ETV Bharat / entertainment

ಟೆಕಿಯಾನ್ ಸಂಸ್ಥೆ ಜೊತೆಗೂಡಿ ಹುಲಿ ದತ್ತು ಪಡೆದ ನಟಿ ಸಂಯುಕ್ತ ಹೊರನಾಡು - Samyukta Horanadu Adopted Tiger

author img

By ETV Bharat Karnataka Team

Published : Aug 31, 2024, 7:52 PM IST

ಸಿನಿಮಾಗಳ ಜೊತೆ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಕನ್ನಡದ ಜನಪ್ರಿಯ ನಟಿ ಸಂಯುಕ್ತ ಹೊರನಾಡು ತಮ್ಮದೇ ಪ್ರಾಣ ಅನಿಮಲ್​​ ಫೌಂಡೇಶನ್​​ ಹಾಗೂ ಟೆಕಿಯಾನ್ ಸಂಸ್ಥೆ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ.

Samyukta Horanadu Adopted Tiger
ಹುಲಿ ದತ್ತು ಪಡೆದ ನಟಿ ಸಂಯುಕ್ತ ಹೊರನಾಡು (ETV Bharat)

ಸಿನಿಮಾಗಳ ಜೊತೆ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಕನ್ನಡದ ಜನಪ್ರಿಯ ನಟಿ ಸಂಯುಕ್ತ ಹೊರನಾಡು. ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಆ್ಯಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಪ್ರಾಣಿಪ್ರಿಯರ ಮೆಚ್ಚುಗೆ ಪಡೆದವರಿವರು. ಸಂಯುಕ್ತಾ ಕೂಡ ಪ್ರಾಣಿ ಪ್ರಿಯೆ. ಶ್ವಾನ, ಮೊಲ ಎಂದರೆ ಸಂಯುಕ್ತಾ ಹೊರನಾಡು ಅವರಿಗೆ ಎಲ್ಲಿಲ್ಲದ ಪ್ರೀತಿ. ಇದೀಗ ಸಂಯುಕ್ತ ತಮ್ಮದೇ ಪ್ರಾಣ ಅನಿಮಲ್​​ ಫೌಂಡೇಶನ್​​ ಹಾಗೂ ಟೆಕಿಯಾನ್ ಸಂಸ್ಥೆ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ.

28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ದತ್ತು ಪಡೆದಿದ್ದಾರೆ. ಇದು ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವತಂತ್ರವಾಗಿ ವಾಸಿಸಲು ಕಷ್ಟ ಸಾಧ್ಯವಾಗಿರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂರಕ್ಷಣಾ ಕೇಂದ್ರ ಕಾಳಜಿ ವಹಿಸುತ್ತಿದೆ. ದತ್ತು ಸ್ವೀಕೃತಿಯಲ್ಲಿ ಅದರ ದಿನನಿತ್ಯದ ಆಹಾರ, ನಿರ್ವಹಣೆ ಮತ್ತು ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುತ್ತದೆ.

ಟೆಕಿಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೂ ಬನ್ನೇರುಘಟ್ಟ ಜೈವಿಕ‌ ಉದ್ಯಾನದ ಅಧಿಕಾರಿಗಳಿಗೆ ಧನ್ಯವಾದಗಳು. ಆರೋಗ್ಯ, ಶಿಕ್ಷಣ ಹಾಗೂ ಸಮಾನತೆ ಮತ್ತು ಸುಸ್ಥಿರತೆ ಸಿಎಸ್​ಆರ್​​ ಮೂಲ ಉದ್ದೇಶ ಎಂದು ತಿಳಿಸಿದರು.

ನಟಿ ಸಂಯುಕ್ತ ಹೊರನಾಡು ಮಾತನಾಡಿ, ಟೆಕಿಯಾನ್ ಜೊತೆ ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ. ತೊಂದರೆಗೆ ಒಳಗಾದ ಪ್ರಾಣಿಗಳನ್ನು ದತ್ತು ಪಡೆದಿರುವುದಕ್ಕೆ ಟೆಕಿಯಾನ್​ಗೆ ಧನ್ಯವಾದಗಳು ಎಂದು ತಿಳಿಸಿದರು.

ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಜೂ.​ಎನ್​​ಟಿಆರ್; ಅಮ್ಮನ ಆಸೆ ಈಡೇರಿಸಿದ ಆರ್​ಆರ್​ಆರ್​ ಸ್ಟಾರ್​ - Jr NTR Visits Udupi Temple

ಉಪ ಅರಣ್ಯಾಧಿಕಾರಿ ಎ.ವಿ ಸೂರ್ಯಸೇನ್ ಮಾತನಾಡಿ, ಡೈಮ್ಯಾಂಡ್ ಕ್ಲಾಸ್ ವಿಭಾಗದಲ್ಲಿ ಟೆಕಿಯಾನ್ ಮತ್ತು ಪ್ರಾಣ ಸಂಸ್ಥೆ ಅತಿ ಹೆಚ್ಚು ವೆಚ್ಚದಲ್ಲಿ ಪ್ರಾಣಿಗಳನ್ನು ದತ್ತು ಪಡೆದಿದೆ. ಅವರ ಕೆಲಸ ಇತರರಿಗೂ ಮಾದರಿ ಎಂದು ತಿಳಿಸಿದರು.

ಇದನ್ನೂ ಓದಿ: ಹಗಲು ಸೂರ್ಯ, ರಾತ್ರಿ ಚಂದ್ರ ಬರಬೇಕು.. ಎರಡೂ ಒಟ್ಟಿಗೆ ಬಂದರೆ ಸಮಸ್ಯೆ: ಕಿಚ್ಚನ ಮಾರ್ಮಿಕ ಉತ್ತರ - Sudeep on Darshan

ಟೆಕಿಯಾನ್ ಹಾಗೂ ಪ್ರಾಣ ಸಂಸ್ಥೆ ಜೊತೆಗೂಡಿ ದಿನದ 24 ಗಂಟೆ ಪ್ರಾಣಿಗಳ ರಕ್ಷಣೆಗೆ ಆಂಬ್ಯುಲೆನ್ಸ್ ಸೇವೆ ಒದಗಿಸಿದೆ. ಇದುವರೆಗೆ 500 ಪ್ರಾಣಿಗಳನ್ನು ಈ ಸಂಸ್ಥೆ ರಕ್ಷಣೆ ಮಾಡಿವೆ. ಕನಕಪುರ ರಸ್ತೆಯಲ್ಲಿ ಟೆಕಿಯಾನ್ ಸಂಸ್ಥೆ ಪ್ರಾಣಿ ರಕ್ಷಣೆಗೆ ಪುನರ್ ವಸತಿ ಕೇಂದ್ರ ಸ್ಥಾಪಿಸಿಕೊಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.