ETV Bharat / entertainment

ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಮಧ್ಯಂತರ' ಕಿರುಚಿತ್ರ ಮೆಚ್ಚಿದ ಹಿರಿಯ ನಟಿ ಜಯಮಾಲ - Jayamala on Madhyantara

author img

By ETV Bharat Karnataka Team

Published : 3 hours ago

ದಿನೇಶ್ ಶೆಣೈ ಅವರು ರಚಿಸಿ, ನಿರ್ದೇಶಿಸಿರುವ ಮಧ್ಯಂತರ' ಎಂಬ ಅದ್ಭುತ ಕಿರುಚಿತ್ರವನ್ನು ಇತ್ತೀಚೆಗೆ ಪ್ರದರ್ಶನ ಮಾಡಲಾಯಿತು. ಕಿರುಚಿತ್ರವನ್ನು ಹಿರಿಯ ನಟಿ ಜಯಮಾಲ‌ ವೀಕ್ಷಿಸಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌.

'Madhyantara' special show
'ಮಧ್ಯಂತರ' ಕಿರುಚಿತ್ರ ಪ್ರದರ್ಶನದಲ್ಲಿ ನಟಿ ಜಯಮಾಲ (ETV Bharat)

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ನಾನ್ ಫೀಚರ್ ಫಿಲಂ ವಿಭಾಗದ ಪ್ರಶಸ್ತಿಗೆ ಭಾಜನವಾಗಿರುವ 'ಮಧ್ಯಂತರ' ಎಂಬ ಅದ್ಭುತ ಕಿರುಚಿತ್ರವನ್ನು ಹಿರಿಯ ನಟಿ ಜಯಮಾಲ‌ ವೀಕ್ಷಿಸಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌. ದಿನೇಶ್ ಶೆಣೈ ಅವರು ರಚಿಸಿ, ನಿರ್ದೇಶಿಸಿರುವ ಈ ಕಿರುಚಿತ್ರವನ್ನು ಇತ್ತೀಚೆಗೆ ಪ್ರದರ್ಶನ ಮಾಡಲಾಯಿತು. 36 ನಿಮಿಷದ ಕಿರುಚಿತ್ರಕ್ಕೆ ನಿರ್ದೇಶಕ ದಿನೇಶ್ ಶೆಣೈ ಹಾಗೂ ಸಂಕಲನಕಾರ ಸುರೇಶ್ ಅರಸ್ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ನಿರ್ದೇಶಕ ದಿನೇಶ್ ಶೆಣೈ, ನನಗೂ ಚಿತ್ರರಂಗಕ್ಕೂ 27 ವರ್ಷಕ್ಕೂ ಮೀರಿದ‌ ನಂಟು. ಆದರೆ ಈ ಕಥೆ ಹೊಳದಿದ್ದು ಕೋವಿಡ್​ ಸಂದರ್ಭದಲ್ಲಿ. ಹಿರಿಚಿತ್ರ ಮಾಡುವ ಮುನ್ನ ಮೊದಲು ಈ ಕಿರುಚಿತ್ರ ಮಾಡೋಣ ಅಂದುಕೊಂಡೆ. ಇದು ಜನರಿಗೆ ಹಿಡಿಸಿದರೆ, ಮುಂದೆ ಚಲನಚಿತ್ರ ಮಾಡೋಣ. ಆಗ ನಿರ್ಮಾಪಕರು ಸಿಗುತ್ತಾರೆ ಎಂಬ ಉದ್ದೇಶದಿಂದ ಕಿರುಚಿತ್ರ ಮಾಡಲು ಮುಂದಾದೆ. ಈ ಕಿರುಚಿತ್ರವನ್ನು ನೋಡಿದ ದಯಾಳ್ ಪದ್ಮನಾಭನ್‌ ಅವರು ಪನೋರಮಾಗೆ ಕಳುಹಿಸಲು ಸಲಹೆ ನೀಡಿದರು. ಹಾಗೇ, ಡಿಸೆಂಬರ್ ಒಳಗೆ ಸೆನ್ಸಾರ್ ಮಾಡಿಸಿದರೆ ರಾಷ್ಟ್ರಪ್ರಶಸ್ತಿಗೂ ಕಳುಹಿಸಬಹುದು ಎಂದು ಮತ್ತೊಬ್ಬ ಸ್ನೇಹಿತರು ಹೇಳಿದರು. ಅದೇ ರೀತಿ ಕಳುಹಿಸಲಾಯಿತು. ಫೀಚರ್ ವಿಭಾಗದಲ್ಲಿ ನಮ್ಮ "ಮಧ್ಯಂತರ"ಕ್ಕೆ ಎರಡು ಪ್ರಶಸ್ತಿಗಳು ಬಂದಿವೆ. ಈ ಸಂದರ್ಭ ನನ್ನ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.

'Madhyantara' film team
ರಾಷ್ಟ್ರಪ್ರಶಸ್ತಿಗೆ ಭಾಜನವಾದ 'ಮಧ್ಯಂತರ' (ETV Bharat)

"ಮಧ್ಯಂತರ" 1976ರಿಂದ 85ರವರೆಗಿನ ಕಾಲಘಟ್ಟದ ಕಥೆ. 11 ದಿನಗಳ ಚಿತ್ರೀಕರಣ ಮಾಡಲಾಗಿದೆ. ನಿರ್ಮಾಪಕ ಮಾಣಿಕ್ ಚಂದ್ ಅವರು ಸಂದರ್ಶನವೊಂದರಲ್ಲಿ ಹೇಳಿದ ಮಾತೇ ನನ್ನ "ಮಧ್ಯಂತರ"ಕ್ಕೆ ಸ್ಪೂರ್ತಿ. ಮುಂದಿನ ದಿನಗಳಲ್ಲಿ ಇದೇ ಕಥೆಯನ್ನು ಮುಂದುವರೆಸಿ ಹಿರಿತೆರೆಯಲ್ಲಿ ಸಿನಿಮಾ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.

ಇಂಥ ಅದ್ಭುತ ಕಥೆಯನ್ನು ಕೆಲವೇ ನಿಮಿಷಗಳಲ್ಲಿ ಹೇಳುವುದು ಸುಲಭವಲ್ಲ. ದಿನೇಶ್ ಶೆಣೈ ಅವರು ಆ ಪ್ರಯತ್ನ ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ಪಡೆದು ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ‌. ಅವರಿಗೆ ಹಾಗೂ ತಂಡಕ್ಕೆ ಅಭಿನಂದನೆ ಎಂದು ತಿಳಿಸಿದರು ನಟಿ ಜಯಮಾಲ.

'Madhyantara' special show
'ಮಧ್ಯಂತರ' ಮೆಚ್ಚಿದ ನಟಿ ಜಯಮಾಲ (ETV Bharat)

ಇದನ್ನೂ ಓದಿ: 3 ದಿನಕ್ಕೆ 300 ಕೋಟಿ ಕಲೆಕ್ಷನ್​ ಮಾಡಿದ 'ದೇವರ' ಮೊದಲ ಸೋಮವಾರ ಗಳಿಸಿದ್ದೆಷ್ಟು ಗೊತ್ತಾ? - Devara Collection Day 4

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು " ಮಧ್ಯಂತರ" ತಂಡಕ್ಕೆ ಶುಭಾಶಯ ತಿಳಿಸಿ, ಮುಖ್ಯಮಂತ್ರಿಗಳ ಬಳಿ ಚಿತ್ರರಂಗಕ್ಕೆ ಅನುಕೂಲವಾಗಲಿರುವ ವಿಷಯಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದರು.

ಇದನ್ನೂ ಓದಿ: 'ಭೈರಾದೇವಿ' ಶೋನಲ್ಲಿ ಪ್ರೇಕ್ಷಕಿ ಮೈ ಮೇಲೆ ಬಂತು ದೇವರು?: ಹತ್ತಾರು ಮಂದಿ ಹಿಡಿದರೂ ಬಗ್ಗದ ಮಹಿಳೆಯ ವಿಡಿಯೋ ಇಲ್ಲಿದೆ - Bhairadevi

ನನ್ನ 50 ವರ್ಷಗಳ ಸಿನಿ ಜರ್ನಿಯಲ್ಲಿ ಮಾಧ್ಯಮ ನೀಡಿರುವ ಪ್ರೋತ್ಸಾಹ ಅಪಾರ. ಅವರಿಗೆ ಈ ಸಂದರ್ಭದಲ್ಲಿ ವಿಶೇಷ ಧನ್ಯವಾದ ತಿಳಿಸುವುದಾಗಿ ಎಂದು ಸಂಕಲನಕಾರ ಸುರೇಶ್ ಅರಸ್ ತಿಳಿಸಿದರು. ಈ ಸಂದರ್ಭ ಕಿರುಚಿತ್ರದಲ್ಲಿ ನಟಿಸಿರುವ ವೀರೇಶ್, ರಮೇಶ್ ಪಂಡಿತ್ ಹಾಗೂ ನಟಿ ನಿಖಿತ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.