ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಮೊಂತೆರೋ ಮದುವೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸೋನಾಲ್ ಮನೆ ಕಡೆಯಿಂದ ಮದುವೆ ಸಂಭ್ರಮ ಶುರುವಾಗಿವೆ. ಕೆಲ ದಿನಗಳ ಹಿಂದೆ ತರುಣ್ ಸುಧೀರ್ ಜೊತೆ ಸೋನಾಲ್ ಒಟ್ಟಿಗೆ ಮಾಧ್ಯಮದವರ ಮುಂದೆ ತಮ್ಮ ಪ್ರೀತಿ ಹಾಗೂ ಮದುವೆಯ ಸಿದ್ಧತೆ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು.
![Sonal Monteiro bachelorette party](https://etvbharatimages.akamaized.net/etvbharat/prod-images/07-08-2024/kn-bng-04-sonala-maneyalli-maduve-sambhram-shooru-7204735_06082024225013_0608f_1722964813_1034.jpg)
ಇದೀಗ ಸೋನಾಲ್ ಮನೆಯಲ್ಲಿ ಮದುವೆ ಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. ಮದುವೆಗೂ ಮುನ್ನ ಕುಟುಂಬಸ್ಥರ ಜೊತೆ ಮೊಂತೆರೋ ಸಖತ್ ಎಂಜಾಯ್ ಮಾಡಿದ್ದಾರೆ. ಸೋನಾಲ್ಗೆ ಗೊತ್ತಿಲ್ಲದೇ, ಅವರ ತಾಯಿ ಹಾಗೂ ಸಹೋದರಿ ಸೇರಿಕೊಂಡು ಬ್ಯಾಚುಲರ್ ಪಾರ್ಟಿ ಏರ್ಪಡಿಸಿದ್ದಾರೆ. ಈ ಪಾರ್ಟಿಯಲ್ಲಿ ಸೋನಾಲ್ ಟ್ರೆಂಡಿ ಕಾಸ್ಟೂಮ್ನಲ್ಲಿ ಸಖತ್ ಮಿಂಚಿದ್ದಾರೆ. ಭಾವಿ ಪತಿ ತರುಣ್ ಫೋಟೋ ಹಿಡಿದು ತಂಗಿ ಹಾಗೂ ಗೆಳತಿಯರು ಸೋನಾಲ್ಗೆ ಸರ್ಪ್ರೈಸ್ ಪಾರ್ಟಿ ಕೊಟ್ಟಿದ್ದಾರೆ.
![Sonal Monteiro bachelorette party](https://etvbharatimages.akamaized.net/etvbharat/prod-images/07-08-2024/kn-bng-04-sonala-maneyalli-maduve-sambhram-shooru-7204735_06082024225013_0608f_1722964813_665.jpg)
ಮಂಗಳೂರು ಮೂಲದ ಸೋನಾಲ್ ಮೊಂತೆರೋ ಮೊದಲು ತುಳು ಚಿತ್ರಗಳಲ್ಲಿ ಅಭಿನಯಿಸಿ, ಆನಂತರ 'ಅಭಿಸಾರಿಕೆ' ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ನಂತರ 'ಪಂಚತಂತ್ರ', 'ಡೆಮೊ ಪೀಸ್', 'ಗರಡಿ' ಹಾಗೂ 'ಶುಗರ್ ಫ್ಯಾಕ್ಟರಿ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ, ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲಿಯೂ ಸೋನಾಲ್ ನಟಿಸಿದ್ದರು. ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಅವರು ತೆರೆ ಹಂಚಿಕೊಂಡಿದ್ದರು. ಬಳಿಕ ಗರಡಿ ಸಿನಿಮಾದಲ್ಲಿನ ಅವರ ಅಭಿನಯ ಅಭಿಮಾನಿಗಳ ಗಮನ ಸೆಳೆದಿತ್ತು.
![Sonal Monteiro bachelorette party](https://etvbharatimages.akamaized.net/etvbharat/prod-images/07-08-2024/kn-bng-04-sonala-maneyalli-maduve-sambhram-shooru-7204735_06082024225013_0608f_1722964813_277.jpg)
ಆಗಸ್ಟ್ 10 ಹಾಗೂ 11ರಂದು ನಡೆಯಲಿರುವ ತರುಣ್ ಮತ್ತು ಸೋನಾಲ್ ಮದುವೆಗೆ ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕ ಹಾಗೂ ನಾಯಕಿಯ ಮದುವೆಗೆ ಇಡೀ ಚಿತ್ರರಂಗ ಸಾಕ್ಷಿಯಾಗಲಿದೆ.