ETV Bharat / entertainment

ವಿನಯ್ ರಾಜ್​ಕುಮಾರ್ ಸರಳ ಪ್ರೇಮಕಥೆಗೆ ಮನಸೋತ ಮೋಹಕ ತಾರೆ - ಸರಳ ಪ್ರೇಮಕಥೆ

ಫೆಬ್ರವರಿ 8ಕ್ಕೆ ಒಂದು ಸರಳ ಪ್ರೇಮಕಥೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ.

ಸರಳ ಪ್ರೇಮಕಥೆ
ಸರಳ ಪ್ರೇಮಕಥೆ
author img

By ETV Bharat Karnataka Team

Published : Feb 1, 2024, 4:24 PM IST

ಒಂದು ಸರಳ ಪ್ರೇಮಕಥೆ ಈ ವರ್ಷದ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ನಿರ್ದೇಶಕ ಸಿಂಪಲ್ ಸುನಿ ಹಾಗೂ ದೊಡ್ಮನೆಯ ಕುಡಿ ವಿನಯ್ ರಾಜ್​ಕುಮಾರ್ ಕಾಂಬೋದಲ್ಲಿ ಬರ್ತಿರುವ ಚಿತ್ರ. ಸದ್ಯ ಹಾಡುಗಳಿಂದ ಸ್ಯಾಂಡಲ್​ವುಡ್ ಟಾಕ್ ಆಗುತ್ತಿರುವ ಒಂದು ಸರಳ ಪ್ರೇಮಕಥೆ ಆಗಮನಕ್ಕೆ ದಿನಗಣನೆಯಷ್ಟೇ ಬಾಕಿ ಇದೆ. ಸದ್ಯ ಕ್ಯಾರೆಕ್ಟರ್ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿರುವ ಸುನಿ ಈಗ ಒಂದೊಂದೇ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರಪ್ರೇಮಿಗಳಿಗೆ ಆಮಂತ್ರಣ ನೀಡುತ್ತಿದ್ದಾರೆ.

ಸರಳ ಪ್ರೇಮಕಥೆ ಸಿನಿಮಾ ಪೋಸ್ಟರ್
ಸರಳ ಪ್ರೇಮಕಥೆ ಸಿನಿಮಾ ಪೋಸ್ಟರ್

ಇದೀಗ ಒಂದು ಸರಳ ಪ್ರೇಮಕಥೆ ಸಿನಿಮಾದ ಮತ್ತೊಂದು ಮೆಲೋಡಿ ಮಸ್ತಿ ಅನಾವರಣಗೊಂಡಿದೆ. ಸೂಫಿ ಶೈಲಿ ಸರಳ ಗೀತೆಯನ್ನು ಮೋಹಕ ತಾರೆ ರಮ್ಯಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಎಲ್ಲ ಮಾತನ್ನು ಎಂಬ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತ ಒದಗಿಸುವುದರ ಜೊತೆಗೆ ಶಿವಾನಿ ಸ್ವಾಮಿ ಜೊತೆಗೂಡಿ ಧ್ವನಿಯಾಗಿದ್ದಾರೆ. ದೊಡ್ಮನೆ ಕುವರ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ‌ಮಲ್ಲಿಕಾ ಹಾಡಿನಲ್ಲಿ ಮಿಂಚಿದ್ದಾರೆ.

ಸರಳ ಪ್ರೇಮಕಥೆ
ಸರಳ ಪ್ರೇಮಕಥೆ

ವಿನಯ್ ರಾಜ್​ಕುಮಾರ್ ಆತಿಷಯ ಎಂಬ ಪಾತ್ರದಲ್ಲಿ ‌ನಟಿಸಿದ್ದು, ಅವರಿಗೆ ಜೋಡಿಯಾಗಿ ಮಲ್ಲಿಕಾ ಸಿಂಗ್ ಹಾಗೂ ಸ್ವಾತಿಷ್ಠಾ ಕೃಷ್ಣನ್ ಅಭಿನಯಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಧುಕೋಕಿಲಾ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಸರಳ ಪ್ರೇಮಕಥೆಗೆ ಮೈಸೂರು ರಮೇಶ್ ನಿರ್ಮಾಣ ಹಣ ಹಾಕಿದ್ದಾರೆ.

  • " class="align-text-top noRightClick twitterSection" data="">

ಒಂದು ಸರಳ ಪ್ರೇಮಕಥೆಗೆ ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ. ಸದ್ಯ ಟೀಸರ್ ಹಾಗೂ ಹಾಡುಗಳಿಂದ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರೋ ಒಂದು ಸರಳ ಪ್ರೇಮಕಥೆ ಚಿತ್ರ ದೊಡ್ಮನೆ ಕುಡಿ ವಿನಯ್​ಗೆ ಸಕ್ಸಸ್ ತಂದು ಕೊಡುವ ಸೂಚನೆ‌ ಸಿಗ್ತಾ ಇದೆ. ಇದೇ ಫೆಬ್ರವರಿ 8ಕ್ಕೆ ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ.

ವಿನಯ್ ರಾಜ್​ಕುಮಾರ್
ವಿನಯ್ ರಾಜ್​ಕುಮಾರ್

ಇದನ್ನೂ ಓದಿ: 250 ಕೋಟಿ ದಾಟಿದ 'ಫೈಟರ್':​ ಸಿನಿಮಾದ ಒಂದು ವಾರದ ಕಲೆಕ್ಷನ್​ ಮಾಹಿತಿ ಇಲ್ಲಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.