವರ ನಿಕೋಲಾಯ್ ಸಚ್‌ದೇವ್ ಗ್ರಿನ್​​ ಕುರ್ತಾ ಧರಿಸಿದ್ದಾರೆ. ಉಡುಗೆಗೆ ತಕ್ಕ ಆಭರಣಗಳೊಂದಿಗೆ ವರಲಕ್ಷ್ಮಿ ತಮ್ಮ ಸೌಂದರ್ಯ ಹೆಚ್ಚಿಸಿಕೊಂಡಿದ್ದಾರೆ.

ತ್ರಿಶಾ ಕೃಷ್ಣನ್ ಮತ್ತು ಲಕ್ಷ್ಮಿ ಮಂಚು ಅವರಂತಹ ಕೆಲ ಸೆಲೆಬ್ರಿಟಿಗಳು ಈ ಈವೆಂಟ್‌ನಲ್ಲಿ ಭಾಗವಹಿಸಿದ್ದರು. ವಧುವಿನ ಆಪ್ತ ಸ್ನೇಹಿತೆ ತ್ರಿಶಾ, ಸಂಗೀತ ಕಾರ್ಯಕ್ರಮದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​​ ಸ್ಟೋರಿಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ವೈಟ್​ ಅನಾರ್ಕಲಿ ಡ್ರೆಸ್​ನಲ್ಲಿ ತ್ರಿಶಾ ಬೆರಗುಗೊಳಿಸುವ ನೋಟ ಬೀರಿದ್ದಾರೆ.

ನಿಕೋಲಾಯ್ ಸಚ್‌ದೇವ್ ಮುಂಬೈ ಮೂಲದ ಆರ್ಟ್ ಡೀಲರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಸಚ್‌ದೇವ್ ಗ್ಯಾಲರಿ 7 ಅನ್ನು ಹೊಂದಿದ್ದಾರೆ. ಇದು ಸ್ಟಾರ್ ವಿಸಿಟರ್​ಗಳನ್ನು ಸೆಳೆಯುವಲ್ಲಿ ಪ್ರಸಿದ್ಧವಾಗಿರೋ ಕಲಾ ಗ್ಯಾಲರಿಯಾಗಿದೆ. ನಿಕೋಲಾಯ್ ಅವರ ಪೋಷಕರಾದ ಅರುಣ್ ಮತ್ತು ಚಂದ್ರ, ಮುಂಬೈ ನಗರದಲ್ಲಿ ಪ್ರಸಿದ್ಧ ಆರ್ಟ್​ ಡೀಲರ್​ಗಳು. ಇವರು ಗ್ಯಾಲರಿ 7ರ ಸ್ಥಾಪಕರು. ಈ ವರ್ಷದ ಮಾರ್ಚ್‌ನಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸೂಪರ್ ಸ್ಟಾರ್ಸ್ ಸಲ್ಮಾನ್ ಖಾನ್-ಕಮಲ್ ಹಾಸನ್ ಸ್ಕ್ರೀನ್​ ಶೇರ್: ಆ್ಯಕ್ಷನ್​ ಸಿನಿಮಾಗೆ ಅಟ್ಲೀ ಆ್ಯಕ್ಷನ್​ ಕಟ್ - Atlee next movie

ನಟಿ ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ಗೆಳೆಯ ನಿಕೋಲಾಯ್ ಸಚ್‌ದೇವ್ ಜೋಡಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಚಿತ್ರರಂಗದ ಖ್ಯಾತನಾಮರನ್ನು ತಮ್ಮ ಮದುವೆ, ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಜೋಡಿಯ ಮದುವೆ ಫೋಟೋ ನೋಡಲು ನೆಟ್ಟಿಗರು, ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ: ಹಂಪಿ ವಿರೂಪಾಕ್ಷನ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ ಚಿತ್ರ - The India House

ಸಿನಿಮಾ ವಿಚಾರ ಗಮನಿಸೋದಾದರೆ, ವರಲಕ್ಷ್ಮಿ ಶರತ್‌ಕುಮಾರ್ ಬಹು ನಿರೀಕ್ಷಿತ ಚಿತ್ರ 'ರಾಯನ್‌'ನಲ್ಲಿ ಧನುಷ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಎಸ್.ಜೆ. ಸೂರ್ಯ, ಸಂದೀಪ್ ಕಿಶನ್, ಪ್ರಕಾಶ್ ರಾಜ್, ಕಾಳಿದಾಸ್ ಜಯರಾಂ, ಅಪರ್ಣಾ ಬಾಲಮುರಳಿ, ಸೆಲ್ವರಾಘವನ್ ಮತ್ತು ದುಶಾರಾ ವಿಜಯನ್ ಕೂಡ ಬಣ್ಣ ಹಚ್ಚಿದ್ದಾರೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವನ್ನು ಧನುಷ್ ನಿರ್ದೇಶಿಸಿದ್ದಾರೆ. ಇದೇ ಜುಲೈ 26ಕ್ಕೆ ರಾಯನ್‌ ರಿಲೀಸ್​ ಆಗಲಿದ್ದು, ಪ್ರೇಕ್ಷಕರು ಕಾತುರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.