ETV Bharat / entertainment

ಯಶಸ್ವಿ 25 ದಿನ ಪೂರೈಸಿದ 'ಬ್ಲಿಂಕ್': ನನ್ನ ಪಾಲಿಗೆ ಲಕ್ಕಿ ಸಿನಿಮಾ ಎಂದ ನಟಿ‌ ಚೈತ್ರಾ ಆಚಾರ್ - Blink Movie - BLINK MOVIE

ಇತ್ತೀಚೆಗೆ ವಿಭಿನ್ನ ನಿರೂಪಣಾ ಶೈಲಿಯಿಂದ ಗಮನ ಸೆಳೆದ 'ಬ್ಲಿಂಕ್'​ ಸಿನಿಮಾ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ.

Etv Bharat
Etv Bharat
author img

By ETV Bharat Karnataka Team

Published : Apr 8, 2024, 12:36 PM IST

ಸದ್ಯ ಕನ್ನಡ ಚಿತ್ರರಂಗದ ಪರಿಸ್ಥಿತಿ ಬದಲಾಗಿದೆ. ಸಿನಿಮಾ ಮಾಡುವುದಕ್ಕಿಂತ ಜನರಿಗೆ ಅದನ್ನು ತಲುಪಿಸುವುದೇ ದೊಡ್ಡ ಸವಾಲಾಗಿದೆ. ಯಾಕೆಂದರೆ, ಇತ್ತೀಚೆಗೆ ಥಿಯೇಟರ್​ಗಳತ್ತ ಜನರು ಸುಳಿಯುತ್ತಿಲ್ಲ. ಇವೆಲ್ಲ ಸವಾಲುಗಳ ನಡುವೆಯೂ ಚಿತ್ರವೊಂದು 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಆ ಕೀರ್ತಿಗೆ ಭಾಜನವಾಗಿರುವುದು 'ಬ್ಲಿಂಕ್' ಸಿನಿಮಾ.

ಸ್ಟಾರ್ ಹೀರೋ ಸಿನಿಮಾಗಳ ಅಬ್ಬರದ ನಡುವೆಯೂ ಮಾರ್ಚ್ 8ರಂದು ತೆರೆಗೆ ಬಂದ 'ಬ್ಲಿಂಕ್' ಸಿನಿಮಾಗೀಗ 25 ದಿನಗಳ ಸಂಭ್ರಮ. ಈ ಬಗ್ಗೆ ಚಿತ್ರತಂಡವು ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡಿದೆ. ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ''ಬಹಳಷ್ಟು ಕನಸುಗಳನ್ನು ಇಟ್ಟುಕೊಂಡು ಮಾಡಿದ ಪ್ರಾಜೆಕ್ಟ್ ಇದು. ಮುಖ್ಯವಾಗಿ ಕೋರ್ ಟೀಂ ಥಿಯೇಟರ್ ಹಿನ್ನೆಲೆಯಿಂದ ಬಂದಿರುವಂತಹದ್ದು. ಸಿನಿಮಾ ಮಾಡುವಾಗ ಸಾಕಷ್ಟು ಸಂದೇಹವಿತ್ತು. ಜನ ಈ ರೀತಿಯ ವಿಷಯವನ್ನು ಸ್ವೀಕಾರ ಮಾಡ್ತಾರಾ? ಎಂದು ಅನಿಸಿತ್ತು. ನಾವು ಸಿನಿಮಾ ಮುಗಿಸಿಕೊಂಡ ಬಳಿಕ ಪ್ರೆಸೆಂಟ್ ಮಾಡುತ್ತೀರಾ ಎಂದು ಯಾವ ಡಿಸ್ಟ್ರಿಬ್ಯೂಷನ್ ಕಂಪನಿಗೆ ಕೇಳಿದರೂ, ಅವರದಕ್ಕೆ ಆಗುತ್ತಾ ಇದು ಎಂದು ಹಿಂದೇಟು ಹಾಕಿದರು. ಆದರೆ, ಈಗ ಸಿನಿಮಾ 25 ದಿನಗಳನ್ನು ಪೂರೈಸಿದೆ. ಈ ಚಿತ್ರವನ್ನು ಜನರು ಅಪ್ಪಿ, ಒಪ್ಪಿದ್ದಾರೆ. ಹೀಗಾಗಿ, ಈ ರೀತಿಯ ಹೊಸ ಸಿನಿಮಾಗಳು ಬರುವುದು ಮುಖ್ಯ. 25 ದಿನ ಬ್ಲಿಂಕ್ ಪೂರ್ಣಗೊಳಿಸಿರುವುದು ಖುಷಿ ಆಗಿದೆ. 'ಬ್ಲಿಂಕ್' ನನ್ನ ಪ್ರಕಾರ ಇನ್ನೂ ಹೆಚ್ಚಿನ ಜನಕ್ಕೆ ಸೇರಬೇಕಾದ ಸಿನಿಮಾ. ಮುಂದಿನ ದಿನಗಳಲ್ಲಿ ಯಾವುದೇ ಒಂದು ಸೈನ್ಸ್ ಫಿಕ್ಷನ್ ಸಿನಿಮಾ ಆಗಬೇಕೆಂದರೆ ಅದಕ್ಕೆ ಇದು ಮಾದರಿಯಾಗುತ್ತದೆ'' ಎಂದರು.

blink
ಬ್ಲಿಂಕ್ ಚಿತ್ರ ತಂಡ

ನಟಿ ಚೈತ್ರಾ ಆಚಾರ್ ಮಾತನಾಡಿ, ''ಬ್ಲಿಂಕ್ ನನ್ನ ಪಾಲಿಗೆ ಲಕ್ಕಿ ಸಿನಿಮಾ. ಈ ಚಿತ್ರದ ಶೂಟ್ ಮಾಡುವಾಗಲೇ 'ಸಪ್ತ ಸಾಗರದಾಚೆ ಎಲ್ಲೋ' ತಂಡದಿಂದ ಕರೆ ಬಂತು. ಹೀಗಾಗಿ ಈ ಚಿತ್ರ ತುಂಬಾ ಲಕ್ಕಿ ನನಗೆ. ಕಥೆ ಹೇಳಲು ಬಂದಾಗ ಶ್ರೀನಿಧಿ ಬೆಂಗಳೂರು ಅವರು ತುಂಬಾ ಕ್ಲಾರಿಟಿಯಾಗಿ ಹೇಳಿದರು. ಅವರು ಮಾಡಿದ ಒಂದು ಶಾರ್ಟ್ ಫಿಲ್ಮಂ ತೋರಿಸಿದರು. ಬಳಿಕ ನಾನು ಚಿತ್ರ ಮಾಡಲು ಒಪ್ಪಿಕೊಂಡೆ. ಈ ಸಿನಿಮಾದ ಭಾಗವಾಗಿರುವುದು ಖುಷಿ ಕೊಟ್ಟಿದೆ. ಚಿತ್ರ ಜನರಿಗೂ ತಲುಪಿದೆ. ನಿರ್ಮಾಪಕರು ಸಿನಿಮಾಗೆ ದುಡ್ಡು ಹಾಕಿ ಸುಮ್ಮನಾಗದೇ, ಫೀಲ್ಡ್​​ಗೆ ಇಳಿದು ಅವರೇ ಡಿಸ್ಟ್ರಿಬ್ಯೂಷನ್ ತೆಗೆದುಕೊಂಡು ಥಿಯೇಟರ್​​ನವರು ಕೊಡುವ ಶೋ ತೆಗೆದುಕೊಂಡಿದ್ದು, ಅವು ಹೌಸ್​​ಫುಲ್ ಆದವು. ಇದು ಕಂಟೆಂಟ್ ಗೆದ್ದಿರುವ ಪವರ್ ಎನ್ನಬಹುದು'' ಎಂದರು.

''ಚಲನಚಿತ್ರರಂಗಕ್ಕೆ ನಾನು ಹೊಸಬ. ಬೆರಗು ಕಣ್ಣಿನಿಂದ ನಾನು ಈ ಕಲಾ ಪ್ರಪಂಚವನ್ನು ನೋಡುತ್ತಿದ್ದೇನೆ. ಮೊದಲ ಚಿತ್ರವನ್ನು ನಾವು ಪ್ರಾರಂಭ ಮಾಡಿದಾಗ ನನಗೆ ಇಷ್ಟೊಂದು ನಂಬಿಕೆ ಇರಲಿಲ್ಲ. ಇಷ್ಟು ವಿಸ್ತಾರವಾಗಿ ಪ್ರೇಕ್ಷಕರಿಗೆ ತಲುಪುತ್ತದೆ ಎಂದುಕೊಂಡಿರಲಿಲ್ಲ. 25 ದಿನಗಳನ್ನು ಪೂರೈಸಿ 50 ದಿನದತ್ತ ದಾಪುಗಾಲು ಇಡುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಪ್ರೇಕ್ಷಕರು ಹಾಗೂ ಮಾಧ್ಯಮಗಳು. ಹೊಸಬರ ಕನಸಿಗೆ ಬೆನ್ನುತಟ್ಟಿದ ಪ್ರತಿಯೊಬ್ಬರಿಗೆ ಧನ್ಯವಾದ'' ಎಂದು ನಿರ್ದೇಶಕ ಶ್ರೀನಿಧಿ ಬೆಂಗಳೂರು ಸಂತಸ ಹಂಚಿಕೊಂಡರು.

''ರವಿಚಂದ್ರ ಎಜೆ, ಮೂಲತಃ ಗುಲ್ಬರ್ಗದವರು.‌‌ ಸಿನಿಮಾ ಶೂಟಿಂಗ್​​ಗೂ‌ ಮೊದಲೇ ಪ್ರತ್ಯೇಕವಾಗಿ ಟೀಸರ್ ಶೂಟ್ ಮಾಡಿದ್ದೆವು. ಟೀಸರ್ ಚಿತ್ರೀಕರಣ ಮಾಡುವ ಮುನ್ನ ಮೇನ್ ಸ್ಟ್ರೀಮ್ ನಟ, ನಟಿಯರು ನಮ್ಮ ಸಿನಿಮಾದಲ್ಲಿ ಕೆಲಸ ಮಾಡ್ತಾರಾ ಎಂಬ ಬಗ್ಗೆ ಚರ್ಚೆ ನಡೆಸಿದೆವು. ಅದಾಗಲೇ ನಿಧಿ ಅವರು ದೀಕ್ಷಿತ್ ಸರ್​​ಗೆ ಕಥೆ ಹೇಳಿದ್ದರು. ಸರ್​​ಗೆ ಕಥೆ ಇಷ್ಟವಾಯ್ತು. ಹೀಗೆ ಪಯಣ ಶುರುವಾಯ್ತು. ಆ ಜರ್ನಿಯು ಇಲ್ಲಿಗೆ ಬಂದು ತಲುಪಿದೆ, ಖುಷಿ ಇದೆ'' ಎಂದು ಶ್ರೀನಿಧಿ ಹೇಳಿದರು.

blink
ಬ್ಲಿಂಕ್ ಚಿತ್ರ ತಂಡ

ಬ್ಲಿಂಕ್ ಸಿನಿಮಾಕ್ಕೆ ಚಿತ್ರರಂಗದ ಕೆಲ ಪ್ರಮುಖ ನಟ, ನಟಿಯರು ಸಹ ಬೆಂಬಲ ವ್ಯಕ್ತಪಡಿಸಿದ್ದರು. ಉತ್ತಮ ಪ್ರತಿಕ್ರಿಯೆ, ಸಿನಿಮಾದ ಬಗ್ಗೆ ಕೇಳಿ ಬಂದ ವಿಮರ್ಶೆಗಳನ್ನು ಗಮನಿಸಿ ಸ್ವತಃ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಬ್ಲಿಂಕ್’ ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಇನ್ನುಳಿದಂತೆ ಸಿಂಪಲ್ ಸುನಿ, ನವೀನ್ ಶಂಕರ್, ರುಕ್ಮಿಣಿ ವಸಂತ್ ಹಾಗೂ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು ಬ್ಲಿಂಕ್​​ಗೆ ಬಹುಪರಾಕ್ ಎಂದಿದ್ದರು.

ಬ್ಲಿಂಕ್ ಚಿತ್ರಕ್ಕೆ ರವಿಚಂದ್ರ ಎ.ಜೆ. ಬಂಡವಾಳ ಹೂಡಿದ್ದಾರೆ. ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಭಿನ್ನವಾದ ಕತೆಯ ಜೊತೆಗೆ ಟೈಮ್ ಲೂಪ್, ಟೈಮ್ ಟ್ರಾವೆಲ್ ಕಾನ್ಸೆಪ್ಟ್ ಹೊಂದಿರುವ ಸಿನಿಮಾ ಇದಾಗಿದೆ. ಬ್ಲಿಂ ವಿದೇಶದಲ್ಲಿಯೂ ತೆರೆಕಂಡಿದ್ದು, ಆಸ್ಟ್ರೇಲಿಯಾ, ಯುಎಸ್​​ಎ, ಯುಕೆ ಹಾಗೂ ಐರ್ಲೆಂಡ್​​ನಲ್ಲಿಯೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಕೆನಡಾ, ಜರ್ಮನಿ ಹಾಗೂ ಮಲೇಷ್ಯಾದಲ್ಲಿಯೂ ಬಿಡುಗಡೆಯಾಗಿದೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್​​ ಕಥೆ ಕೇಳಿ ಮೆಚ್ಚಿಕೊಂಡ ಕೊನೆ ಚಿತ್ರ 'O2': ಇಂಟ್ರೆಸ್ಟಿಂಗ್​ ವಿಚಾರ ಹಂಚಿಕೊಂಡ ಸಿನಿತಂಡ - O2 Movie

ETV Bharat Logo

Copyright © 2025 Ushodaya Enterprises Pvt. Ltd., All Rights Reserved.